»   » 'ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಗೆ ಹೊಸ ಹೆಸರು.!

'ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಗೆ ಹೊಸ ಹೆಸರು.!

Posted By:
Subscribe to Filmibeat Kannada

ಯೂಟ್ಯೂಬ್ ಸ್ಟಾರ್, ಬ್ಯಾನ್ ಸ್ಟಾರ್, ಬ್ಲೂ ಸ್ಟಾರ್....ಅಂತೆಲ್ಲಾ ಅಭಿಮಾನಿಗಳು ಹುಚ್ಚ ವೆಂಕಟ್ ಗೆ ನಾಮಕರಣ ಮಾಡಿದ್ದಾರೆ. ಇವೆಲ್ಲದರ ಜೊತೆಗೆ 'ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಗೆ ಮನೆ ಸದಸ್ಯರು ಹೊಸ ಹೆಸರು ಕೊಟ್ಟಿದ್ದಾರೆ.

ಅದೇನು ಅಂತಹ ಹೆಸರು ಅಂದ್ರೆ, 'ಮಾಣಿಕ್ ಬಾಷಾ'..! ಈ ಹೆಸರು ಕೇಳ್ತಿದ್ದ ಕೂಡಲೆ ನಿಮಗೆ ಸೂಪರ್ ಸ್ಟಾರ್ ರಜನಿಕಾಂತ್ ರವರ ಬಾಷಾ ಸಿನಿಮಾ ನೆನಪಿಗೆ ಬರಬಹುದು.

huccha-venkat

ಹುಚ್ಚ ವೆಂಕಟ್ ಸ್ಟೈಲ್ ನೋಡಿ, ಮನೆ ಸದಸ್ಯರು ಅವರಿಗೆ 'ಮಾಣಿಕ್ ಬಾಷಾ' ಅಂತ ಹೆಸರು ಇಟ್ಟಿದ್ದಾರಾ? ನಮಗೆ ಗೊತ್ತಿಲ್ಲ. ಆದ್ರೆ, ಹುಚ್ಚ ವೆಂಕಟ್ 'ಬದುಕು ಜಟಕಾ ಬಂಡಿ' ಟಾಸ್ಕ್ ನಲ್ಲಿ ಬಂಡಿ ಎಳೆಯುತ್ತಿದ್ದಾಗ ಮನೆ ಸದಸ್ಯರು ''ಬಾಷಾ...ಬಾಷಾ...'' ಅಂತ ಕೂಗು ಹಾಕುತ್ತಿದ್ದರು.

ಇದುವರೆಗೂ ಟಾಸ್ಕ್ ಮಾಡದ ಹುಚ್ಚ ವೆಂಕಟ್, ನಿನ್ನೆ ಮಾತ್ರ 'ಬದುಕು ಜಟಕಾ ಬಂಡಿ' ಟಾಸ್ಕ್ ನಲ್ಲಿ ಬೆವರು ಹರಿಸಿ 'ಬಿಗ್ ಬಾಸ್' ನಿಂದ ಭೇಷ್ ಅನಿಸಿಕೊಂಡರು. ಚಿಕನ್ ಬಿರಿಯಾನಿ ತಿಂದು ಚಪ್ಪರಿಸಿದರು. [ಹುಚ್ಚ ವೆಂಕಟ್ ಗೆ 'ನನ್ ಮಗಂದ್' ಅಂದ ನಟಿ ಶ್ರುತಿ.!]

'ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ನೀಡುತ್ತಿರುವ ಮನರಂಜನೆಗೆ ನೀವು ಫಿದಾ ಆಗಿದ್ದರೆ, ಒಮ್ಮೆ 'ಮಾಣಿಕ್ ಬಾಷಾ'ಗೆ ಜೈ ಅಂದುಬಿಡಿ....

English summary
YouTube Star Huccha Venkat has been nicknamed as 'Manik Basha' by Bigg Boss house mates.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada