ಈ ವಾರ ನಿಮ್ಮ ಮನೆಗೆ ಬರ್ತಿದ್ದಾರೆ 'ಮಾಸ್ ಲೀಡರ್' ಶಿವಣ್ಣ
ಶಿವರಾಜ್ ಕುಮಾರ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ಮಾಸ್ ಲೀಡರ್' ನೋಡುವ ಅವಕಾಶ ನಿಮಗೆ ಮತ್ತೆ ಸಿಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಿದ್ದ 'ಮಾಸ್ ಲೀಡರ್' ಈಗ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.
ಇದೇ ನವಂಬರ್ 26ರಂದು ಸಂಜೆ 6 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ ಸೆಂಚುರಿ ಸ್ಟಾರ್ ಎಂಟ್ರಿ ಕೊಡ್ತಿದ್ದು, ಈ ವೀಕೆಂಡ್ ನಲ್ಲಿ ನಿಮ್ಮ ಮನೆ ಮಂದಿಗೆಲ್ಲಾ ಮಸ್ತ್ ಮನರಂಜನೆ ಸಿಗಲಿದೆ.

ಬಾಂಗ್ಲಾದೇಶದಿಂದ ಅನಧಿಕೃತವಾಗಿ ಒಳಬರುವ ಉಗ್ರಗಾಮಿಗಳನ್ನ ಓರ್ವ ಕಮ್ಯಾಂಡೋ ಹೇಗೆ ಮಟ್ಟ ಹಾಕಿ ದೇಶ ಕಾಯುತ್ತಾನೆ ಎಂಬುದು ಚಿತ್ರದ ಕಥೆ. ಶಿವರಾಜ್ ಕುಮಾರ್ ಆರ್ಮಿ ಆಫೀಸರ್ ಪಾತ್ರದಲ್ಲಿ ಮಿಂಚಿದ್ದು, ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಲಾಗಿದೆ.
ಅಂದ್ಹಾಗೆ, ಶಿವರಾಜ್ ಕುಮಾರ್ ಗೆ ಈ ಚಿತ್ರದಲ್ಲಿ ಪ್ರಣೀತಾ ಜೋಡಿಯಾಗಿದ್ದು, ವಿಜಯ ರಾಘವೇಂದ್ರ, ಗುರುರಾಜ್ ಜಗ್ಗೇಶ್, ಲೂಸ್ ಮಾದ ಯೋಗೇಶ್, ಶರ್ಮಿಳಾ ಮಾಂಡ್ರೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ನರಸಿಂಹ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ವೀರ್ ಸಮರ್ಥ್ ಸಂಗೀತ ನೀಡಿದ್ದರು.
More from Filmibeat
English summary
Kannada Super hit Movie Mass Leader will telecast in Udaya tv on November 26th. ಮಾಸ ಲೀಡರ್ ಸಿನಿಮಾ ಇದೇ ಮೊದಲ ಭಾರಿಗೆ ಉದಯ ಟಿವಿಯಲ್ಲಿ ನವೆಂಬರ್ 26 ರಂದು ಪ್ರಸಾರವಾಗುತ್ತಿದೆ.


Click it and Unblock the Notifications











