For Quick Alerts
  ALLOW NOTIFICATIONS  
  For Daily Alerts

  ತಮನ್ನಾಗೆ ಸಂಭಾವನೆ ದೋಖಾ: ಮೊಕದ್ದಮೆ ಹೂಡುವೆ ಎಂದ ನಟಿ

  |

  16 ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ನಟಿ ತಮನ್ನಾ ಇತ್ತೀಚಿಗೆ ಸಿನಿಮಾಗಳಲ್ಲಿ ವಿಶೇಷ ಹಾಡುಗಳಲ್ಲಿ ಕಾಣಿಸಿಕೊಳ್ಳುವುದು, ಟಿವಿ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

  ಇತ್ತೀಚೆಗೆ ಮಾಸ್ಟರ್ ಶೆಫ್ ತೆಲುಗು ಶೋನಲ್ಲಿ ನಟಿ ತಮನ್ನಾ ನಿರೂಪಕಿ ಆಗಿದ್ದರು. ಆದರೆ ಅದೇಕೋ ಹಠಾತ್ತನೆ ನಿರೂಪಕಿ ಸ್ಥಾನದಿಂದ ತಮನ್ನಾರನ್ನು ತೆಗೆದು ಆ ಜಾಗಕ್ಕೆ ನಟಿ ಅನಸೂಯಾ ಭಾರದ್ವಾಜ್ ಅನ್ನು ಸೇರಿಸಿಕೊಳ್ಳಲಾಯಿತು.

  ಸನ್ ನೆಟ್‌ವರ್ಕ್ಸ್‌ನ ಜೆಮಿನಿ ಟಿವಿಯಲ್ಲಿ ಈ ಅಡುಗೆ ಶೋ ಪ್ರಸಾರವಾಗುತ್ತಿದ್ದು, ಈ ವರೆಗೆ 20 ಎಪಿಸೋಡ್‌ಗಳನ್ನು ತಮನ್ನಾ ನಿರೂಪಣೆ ಮಾಡಿದ್ದಾರೆ. ತಮನ್ನಾರ ನಿರೂಪಣಾ ಶೈಲಿ ಹಾಗೂ ಅವರು ಕಾರ್ಯಕ್ರಮಕ್ಕೆ ತೊಡುತ್ತಿದ್ದ ಉಡುಗೆಗಳು ಜನಪ್ರಿಯತೆ ಗಳಿಸಿದ್ದವು.

  ತಮನ್ನಾರನ್ನು ಹಠಾತ್ತನೆ ಹೊರಗಟ್ಟಿ ಅನಸೂಯಾ ಅವರನ್ನು ರಿಯಾಲಿಟಿ ಶೋನ ನಿರ್ಮಾಣ ಸಂಸ್ಥೆ ಇನ್ನೋವೇಟಿವ್ ಫಿಲಂ ಅಕಾಡೆಮಿ ಹೊಸ ನಿರೂಪಕಿಯಾಗಿ ತಂದಿದೆ. ಆದರೆ ತಮನ್ನಾರಿಗೆ ನೀಡಬೇಕಾದ ಸಂಭಾವನೆ ನೀಡದೆ ಅವರನ್ನು ಶೋನಿಂದ ತೆಗೆದು ಹಾಕಲಾಗಿದೆ.

  ''ಮಾಸ್ಟರ್‌ಶೆಫ್ ತೆಲುಗು ರಿಯಾಲಿಟಿ ಶೋನ ನಿರ್ಮಾಣ ಸಂಸ್ಥೆ ಸಂಭಾವನೆ ಬಾಕಿ ಉಳಿಸಿಕೊಂಡಿದ್ದು, ವೃತ್ತಿಪರವಾಗಿ ನಡೆದುಕೊಂಡಿಲ್ಲ'' ಎಂದು ತಮನ್ನಾರ ವಕೀಲ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಆರೋಪಿಸಲಾಗಿದೆ.

  ''ತಮನ್ನಾಗೆ ಹಲವು ಅವಕಾಶಗಳು ಇದ್ದವು. ಆದರೆ ಅವರು ಅದನ್ನು ತ್ಯಜಿಸಿ ಈ ಶೋ ಮಾಡಲು ಒಪ್ಪಿಕೊಂಡರು. ಈಗ ಶೋನಿಂದ ತಮನ್ನಾರನ್ನು ಕೈಬಿಟ್ಟಿಲ್ಲದೆ, ನಿರ್ಮಾಣ ಸಂಸ್ಥೆಯು ತಮನ್ನಾರೊಂದಿಗೆ ಹಠಾತ್ತನೆ ಸಂಪರ್ಕ ಕಡಿದುಕೊಂಡಿತು. ಹಾಗಾಗಿ ತಮನ್ನಾರು ಕಾನೂನು ಸಮರಕ್ಕೆ ಮುಂದಾಗುವುದು ಅನಿವಾರ್ಯವಾಗಿದೆ'' ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

  ಮಾಸ್ಟರ್ ಶೆಫ್ ಕಾರ್ಯಕ್ರಮವು ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಒಟ್ಟಿಗೆ ಆರಂಭವಾಗಿತ್ತು. ತಮಿಳಿನಲ್ಲಿ ವಿಜಯ್ ಸೇತುಪತಿ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದರು. ಶೋನ ಚಿತ್ರೀಕರಣ ರಾಮನಗರದ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು.

  ತಮನ್ನಾ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ನಾಗಶೇಖರ್ ನಿರ್ದೇಶನದ 'ಗುರ್ತುಂದಾ ಸೀತಾಕಾಲಂ' ಸಿನಿಮಾದಲ್ಲಿ ತಮನ್ನಾ ನಟಿಸಿದ್ದು ಸಿನಿಮಾ ಬಹುತೇಕ ಮುಗಿದಿದೆ. ಇದು ಕನ್ನಡದ ಹಿಟ್ ಸಿನಿಮಾ 'ಲವ್‌ ಮಾಕ್ಟೆಲ್' ರೀಮೇಕ್. ಅದರ ಹೊರತಾಗಿ 'ದಟ್‌ ಈಸ್ ಮಹಾಲಕ್ಷ್ಮಿ', 'ಎಫ್‌3', 'ಕಾತ ಕರುಪ್ಪು', 'ಏನ್ ಎಂದ್ರು ಕದಲ್ ಎಂಬೆನ್' ಹಿಂದಿಯ 'ಭೋಲೆ ಚೂಡಿಯಾ', 'ಚೋರ್ ನಿಕಲ್‌ ಕೆ ಭಾಗ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Master chef Telugu reality show producers did not give remuneration to Tamannaah Bhatia. She is taking legal action against production company.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X