twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪನಿಗೆ ಚಾಲೆಂಜ್ ಹಾಕಿ ರಂಗಭೂಮಿಯ 'ಮಾಸ್ಟರ್' ಆದ ಹಿರಣ್ಣಯ್ಯ

    |

    ರಂಗಭೂಮಿ ದಿಗ್ಗಜ, ಮಾಸ್ಟರ್ ಹಿರಣ್ಣಯ್ಯ ಇಂದು ನಿಧನ ಹೊಂದಿದ್ದಾರೆ. ಅವರಿಲ್ಲದೆ ರಂಗ ವೇದಿಕೆ ಒಂಟಿಯಾಗಿದೆ. ಹಿರಣ್ಣಯ್ಯ ಅವರು ವಿಧಿವಶರಾದ ಹಿನ್ನಲೆ ಈ ಹಿಂದೆ ಜೀ ಕನ್ನಡ ವಾಹಿನಿಯ 'ವಿಕೇಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಆಡಿದ ಮಾತುಗಳು ಇಲ್ಲಿದೆ.

    ಮಾತಿಗೇ ಮಾಸ್ಟರ್. ಮನರಂಜನಾ ಕ್ಷೇತ್ರಕ್ಕೆ ಇವರನ್ನು ಕಂಡರೆ ಪುಳಕ, ಸಮಾಜಕ್ಕೆ ಅಂಟಿಕೊಂಡಿರುವ ಕೊಳಕಿಗೆ ಮಾತಲ್ಲೇ ಮದ್ದು ಅರಿದ, ಲಂಚಾವತಾರಕ್ಕೆ ನಾಟಕದ ಮೂಲಕವೇ ಭಯ ಹುಟ್ಟಿಸಿದ ರಂಗಸಿಂಹ ಎಂದು ಹಿನ್ನಲೆ ನೀಡುವ ಮೂಲಕ ರಮೇಶ್ ಅರವಿಂದ್ ಕಾರ್ಯಕ್ರಮಕ್ಕೆ ಹಿರಣ್ಣಯ್ಯ ಅವರನ್ನು ಸ್ವಾಗತಿಸಿದರು.

    ನಡುಬೀದಿ ನಾರಾಯಣ, ಭ್ರಷ್ಟಾಚಾರ, ಲಂಚಾವತಾರ ಎನ್ನುವ ಜನಪ್ರಿಯ ನಾಟಕಗಳ ರೂವಾರಿ, ನಾಟಕ ಅಕಾಡೆಮಿ, ಗುಬ್ಬಿ ವೀರಣ್ಣ, ರಾಜ್ಯೋತ್ಸವ ಹೀಗೆ ಹಲವು ಪಶಸ್ತಿಗಳನ್ನು ಪಡೆದುಕೊಂಡಿರುವ ಹಿರಣ್ಣಯ್ಯ ಎಂದಿನಂತೆ ಕಾರ್ಯಕ್ರಮದಲ್ಲಿ ತನ್ನ ಜೀವನದ ಘಟನೆಗಳನ್ನು ಮೆಲುಕು ಹಾಕಿದರು, ಕಣ್ಣೀರು ಹಾಕಿದರು. (ವೇಶ್ಯೆಯ ಮಗಳೆಂದು ಅವಮಾನ: ಉಮಾಶ್ರೀ)

    ತನ್ನ ಬಾಲ್ಯದ ಜೀವನವನ್ನು ನೆನಪಿಸಿಕೊಳ್ಳುತ್ತಾ ಹಿರಣ್ಣಯ್ಯ, ಕಲಾವಿದರಾಗಿದ್ದ ತಂದೆಯವರನ್ನು ಮದರಾಸು ಎವಿಎಂ ಸ್ಟುಡಿಯೋ ಕಂಪೆನಿಯ ಮಾಲೀಕರು ಕೆಲಸಕ್ಕೆ ಸೇರಿಸಿಕೊಂಡರು. ಆಗ ನನಗೆ ಮೂರು ವರ್ಷ, ಹಾಗಾಗಿ ನಾನು ಚೆನ್ನೈನಲ್ಲಿ ಬಾಲ್ಯದ ಜೀವನವನ್ನು ಕಳೆದೆ ಎಂದರು.

    ಕೆಲವು ವರ್ಷಗಳ ನಂತರ ಎರಡನೇ ಮಹಾಯುದ್ದ ಸಮಯದಲ್ಲಿ (1935 ರಿಂದ 1945ರ ಅವಧಿ) ಅಂದರೆ 1938ರ ಇಸವಿಗೆ ಮದರಾಸು ತೊರೆಯಬೇಕಾಗಿ ಬಂತು. ಮೈಸೂರಿನಲ್ಲಿರುವ ನನ್ನ ಅತ್ತೆಗೆ ನನ್ನ ನೋಡಿಕೊಳ್ಳುವ ಜವಾಬ್ದಾರಿಯನ್ನು ತಂದೆ ನೀಡಿದರು ಎಂದು ಹಿರಣ್ಣಯ್ಯ ತನ್ನ ಅಂದಿನ ಘಟನೆಯನ್ನು ನೆನಪಿಸಿಕೊಂಡರು. (ಮಾಸ್ಟರ್ ಹಿರಣ್ಣಯ್ಯ ಸಂದರ್ಶನ)

    ನನ್ನ ತಂದೆಗೆ ಇನ್ನೊಂದು ಸಂಬಂಧವಿತ್ತು, ಅದುವೇ ನನ್ನ ತಾಯಿಯ ಸಾವಿಗೆ ಕಾರಣವಾಯಿತು, ಮುಂದೆ ಓದಿ..

    ನನಗೆ ದುಡ್ಡಿನ ಮೌಲ್ಯದ ಅರಿವಿತ್ತು.

    ನನಗೆ ದುಡ್ಡಿನ ಮೌಲ್ಯದ ಅರಿವಿತ್ತು.

    ಮೈಸೂರಿನಲ್ಲಿ ಮನೆ ಮನೆಗೆ ಪೇಪರ್ ಹಾಕುತ್ತಿದ್ದೆ. ಆ ಸಮಯದಲ್ಲಿ ದಿನಕ್ಕೆ ಒಂದೂವರೆ ರೂಪಾಯಿ ಸಂಪಾದಿಸುತ್ತಿದ್ದೆ, ಅದನ್ನು ನನ್ನ ಅತ್ತೆಗೆ ನೀಡುತ್ತಿದ್ದೆ. ಜೊತೆಗೆ ನನಗೆ ವಿಪರೀತ ಸಿನಿಮಾ/ನಾಟಕ ನೋಡುವ ಚಟವಿತ್ತು. ಅದಕ್ಕೆ ಹಣ ಹೊಂದಿಸಲು ಇನ್ನಷ್ಟು ಕಷ್ಟ ಪಟ್ಟು ಹಣ ಹೊಂದಿಸುತ್ತಿದ್ದೆ. ಆ ಸಮಯದಲ್ಲೇ ನನಗೆ ದುಡ್ಡಿನ ಮೌಲ್ಯದ ಅರಿವಿತ್ತು ಎಂದು ಕಾರ್ಯಕ್ರಮದಲ್ಲಿ ಹಿರಣ್ಣಯ್ಯ ಹೇಳಿದರು.

    ನನ್ನ ತಂದೆಗೆ ಇನ್ನೊಂದು ಸಂಬಂಧವಿತ್ತು

    ನನ್ನ ತಂದೆಗೆ ಇನ್ನೊಂದು ಸಂಬಂಧವಿತ್ತು

    ಒಂದು ರೀತಿಯಲ್ಲಿ ನನ್ನ ತಾಯಿಯ ಸಾವಿಗೆ ತಂದೆಯೇ ಕಾರಣ. ಹೆಣ್ಣು ಏನು ಬೇಕಾದರೂ ಹಂಚಿಕೊಳ್ಳಬಲ್ಲಳು ಆದರೆ ಗಂಡನ ದೇಹವನ್ನಲ್ಲ. ಬಳ್ಳಾರಿಯಲ್ಲಿ ಶಾರದಮ್ಮ ಎನ್ನುವ ಹೆಂಗಸನ್ನು ತಂದೆ ಇಟ್ಟುಕೊಂಡಿದ್ದರು. ತನ್ನ ವೃತ್ತಿ ಜೀವನಕ್ಕಾಗಿ ತಂದೆ ಆಕೆಯನ್ನು ಮದುವೆಯಾದರು, ತಂದೆ ಮತ್ತು ಶಾರದಮ್ಮ ತಾರಾದಂಪತಿಯಾದರು - ಹಿರಣ್ಣಯ್ಯ

    ಸಂಸಾರ ಗುಟ್ಟು ವ್ಯಾಧಿ ರಟ್ಟಾಯಿತು

    ಸಂಸಾರ ಗುಟ್ಟು ವ್ಯಾಧಿ ರಟ್ಟಾಯಿತು

    ಇನ್ನೊಂದು ಸಂಬಂಧದ ವ್ಯಾಧಿ ಗುಟ್ಟನ್ನು ತಂದೆ ರಟ್ಟು ಮಾಡಬಾರದಿತ್ತು, ಇದೇ ಕೊರಗಿನಲ್ಲಿ ತಾಯಿ ಸೆಮಿ ಕೋಮಾಗೆ ಸೇರಿದಳು. ತಾಯಿಯನ್ನು ನೋಡಿಕೊಳ್ಳುತ್ತಿದ್ದ ನಾರಾಯಣ ಶೆಟ್ಟಿ ಎನ್ನುವ ವೈದ್ಯರು, ನಿಮ್ಮ ಪತ್ನಿ ಇನ್ನು ಹೆಚ್ಚುದಿನ ಬದುಕುವುದಿಲ್ಲ, ಆಕೆಯ ಕೊನೆಯ ಆಸೆ ಏನಾದರೂ ಇದ್ದರೆ ಪೂರೈಸಿ ಎಂದರು. ಅರಸಿನ, ಕುಂಕುಮ, ಹೂವನ್ನು ತಂದೆಯಿಂದ ಮುಡಿಸಿಕೊಂಡು ತಂದೆಯ ತೊಡೆಯಲ್ಲೇ ತಾಯಿ ಸಾವನ್ನಪ್ಪಿದರು - ಹಿರಣ್ಣಯ್ಯ.

    ಕಡೇ ಗಳಿಗೆಯಲ್ಲಿ ತಾಯಿ ನೋಡಬಾರದಿತ್ತು

    ಕಡೇ ಗಳಿಗೆಯಲ್ಲಿ ತಾಯಿ ನೋಡಬಾರದಿತ್ತು

    ತಾಯಿ ಮುಖವನ್ನು ಕಡೇ ಗಳಿಗೆಯಲ್ಲಿ ನೋಡಬಾರದಿತ್ತು, ತಾಯಿ ಸತ್ತ ಮೂರು ದಿನದ ನಂತರ ಎಸ್ಎಸ್ಎಲ್ಸಿ ಪರೀಕ್ಷೆ ಇತ್ತು. ನಾನು ಫಸ್ಟ್ ಕ್ಲಾಸಿನಲ್ಲಿ ಪಾಸಾಗ ಬೇಕೆನ್ನುವುದು ತಾಯಿಯ ಆಸೆಯಾಗಿತ್ತು. ಕಷ್ಟಪಟ್ಟು ಫಸ್ಟ್ ಕ್ಲಾಸಿನಲ್ಲಿ ಪಾಸಾದೆ. ಇದೇ ನನ್ನ ತಾಯಿಗೆ ಕೊಡಬಹುದಾದ ನನ್ನ ಕಾಣಿಕೆ ಎಂದು ಹಿರಣ್ಣಯ್ಯ ಕಣ್ಣೀರು ಸುರಿಸಿದರು.

    ಅಪ್ಪನಿಗೆ ನಾನು ನಾಟಕಕ್ಕೆ ಬರುವುದು ಇಷ್ಟವಿರಲಿಲ್ಲ

    ಅಪ್ಪನಿಗೆ ನಾನು ನಾಟಕಕ್ಕೆ ಬರುವುದು ಇಷ್ಟವಿರಲಿಲ್ಲ

    ಅಪ್ಪಗೆ ನಾನು ನಾಟಕದಲ್ಲಿ ಬರಬಾರದು ಎಂದಿತ್ತು. ಆದರೆ ನಾಟಕದಲ್ಲೇ ನನ್ನನ್ನು ತೊಡಗಿಸಿಕೊಂಡೆ. ಒಂದು ಬಾರಿ ನನ್ನ ಅಭಿನಯದ ಬಗ್ಗೆ ತಂದೆಯಿಂದಲೇ ಅವಮಾನಕ್ಕೀಡಾದೆ. ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡೆ. ತಂದೆ ತೀರಿಕೊಂಡ ಮೇಲೆ ಬೆಂಗಳೂರಿಗೆ ಬಂದೆ - ಹಿರಣ್ಣಯ್ಯ.

    ಶುರುವಿನಲ್ಲಿ ಪಡಬಾರದ ಕಷ್ಟಪಟ್ಟೆ

    ಶುರುವಿನಲ್ಲಿ ಪಡಬಾರದ ಕಷ್ಟಪಟ್ಟೆ

    ಬೆಂಗಳೂರಿಗೆ ಬಂದ ಆದಿಯಲ್ಲಿ ಪಡಬಾರದ ಕಷ್ಟಪಟ್ಟೆ. ಊಟಕ್ಕೂ, ಸೂರಿಗೆ ತೊಂದರೆ ಪಟ್ಟೆ. ಆಗ ಅ.ನ.ಕೃಷ್ಣರಾಯರು ನಾವೆಲ್ಲಾ ಸತ್ತಿದ್ದೇವೇನೋ ಅಂದು ಅವರ ಮನಗೆ ಕರೆದುಕೊಂಡು ಹೋದರು. ರಂಗಭೂಮಿಗೆ ಬೇಕಾದ ತಯಾರಿ ಮಾಡಿಕೊಟ್ಟರು. ನನ್ನನ್ನು ತೊಡಗಿಸಿಕೊಂಡೆ, ಮುಂದುವರಿದೆ. ಸೋಸಲೆ ಮಠದ ಶ್ರೀಗಳು ನನಗೆ ಶಾಲು ಹಾಕಿ ಸನ್ಮಾನ ಮಾಡಿದರು. ಅಲ್ಲಿಂದ ಹಿಂದಿರುಗಿ ನೋಡಲೇ ಇಲ್ಲ.

    33ವರ್ಷ ಕುಡಿದೆ, ಈಗ ಎಲ್ಲಾ ಬಿಟ್ಟೆ

    33ವರ್ಷ ಕುಡಿದೆ, ಈಗ ಎಲ್ಲಾ ಬಿಟ್ಟೆ

    33ವರ್ಷ ಕುಡಿದೆ, ಒಂದು ಸಲ ಅಮೆರಿಕಾಕ್ಕೆ ಹೋದೆ. ಅಲ್ಲಿ ಒಬ್ಬರು ಡ್ರಿಂಕ್ಸ್ ಮಾಡಬಾರದು ಸರ್ ಎಂದರು. ಏನನಿಸಿತೋ ಏನು, ಆಗ ಬಿಟ್ಟ ಮದ್ಯಪಾನ, ಧೂಮಪಾನವನ್ನು ಇದುವರೆಗೂ ಮುಟ್ಟಿಲ್ಲ.

    ನನ್ನ ಪತ್ನಿ ನನಗೆ ಸರ್ವಶ್ವ

    ನನ್ನ ಪತ್ನಿ ನನಗೆ ಸರ್ವಶ್ವ

    ನಾನು ಕುಡಿಯುತ್ತಿದ್ದ ಸಮಯದಲ್ಲಿ ಪತ್ನಿಗೆ ತುಂಬಾ ತೊಂದರೆ ಕೊಟ್ಟೆ, ಮೃಗನಾದೆ. ಆದರೆ ಅವಳು ನನ್ನನ್ನು ಮಗುವಿನಂತೆ ನೋಡಿಕೊಂಡಳು. ಜೀವನದಲ್ಲಿ ನಾನು ಸಾರಿ ಕೇಳಬೇಕೆಂದಿದ್ದರೆ ಮೊದಲು ಅವಳಲ್ಲಿ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಅನ್ನದಾತರಿಗೆ ನನ್ನ ಥ್ಯಾಂಕ್ಸ್ ಎಂದು ಹಿರಣ್ಣಯ್ಯ ಕಾರ್ಯಕ್ರಮ ಮುಗಿಸಿದರು.

    English summary
    Noted theater personality Master Hirannaiah in 'Weekend With Ramesh' programme. This programme aired on October 18.
    Thursday, May 2, 2019, 11:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X