»   » 'ಮಾಸ್ತಿಗುಡಿ' ನೋಡಲು ಮಿಸ್ ಮಾಡಿಕೊಂಡವರಿಗೆ 2ನೇ ಅವಕಾಶ.!

'ಮಾಸ್ತಿಗುಡಿ' ನೋಡಲು ಮಿಸ್ ಮಾಡಿಕೊಂಡವರಿಗೆ 2ನೇ ಅವಕಾಶ.!

Posted By:
Subscribe to Filmibeat Kannada

ದುನಿಯಾ ವಿಜಯ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ 'ಮಾಸ್ತಿಗುಡಿ' ಚಿತ್ರವನ್ನ ಚಿತ್ರಮಂದಿರದಲ್ಲಿ ನೋಡದೆ ಇರೋರಿಗೆ ಮತ್ತೊಂದು ಅವಕಾಶ ಸಿಕ್ಕಿದೆ. ಈ ಸಲ ಈ ಸಿನಿಮಾ ನೋಡೋಕೆ ಥಿಯೇಟರ್ ಗೆ ಹೋಗ್ಬೇಕಿಲ್ಲ. ನಿಮ್ಮ ಮನೆಯಲ್ಲೇ ನೋಡಬಹುದು.

ಹೌದು, ವರ್ಷದ ಹಿಟ್ ಸಿನಿಮಾ 'ಮಾಸ್ತಿಗುಡಿ' ಟಿವಿಯಲ್ಲಿ ಪ್ರಸಾರವಾಗುತ್ತಿದೆ. ನಿಮ್ಮ ನೆಚ್ಚಿನ ಉದಯ ಟಿವಿಯಲ್ಲಿ ದುನಿಯಾ ವಿಜಯ್ ಅಭಿನಯದ ಹೊಸ ಚಲನಚಿತ್ರ ಅತಿ ಶೀಘ್ರದಲ್ಲಿ ಟೆಲಿಕಾಸ್ಟ್ ಆಗಲಿದೆ. ಸದ್ಯ, ಪ್ರೋಮೋ ಮಾತ್ರ ಬಿಡುಗಡೆಯಾಗಿದ್ದು, ಸಮಯ ಮತ್ತು ದಿನಾಂಕದ ಬಗ್ಗೆ ಮಾಹಿತಿ ಕೊಟ್ಟಿಲ್ಲ.

Mastigudi Premiere in Udaya tv

'ಮಾಸ್ತಿಗುಡಿ' ಸಿನಿಮಾ ಕಳೆದ ಮೇ ತಿಂಗಳಲ್ಲಿ ರಿಲೀಸ್ ಆಗಿತ್ತು. ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದ ಈ ಚಿತ್ರದಲ್ಲಿ ದುನಿಯಾ ವಿಜಯ್ ಮೂರು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದರು. ಅಮೂಲ್ಯ ಮತ್ತು ಕೃತಿ ಕರಬಂಧ ನಾಯಕಿಯರಾಗಿ ಅಭಿನಯಿಸಿದ್ದರು.

ಅಂದ್ಹಾಗೆ, ತಿಪ್ಪಗೊಂಡನಹಳ್ಳಿ ಕೆರೆಯ ಚಿತ್ರೀಕರಣದ ವೇಳೆ ದುರಂತ ಸಾವಿಗೀಡಾದ ಅನಿಲ್ ಮತ್ತು ಉದಯ್ ಅವರು ಕೊನೆಯ ಚಿತ್ರ ಕೂಡ ಇದೇ 'ಮಾಸ್ತಿಗುಡಿ'

English summary
Duniya Vijay Starrer blockbuster movie 'Mastigudi' to telecast in Udaya TV.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada