»   » ಇಂಡಿಯನ್ ಐಡಲ್ ನಲ್ಲಿ ಬೆಂಗಳೂರಿನ ಬಾಲಕಿ

ಇಂಡಿಯನ್ ಐಡಲ್ ನಲ್ಲಿ ಬೆಂಗಳೂರಿನ ಬಾಲಕಿ

By Mahesh
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರಿನ 10 ವರ್ಷ ಬಾಲಕಿ ಅಂಜನಾ ಪದ್ಮನಾಭನ್ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಎಲ್ಲರನ್ನು ಮೋಡಿಗೊಳಿಸಿದ್ದಾಳೆ. ಸೋನಿ ಟಿವಿಯಲ್ಲಿ ಪ್ರಸಾರವಾಗುವ ಇಂಡಿಯನ್ ಐಡಲ್ ಜ್ಯೂನಿಯರ್ ರಿಯಾಲಿಟಿ ಶೋನಲ್ಲಿ ಅಂಜನಾ ಈಗ ಫೈನಲ್ ಹಂತ ತಲುಪಿರುವ ಸ್ಪರ್ಧಿ.

  ದೇಶದ ನಾಲ್ಕು ವಲಯಗಳಿಂದ ನಾಲ್ಕು ಸ್ಪರ್ಧಿಗಳು ಪ್ರಶಸ್ತಿ ಸುತ್ತಿನಲ್ಲಿದ್ದಾರೆ. ಉತ್ತರ ವಲಯದಿಂದ ಜಮ್ಮು ಮತ್ತು ಕಾಶ್ಮೀರ ಅನ್ಮೋಲ್ ಜೈಸ್ವಾಲ್, ದಕ್ಷಿಣ ವಲಯದಿಂದ ಬೆಂಗಳೂರಿನ ಅಂಜನಾ ಪದ್ಮನಾಭನ್, ಪೂರ್ವ ವಲಯದಿಂದ ಪಶ್ಚಿಮ ಬಂಗಾಳದ ದೇಬಾಂಜನಾ ಕರ್ಮಾಕರ್ ಹಾಗೂ ಪಶ್ಚಿಮ ವಲಯದಿಂದ ಅಹಮದಾಬಾದಿನ ನಿರ್ವೇಶ್ ಡೇವ್ ಸ್ಪರ್ಧೆಯಲ್ಲಿದ್ದಾರೆ.

  ನಮ್ಮ ಬೆಂಗಳೂರಿನ ಸ್ಪರ್ಧಿ ಅಂಜನಾ ಜನಪ್ರಿಯತೆಯ ಅಳತೆಗೋಲಿನಲ್ಲೂ ಮುಂದಿದ್ದಾಳೆ. ಅಂಜನಾ ಸುಶ್ರಾವ್ಯವಾಗಿ ಹಾಡಿದ ಹಿಂದಿಯ 'ಕಿನಾರಾ' ಚಿತ್ರದ 'ಮೆರಿ ಆವಾಜ್ ಹಿ ಪೆಹೆಚಾನ ಹೈ' ಹಾಡು ಕೇಳುಗರನ್ನು ಮೂಕವಿಸ್ಮಿತರನ್ನಾಗಿ ಮಾಡಿತ್ತು. ಕುತೂಹಲದ ಸಂಗತಿಯೆಂದರೆ ಅಂಜನಾಳಿಗೆ ನಿರರ್ಗಳವಾಗಿ ಹಿಂದಿ ಭಾಷೆ ಮಾತನಾಡಲು ಬರುವುದಿಲ್ಲ. ಹರಕು ಮುರುಕು ಭಾಷೆ ಮಾತನಾಡಬಲ್ಲಳು ಅಷ್ಟೇ. ಆದರೆ, ಭಾಷೆಯ ಎಲ್ಲೆ ಮೀರಿ ತನ್ನ ಗಾಯನದ ಮೂಲಕ ಎಲ್ಲರನ್ನು ಮೋಡಿ ಮಾಡಿ ಮುನ್ನುಗ್ಗುತ್ತಿದ್ದಾಳೆ.

  ಅಂಜನಾ ಬಗ್ಗೆ ಇನ್ನಷ್ಟು ಮಾಹಿತಿ, ಹಾಡಿನ ಕ್ಲಿಪ್ಪಿಂಗ್, ಚಿತ್ರಗಳನ್ನು ತಪ್ಪದೇ ಓದಿ.. ಜತೆಗೆ ತಪ್ಪದೇ ವೋಟ್ ಮಾಡಿ. ಆನ್ ಲೈನ್ ವೋಟ್ ಮಾಡಲು ಕ್ಲಿಕ್ ಮಾಡಿ

  ಅಂಜನಾಗೆ ವೋಟ್ ಮಾಡಿ

  ಲಡ್ಡೂ, ಕುಟ್ಟಿಮಾ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಅಂಜನಾ ಅವರ ತಂದೆ ದೊಡ್ಡ ಖಾಸಗಿ ಕಂಪನಿಯೊಂದರಲ್ಲಿ ಚಾರ್ಟೆಡ್ ಅಕೌಂಟೆಡ್, ತಾಯಿ ಗೃಹಿಣಿಯಾಗಿದ್ದು ಮಗಳ ಪ್ರತಿಭೆ ಗುರುತಿಸಿ ಸೂಕ್ತ ತಯಾರಿ ನೀಡಿದ್ದಾರೆ.

  ಕಳೆದ ವರ್ಷದಿಂದ ಅಖಿಲಾ ಅವರಿಂದ ಶಾಸ್ತ್ರೀಯ ಸಂಗೀತ ಕಲಿಯುತ್ತಿರುವ ಅಂಜನಾ, ಹಿಂದೂಸ್ತಾನಿ ಗಾಯನವನ್ನು ಪಂಡಿತ್ ಹೆಗ್ಡೆ ಅವರಿಂದ ಹೇಳಿಸಿಕೊಳ್ಳುತ್ತಿದ್ದಾಳೆ, ಬಾಲಿವುಡ್ ಇನ್ನಿತರ ಚಿತ್ರಗೀತೆಗಳ ಗಾಯನಕ್ಕೆ ಅಪ್ಪನೇ ಗುರು

  ಅಂಜನಾ

  ಮೂರು ಜಡ್ಜ್ ಗಳಾದ ಶ್ರೇಯಾ ಘೋಷಾಲ್, ವಿಶಾಲ್ ಹಾಗೂ ಶೇಖರ್ ಪೈಕಿ ಶ್ರೇಯಾ ಅವರು ನನ್ನ ಫೇವರೀಟ್ ಎನ್ನುವ ಅಂಜನಾಗೆ ಮುಂದೆ ಶ್ರೇಯಾ, ಲತಾ ಮಂಗೇಷ್ಕರ್ ಹಾದಿಯಲ್ಲಿ ಸಾಗುವ ಕನಸಿದೆ

  ಜತೆಗೆ ಪೈಲಟ್ ಆಗುವ ಬಯಕೆಯೂ ಇದೆ. ಅಮೆರಿಕದ ಡಿಸ್ನಿಲ್ಯಾಂಡ್ ನಲ್ಲಿ ಸುತ್ತುವ ಆಸೆ ಹೊಂದಿರುವ ಅಂಜನಾಗೆ ಯಾಕೋ ಬಾರ್ಬಿ ಡಾಲ್ ಹಾಗೂ ಕಟ್ಟು ನಿಟ್ಟಾದ ಆಹಾರ ಪಥ್ಯ ಇಷ್ಟವಾಗುವುದಿಲ್ಲವಂತೆ

  ಹಾಡಿನ ಜತೆಗೆ

  ಟೇಬಲ್ ಟೆನಿಸ್, ಬಾಡ್ಮಿಂಟನ್, ಕ್ರಿಕೆಟ್, ಗಾಲ್ಫ್, ಈಜು, ಬಾಸ್ಕೆಟ್ ಬಾಲ್ ಆಡಲು ಅಂಜನಾ ಇಷ್ಟಪಡುತ್ತಾಳೆ. ಜಂಕ್ ಫುಡ್ ಎಂದರೆ ಪಂಚಪ್ರಾಣ.

  ಶ್ರೇಯಾ ಘೋಷಲ್ ಅವರು ಒಮ್ಮೆ ನಿನ್ನ ಗಂಟಲು ಸರಿ ಇಟ್ಟುಕೊಳ್ಳಬೇಕು. ಒಂದು ವಾರ ಕಟ್ಟುನಿಟ್ಟಾಗಿ ಜಂಕ್ ಫುಡ್ ಬೇಡ ಎಂದಿದ್ದಕ್ಕೆ ಅಂಜನಾ ಮುಖ ಪೆಚ್ಚಾಗಿತ್ತು.

  ಅಂಜನಾಗೆ ಪ್ರಶಂಸೆ

  ಅದ್ಭುತ ಗಾಯನದ ನಂತರ ಜಡ್ಜ್ ಗಳಿಂದ ಪ್ರಶಂಸೆ ಸಿಕ್ಕಿದ್ದು ಹೀಗೆ..

  ಪ್ರೇಕ್ಷಕರ ಮೆಚ್ಚುಗೆ

  ಅಂಜನಾ ಸ್ಪರ್ಧೆಗೆ ಬರುವ ಗಣ್ಯರು, ಜಡ್ಜ್ ಗಳಷ್ಟೇ ಅಲ್ಲ ಪ್ರೇಕ್ಷಕರ ವೋಟಿಂಗ್ ನಲ್ಲೂ ಮುಂದಿದ್ದಾರೆ. ಪ್ರತಿಭೆ ಅನಾವರಣೆಕ್ಕೆ ಸೂಕ್ತ ವೇದಿಕೆಯೋ ಸಿಕ್ಕಿದೆ. ಸ್ಪರ್ಧೆ ಗೆಲ್ಲಲು ವೀಕ್ಷಕರ ವೋಟಿಂಗ್ ಕೂಡಾ ಅಷ್ಟೇ ಮುಖ್ಯವಾಗುತ್ತದೆ.

  ಶಾರುಖ್- ದೀಪಿಕಾ ಖುಷ್

  ಚೆನ್ನೈ ಎಕ್ಸ್ ಪ್ರೆಸ್ ನ ಬನ್ ಕೆ ತಿತ್ಲಿ ಹಾಡು ಹಾಡಿದ ಅಂಜನಾಗೆ ಶಾರುಖ್ ಹಾಗೂ ದೀಪಿಕಾ ಬಹುಪರಾಕ್ ಹೇಳಿದ್ದಾರೆ. ಕಲೆಗೆ ಭಾಷೆಯ ಬಂಧ ಇಲ್ಲ ಎನ್ನುವುದಕ್ಕೆ ನೀನೆ ಸಾಕ್ಷಿ ಎಂದು ಶಾರುಖ್ ಹೇಳಿದ್ದಾರೆ.

  English summary
  Her father is a chartered accountant at a big firm while her mother is a housewife. Anjana Padmanabhan a 10 year old wonder kid from Namma Benagaluru makes into the final of Indian Idol Junior.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more