For Quick Alerts
  ALLOW NOTIFICATIONS  
  For Daily Alerts

  ತವರಿಗೆ ಬಂದ 'ಸೂಪರ್ ಮಾಮ್' ಸೌಮ್ಯಶ್ರೀ

  By Suneetha
  |

  ಸಾಂಪ್ರದಾಯಿಕ ಹಳ್ಳಿ ಪ್ರದೇಶದ ಮಹಿಳೆಯರಲ್ಲಿ ಸಾಮಾನ್ಯವಾಗಿ ಕೆಲವರು ಸಂಸಾರದ ಹೊರೆ ಹೊತ್ತುಕೊಂಡ ನಂತರ ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ತುಂಬಾ ಕಡಿಮೆ. ಆದರೆ ಚಿಕ್ಕಮಗಳೂರು ಮಲೆನಾಡು ಸೊಗಡಿನ ಅಪೂರ್ವ ಪ್ರತಿಭೆಯೊಂದು ಇಡೀ ಪ್ರಪಂಚವೇ ನೋಡುವ ಸಾಧನೆ ಮಾಡಿದೆ ಅಂದ್ರೆ ಅದು ಸಾಮಾನ್ಯ ಅಂತೂ ಅಲ್ವೆ ಅಲ್ಲಾ.

  ಹೌದು ಝೀ ಹಿಂದಿ ವಾಹಿನಿ ಆಯೋಜಿಸಿದ್ದ ಬಿಗ್ ರಿಯಾಲಿಟಿ ಶೋ 'ಡಾನ್ಸ್ ಇಂಡಿಯಾ ಡಾನ್ಸ್, ಸೂಪರ್ ಮಾಮ್' ನಲ್ಲಿ ಅದ್ಭುತ ಸಾಧನೆಗೈದ ಮೂಲತಃ ಮಂಗಳೂರು ಬೆಡಗಿಯಾದ ಸೌಮ್ಯಶ್ರೀ ಬಗ್ಗೆ ನಾವೀಗ ಮಾತನಾಡುತ್ತಿದ್ದೇವೆ.

  ಪ್ರತಿಭೆಗೆ ವಯಸ್ಸಿನ ಹಂಗಿಲ್ಲ, ಸಾಧನೆ ಮಾಡುವವರಿಗೆ ಮದುವೆ, ಮಕ್ಕಳು ತೊಡಕಾಗರು, ಗೆಲ್ಲುವ ಛಲದೊಂದಿಗೆ ಕಠಿಣ ಪರಿಶ್ರಮ ಇದ್ದರೆ ಗೆಲುವು ಖಂಡಿತ ಎನ್ನುವುದಕ್ಕೆ, ಸೌಮ್ಯಶ್ರೀ ಉತ್ತಮ ನಿದರ್ಶನ.

  ಕರಾವಳಿ ಬೆಡಗಿ ಸೌಮ್ಯಶ್ರೀ ಪೂಜಾರಿ ಅವರ ತಂದೆ ಸುಂದರ್ ಪೂಜಾರಿ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕರಾಗಿದ್ದರು. ತಾಯಿ ಕಮಲಾ ಗೃಹಿಣಿ. ಸುಂದರ್ ಪೂಜಾರಿ ಅವರಿಗೆ ವರ್ಗಾವಣೆಯಾದ ನಂತರ ತಮ್ಮ ಹೆಂಡತಿ ಹಾಗೂ ಮೂವರು ಹೆಣ್ಣು ಮಕ್ಕಳೊಂದಿಗೆ ಚಿಕ್ಕಮಗಳೂರಿನ ಕಡೂರಿನಲ್ಲಿ ನೆಲೆಸಿದರು.

  ಕೊನೆಯ ಮಗಳು ಸೌಮ್ಯಶ್ರೀ ಗೆ ಎಳೆ ವಯಸ್ಸಿನಲ್ಲಿಯೇ ನೃತ್ಯದ ಆಸಕ್ತಿಯನ್ನು ಗಮನಿಸಿದ ತಾಯಿ ಕಮಲಾ ಅವರು ಅನೇಕ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಪ್ರಚೋದನೆ ನೀಡಲಾರಂಭಿಸಿದರು. ಅದರ ಪರಿಣಾಮ ಐದನೇ ವಯಸ್ಸಿನಲ್ಲಿರುವಾಗಲೇ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದ ನಂತರ ಮತ್ತೆ ಹಿಂತಿರುಗಿ ನೋಡಲೇ ಇಲ್ಲ.

  Meet Soumyashree Dance India Dance Season 2 Runner up

  ಮೂಲತಃ ಮಂಗಳೂರಿನವರಾದ ಸೌಮ್ಯಶ್ರೀ ಮದುವೆಯಾದ ನಂತರ ಸಕಲೇಶಪುರ ದಲ್ಲಿ ಅವಕಾಶದ ಕೊರತೆ ಇದ್ದುದ್ದರಿಂದ ತಾಯಿ ಮನೆಯಲ್ಲಿ ಉಳಿದುಕೊಂಡು ಮತ್ತೆ ತಮ್ಮ ಕೆರಿಯರ್ ನತ್ತ ಗಮನ ಹರಿಸಿದರು. ಗಂಡ ಮಂಜುನಾಥ್ ಹಾಗೂ ಅತ್ತೆಯ ಫುಲ್ ಸಪೋರ್ಟ್ ಸೌಮ್ಯಶ್ರೀ ಗೆ ಇದ್ದುದ್ದರಿಂದ ಸಾಧನೆಯೇ ಅವರ ಮುಖ್ಯ ಗುರಿಯಾಯಿತು.

  ಸ್ವತಃ ನೃತ್ಯ ಗುರುವಾಗಿರುವ ಸೌಮ್ಯಶ್ರೀ ಅವರಿಗೆ ಗುರು ಅಂತ ಯಾರೂ ಇಲ್ಲವಂತೆ. ಹಾಗಾಗಿ ಅವರ ನೃತ್ಯಕ್ಕೆ ಮಿತಿಯೆಂಬುದೇ ಇಲ್ಲ. ಬರೀ ಹಾಡು ಕೇಳುತ್ತಿದ್ದರೆ ಸಾಕು ತನ್ನಿಂದಾನೇ ಅವರ ಕೈ ಕಾಲುಗಳು ಕುಣಿಯುವಷ್ಟರಮಟ್ಟಿಗೆ ಇವರು ನೃತ್ಯವನ್ನು ಮೈಗೂಡಿಸಿಕೊಂಡಿದ್ದಾರೆ.

  ಎತ್ತಣದಿಂದ ಎತ್ತಣ ಸಂಭಂದವಯ್ಯಾ ಅನ್ನುವ ಹಾಗೆ ಎಲ್ಲೋ ಇದ್ದವರು ಮಹಾನಗರ ಮುಂಬೈ ಗೆ ಹಾರಿ ಡಿಐಡಿ ಸೂಪರ್ ಮಾಮ್ಸ್ ಕಾರ್ಯಕ್ರಮದ್ಲಲಿ ಫೈನಲ್ ಪ್ರವೇಶ ಪಡೆಯುವುದು ಅಂದರೆ ಖಂಡಿತ ಸಾಮಾನ್ಯ ಅಲ್ಲಾ. ಮೊದ ಮೊದಲು ಹಿಂದಿ ಮಾತನಾಡಲು ಕಷ್ಟ ಅನುಭವಿಸುತ್ತಿದ್ದವರು ಕೇವಲ ಎರಡು ವಾರಗಳಲ್ಲಿ ಕರಗತ ಮಾಡಿಕೊಂಡರಂತೆ.

  ಇದೀಗ ತವರಿಗೆ ಹಿಂತಿರುಗಿರುವ ಸೌಮ್ಯಶ್ರೀ ಕನ್ನಡದವರಾಗಿ ಅಂತಹ ಕಠಿಣ ಸ್ಪರ್ಧೆಯಲ್ಲಿ ಗೆದ್ದು ಬಂದಿದ್ದಲ್ಲದೇ, ಮೂರು ವರ್ಷದ ಮಗಳನ್ನು ಬಿಟ್ಟು ಗೊತ್ತಿಲ್ಲದ ಊರಿಗೆ ಪ್ರವೇಶಿಸಿ ಅಲ್ಲಿಯ ಜನಗಳ ಪ್ರೀತಿಗೆ ಪಾತ್ರರಾದ ನಮ್ಮ ಕನ್ನಡದ ಕುವರಿಯ ಸಾಧನೆಗೆ ಹ್ಯಾಟ್ಸಾಫ್ ಹೇಳಲೇಬೇಕು ಅಲ್ವಾ.

  English summary
  Meet with Soumyashree native of Mangaluru who is runner up in Dance India Dance Season 2 super moms reality show telecasted in Zee TV. DID Super Mom 2 is being judged by Govinda, Terence Lewis and Geeta Kapur.
  Wednesday, July 22, 2015, 17:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X