»   » ಬಿಗ್ ಬಾಸ್ ನಲ್ಲಿ ಪೂನಂ, ಶ್ರೀಶಾಂತ್?

ಬಿಗ್ ಬಾಸ್ ನಲ್ಲಿ ಪೂನಂ, ಶ್ರೀಶಾಂತ್?

Posted By:
Subscribe to Filmibeat Kannada

ಕಲರ್ಸ್ ವಾಹಿನಿಯಲ್ಲಿ ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ರಿಯಾಲಿಟಿ ಶೋದ ಟೀಸರ್ ಕಿಚ್ಚು ಹಬ್ಬಿಸಿದ ನಂತರ ಸ್ಪರ್ಧಿಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ. ಬಿಗ್ ಬಾಸ್ ಸೀಸನ್ 6 ರಲ್ಲಿ 'ಅಲಗ್ ಛೆ' ಎಂದು ಎಲ್ಲರನ್ನು ಮೋಡಿ ಮಾಡಿದ್ದ ಸಲ್ಮಾನ್ ಖಾನ್ ಈ ಬಾರಿ ಡಬ್ಬಲ್ ರೋಲ್ ನಲ್ಲಿ ಕಮಾಲ್ ಮಾಡುತ್ತಾರೆ ಕಾದು ನೋಡಬೇಕಿದೆ.

ಬಹುನಿರೀಕ್ಷಿತ ಬಿಗ್ ಬಾಸ್ 7 ನ ಅಧಿಕೃತ ಟೀಸರ್ ಹೊರಬಿದ್ದಿದೆ. ಪ್ರೋಮೊದಲ್ಲಿ ಹೇಳಿದ್ದಂತೆ ನರಕ, ಸ್ವರ್ಗದ ದರ್ಶನ ನಂತರ ಬಿಗ್ ಬಾಸ್ ದರ್ಶನ ಪ್ರಾಪ್ತಿಯಾಗಲಿದೆಯಂತೆ. ಟೀಸರ್ ಇಲ್ಲಿ ನೋಡಿ

ಸ್ಪರ್ಧಿಗಳ ವಿಷಯಕ್ಕೆ ಬಂದರೆ ಜೀವನದಲ್ಲಿ ನೊಂದು ಬೆಂದವರು, ತಕ್ಕಮಟ್ಟಿನ ಸಾಧನೆ ಮಾಡಿದವರು, ಗ್ಲಾಮರ್ ಜಗತ್ತಿನ ಬೊಂಬೆಗಳು ಬಿಗ್ ಬಾಸ್ ಮನೆಯಲ್ಲಿ ಇರುವುದು ಖಾಯಂ ಜೊತೆಗೆ ವಿದೇಶದಿಂದ ಆಮದು ಮಾಡಿಕೊಂಡ ಸೆಲೆಬ್ರಿಟಿ ಇರುವ ಸಾಧ್ಯತೆಯೂ ಇದೆ.

ಲಭ್ಯ ಮಾಹಿತಿ ಪ್ರಕಾರ ಒಬ್ಬ ಕ್ರಿಕೆಟರ್ ಅಂತೂ ಈ ಬಾರಿ ಬಿಗ್ ಬಾಸ್ ಮನೆಯಲ್ಲಿರುತ್ತಾರೆ. ಹರ್ಭಜನ್ ಸಿಂಗ್, ಯುವರಾಜ್ ಸಿಂಗ್ ಹಾಗೂ ಶ್ರೀಶಾಂತ್ ಹೆಸರು ಮುಂಚೂಣಿಯಲ್ಲಿದೆ. ಉಳಿದಂತೆ ಬಿಗ್ ಬಾಸ್ 7 ರ ಸ್ಪರ್ಧಿಗಳು ಯಾರಿರಬಹುದು? ಮುಂದೆ ನೋಡಿ....

ನಶಾ ಹುಡುಗಿ

ಇತ್ತೀಚೆಗಷ್ಟೇ ನಶಾ ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿರುವ ನಟಿ ಪೂನಂ ಪಾಂಡೆ ಅವರು ತಮ್ಮ ಚಿತ್ರ ಜೀವನಕ್ಕೆ ಹೊಸ ಮೈಲೇಜ್ ಸಿಗಲೆಂದು ಬಿಗ್ ಬಾಸ್ ಮನೆ ಹೊಕ್ಕಲು ಸಿದ್ಧತೆ ನಡೆಸಿದ್ದಾರೆ. [ನಶಾ ಚಿತ್ರ ವಿಮರ್ಶೆ ಓದಿ]

ಪಂಚೋಲಿಗಳು

ಜಿಯಾಖಾನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿದ್ದ ಜಿಯಾಖಾನ್ ಗೆಳೆಯ ಸೂರಜ್ ಪಂಚೋಲಿ ಹಾಗೂ ಅವನ ಅಪ್ಪ ಆದಿತ್ಯ ಪಂಚೋಲಿ, ಅಮ್ಮ ಜರಿನಾ ವಹಾಬ್ ಮೂವರಲ್ಲಿ ಒಬ್ಬರು ಗ್ಯಾರಂಟಿ ಎನ್ನಲಾಗಿದೆ.

ಮನೀಶಾ ಕೊಯಿರಾಲ

ಅಂಡಾಶಯ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮನೀಶಾ ಕೊಯಿರಾಲ, ಕ್ಯಾನ್ಸರ್ ಗೆದ್ದು ಚೇತರಿಸಿಕೊಳ್ಳುತ್ತಿದ್ದು, ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ವೈವಾಹಿಕ ಜೀವನದ ಬಿಕ್ಕಟ್ಟು, ಕ್ಯಾನ್ಸರ್ ನಿಂದ ಪಟ್ಟ ನೋವು, ಸಾರ್ವಜನಿಕವಾಗಿ ಮತ್ತೆ ತಮ್ಮ ಇಮೇಜ್ ಬದಲಾಯಿಸಿಕೊಳ್ಳಲು ಮನೀಶಾಗೆ ಇದು ಉತ್ತಮ ಅವಕಾಶ.

ಧರ್ಮೇಂದ್ರ

ಶೋಲೆ' ಚಿತ್ರ ಈಗ ತ್ರಿಡಿ ರೂಪದಲ್ಲಿ ಬರುವ ಖುಷಿಯಲ್ಲೇ ಧರ್ಮೇಂದ್ರ ಅವರು ಬಿಗ್ ಬಾಸ್ ಮನೆಯಲ್ಲಿ ಬಿಗ್ ಡ್ಯಾಡಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆಯಂತೆ

ಶೆರ್ಲಿನ್ ಛೋಪ್ರಾ

ಕಾಮಸೂತ್ರ 3ಡಿ ಟ್ರೇಲರ್ ಮೂಲಕ ಪಡ್ಡೆಗಳಿಗೆ ಕ್ರೇಜ್ ಹುಟ್ಟಿಸಿರುವ ಶೆರ್ಲಿನ್ ಛೋಪ್ರಾ ಕೂಡಾ ಬಾಲಿವುಡ್ ನಲ್ಲಿ ತಮ್ಮ ವೃತ್ತಿ ಜೀವನ ಗಟ್ಟಿಗೊಳಿಸಿಕೊಳ್ಳಲು ಬಿಗ್ ಬಾಸ್ ಮನೆ ಹಾದಿ ಹಿಡಿದಿದ್ದಾರೆ ಎಂಬ ಸುದ್ದಿಯಿದೆ.

ಯುವರಾಜ್ ಸಿಂಗ್

ಕ್ರಿಕೆಟ್ ಜಗತ್ತಿನಲ್ಲಿ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಕ್ಯಾನ್ಸರ್ ಗೆದ್ದ ವೀರ ಯುವರಾಜ್ ಸಿಂಗ್ ಅವರು ಟೀಂ ಇಂಡಿಯಾ ಸೇರಲು ಹಾತೊರೆಯುತ್ತಿದ್ದಾರೆ. ಆದರೆ, ಮುಂದಿನ ವಿಶ್ವಕಪ್ ಗೂ ಮುನ್ನ ಬಿಗ್ ಬಾಸ್ ಮನೆ ಪ್ರವೇಶವೂ ಸಾಧ್ಯತೆಯಿದೆ.

ಶ್ರೀಶಾಂತ್

ಸ್ಪಾಟ್ ಫಿಕ್ಸಿಂಗ್ ಸತ್ಯಾಸತ್ಯತೆ ಬಿಚ್ಚಿಡಲು ಶ್ರೀಶಾಂತ್ ಗೆ ಬಿಗ್ ಬಾಸ್ ಹೇಳಿ ಮಾಡಿಸಿದ ಜಾಗ. ವಿವಾದಗಳ ಕೂಸು ಶ್ರೀಶಾಂತ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ರೀತಿಯಲ್ಲೇ ರಿಯಾಲಿಟಿ ಶೋ ಬಿಗ್ ಬಾಸ್ ಗೂ ಬರುತ್ತಾರಾ? ಕಾದು ನೋಡಬೇಕಿದೆ.

ಇನ್ಯಾರಾ ಹೆಸರು ಕೇಳಿ ಬಂದಿದೆ

ಜಿಯಾ ಖಾನ್ ತಾಯಿ ರಬಿಯಾ ಖಾನ್, ಕಿರುತೆರೆ ತಾರೆಗಳಾದ ರಕ್ಷಂದಾ ಖಾನ್, ಸಂಜೀದಾ ಶೇಖ್, ಮನೀಶಾ ಪಾಲ್, ಪೂಜಾ ಗೊರ್, ಗೌರವ್ ಗೇರಾ, ಕ್ರತಿಕಾ ಕಾಮ್ರಾ, ಕ್ರಾತಿಕಾ ಸೆನ್ಗರ್ ಹೆಸರು ಕೇಳಿ ಬಂದಿದೆ.

ಇವರ ಜೊತೆಗೆ ಏಕ್ತಾ ಕಪುರ್, ಸಂಜಯ್ ಜುಮಾನಿ, ಫರ್ಹಾ ಖಾನ್ ಪತಿ ಶಿರೀಶ್ ಕುಂದರ್ ಮುಂತಾದವರ ಹೆಸರು ಕೇಳಿ ಬಂದಿದೆ. ಸೆಪ್ಟೆಂಬರ್ ನಲ್ಲೇ ಬಿಗ್ ಬಾಸ್ ಕಿರುತೆರೆಗೆ ಅಪ್ಪಳಿಸುವ ಸಾಧ್ಯತೆಯೂ ಇದೆ.

English summary
Big Boss season 7 is all set to make history in Indian Television with a speculative line up of contestants that’s going to set the Bigg Boss house on fire. With Salman Khan as host this season it is creating a craze among audiences.
Please Wait while comments are loading...