For Quick Alerts
  ALLOW NOTIFICATIONS  
  For Daily Alerts

  'ಸೃಜನ್ ನಿರ್ಮಾಣದ ಧಾರಾವಾಹಿಗೆ ಬಿಗ್ ಬಾಸ್' ಸ್ಪರ್ಧಿ ಮೇಘಶ್ರೀ ನಾಯಕಿ

  |

  ನಟ ಸಂಚಾರಿ ವಿಜಯ್ ಅಂಧನಾಗಿ ಅಭಿನಯ ಮಾಡಿದ್ದ ಸಿನಿಮಾ 'ಕೃಷ್ಣ ತುಳಸಿ'. ಈ ಸಿನಿಮಾದ ನಾಯಕಿ ಆಗಿದ್ದು ಮೇಘಶ್ರೀ. ಚೂಡಿದಾರ್ ಹಾಕಿಕೊಂಡು ಹೋಮ್ಲಿ ಹುಡುಗಿಯಾಗಿ ಈಕೆ ಇಲ್ಲಿ ಕಾಣಿಸಿಕೊಂಡಿದ್ದರು.

  ಸಿನಿಮಾ ಮಾಡುತ್ತಿದ್ದ ಮೇಘಶ್ರೀ ಈಗ ಕಿರುತೆರೆಗೆ ಬಂದಿದ್ದಾರೆ. 'ಕಲರ್ಸ್ ಕನ್ನಡ' ವಾಹಿನಿಯ ಹೊಸ ಧಾರಾವಾಹಿಗೆ ಈಕೆಯೆ ನಾಯಕಿಯಾಗಿದ್ದಾರೆ. ವಿಶೇಷ ಅಂದರೆ, ಈ ಧಾರಾವಾಹಿಯನ್ನು ನಟ ಸೃಜನ್ ಲೋಕೇಶ್ ನಿರ್ಮಾಣ ಮಾಡುತ್ತಿದ್ದಾರೆ.

  ಸೂಪರ್ ಎಕ್ಸ್ ಕ್ಲೂಸಿವ್: ಇಂದು 'ಬಿಗ್ ಬಾಸ್'ಗೆ ಮೆಗಾ ಎಂಟ್ರಿ ನೀಡಲಿರುವ ಸುಂದರಿ ಈಕೆಯೇ.!

  ಕಲರ್ಸ್ ವಾಹಿನಿಯ 'ಮಜಾ ಟಾಕೀಸ್' ಕಾರ್ಯಕ್ರಮದ ಮೂಲಕ ರಂಜಿಸುತ್ತಿರುವ ಸೃಜನ್ ಹೊಸ ಧಾರಾವಾಹಿಯ ತಯಾರಿಯಲ್ಲಿ ಇದ್ದಾರೆ. ಈ ಸೀರಿಯಲ್ ಗೆ 'ಇವಳು ಸುಜಾತಾ' ಎನ್ನುವ ಹೆಸರನ್ನು ಇಡಲಾಗಿದೆ. ಸುಜಾತಾ ಪಾತ್ರದಲ್ಲಿ ಮೇಘಶ್ರೀ ನಟಿಸುತ್ತಿದ್ದಾರೆ.

  ಹಿರಿತೆರೆಗೂ ಕಿರುತೆರೆಗೂ ಹೆಚ್ಚು ವ್ಯತ್ಯಾಸ ಇಲ್ಲ. ಚಿತ್ರರಂಗದ ದೊಡ್ಡ ದೊಡ್ಡ ಕಲಾವಿದರೇ ಈಗ ಧಾರಾವಾಹಿ ಮಾಡುತ್ತಿದ್ದು, ತಾನು ಕೂಡ ಸಿನಿಮಾದಿಂದ ಸೀರಿಯಲ್ ಗೆ ಬಂದಿದ್ದೇನೆ ಎನ್ನುತ್ತಾರೆ ನಟಿ ಮೇಘಶ್ರೀ.

  ಮೇಘಶ್ರೀ ಸಿನಿಮಾದ ಜೊತೆಗೆ ಬಿಗ್ ಬಾಸ್ ಸೀಸನ್ 6 ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದರು. ಜೊತೆಗೆ ನಾಗಕನ್ನಿಕೆ ಸೀರಿಯಲ್ ನಲ್ಲಿಯೂ ನಟಿಸಿದ್ದರು.

  'ಇವಳು ಸುಜಾತಾ' ಧಾರಾವಾಹಿ ಸುಜಾತಾ ಎಂಬ ಸಾಮಾನ್ಯ ವರ್ಗದ ಹುಡುಗಿಯ ಜೀವನವನ್ನು ಕುರಿತಾಗಿದೆಯಂತೆ. ಭಾವನಾತ್ಮಕ ಕಥೆ ಇಲ್ಲಿ ಇದ್ದು, ವೀಕ್ಷಕರನ್ನು ರಂಜಿಸುವ ಪ್ರಯತ್ನದಲ್ಲಿ ಇಡೀ ತಂಡ ಇದೆ.

  ಅಂದಹಾಗೆ, 'ಇವಳು ಸುಜಾತಾ' ಧಾರಾವಾಹಿಯ ಪ್ರಸಾರದ ದಿನಾಂಕ, ಇತರ ಕಲಾವಿದರ ಮಾಹಿತಿ ಸದ್ಯದಲ್ಲಿಯೇ ಹೊರ ಬರಲಿದೆ.

  English summary
  Kannada actress,' Bigg Boss Kannada 6' Megha Shree playing female lead in Colors Kannada's 'Ivalu Sujatha' kannada serial. The serial is producing by Srujan Lokesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X