Just In
Don't Miss!
- Sports
ಐಎಸ್ಎಲ್: ಮುಂಬೈ ಸಿಟಿ vs ಚೆನ್ನೈಯಿನ್ ಹಣಾಹಣಿ, Live ಸ್ಕೋರ್
- News
ಚಿನ್ನದ ಬೆಲೆ ಏರಿಳಿತ: ಜನವರಿ 25ರ ಬೆಲೆ ಹೀಗಿದೆ
- Automobiles
ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಹೀರೋ ಮೋಟೊಕಾರ್ಪ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Lifestyle
ನಿಮ್ಮ ದೇಹದ ಮೇಲಿನ ಕೂದಲು ಹೇಳುತ್ತೆ ನಿಮ್ಮ ಆರೋಗ್ಯದ ಭವಿಷ್ಯ
- Education
Indian Air Force Recruitment 2021: ಏರ್ಮೆನ್ ಗ್ರೂಪ್ X & Y ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಡಿಯೋ : ತೆಲುಗು ಬಿಗ್‌ಬಾಸ್‌ನಲ್ಲಿ ಭಾರಿ ಮೋಸ!
ಬಿಗ್‌ಬಾಸ್ ಬಗ್ಗೆ ಆರಂಭದಿಂದಲೂ ಅನುಮಾನಗಳನ್ನು ವ್ಯಕ್ತಪಡಿಸಿಕೊಂಡೇ ಬರಲಾಗುತ್ತಿದೆ. ಬಿಗ್‌ಬಾಸ್ ಶೋ ನಲ್ಲಿ ಸ್ಪರ್ಧಿಗಳ ವರ್ತನೆಗಳು, ಮಾತುಗಳು 'ಸ್ಕ್ರಿಪ್ಟೆಡ್' ಆಗಿರುತ್ತದೆ ಎಂದು ಹಲವು ಬಾರಿ ಆರೋಪಿಸಲಾಗಿದೆ.
ಬಿಗ್‌ಬಾಸ್‌ನ ಮತ ಪ್ರಕ್ರಿಯೆ ಪಾರದರ್ಶಕವಾಗಿಲ್ಲ, ಆಯೋಜಕರು ತಮಗೆ ಇಷ್ಟ ಬಂದವರನ್ನು ಆಟದಿಂದ ಹೊರಕ್ಕೆ ಹಾಕುತ್ತಾರೆ. ಬೇಕಾದವರನ್ನು ಸೇರಿಸಿಕೊಳ್ಳುತ್ತಾರೆ ಎಂದೆಲ್ಲಾ ಹೇಳಲಾಗುತ್ತದೆ. ಸ್ಪರ್ಧಿಗಳೂ ಸಹ ಒಮ್ಮೊಮ್ಮೆ, ತಮಗೆ ಬೇಕಾದ ಮತ್ತೊಬ್ಬ ಸ್ಪರ್ಧಿಗೆ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಸಹಾಯ ಮಾಡುತ್ತಾರೆ. ಈಗ ಇದೇ ಆಗಿದೆ.
ನಿನ್ನೆಯಷ್ಟೆ ತೆಲುಗು ಬಿಗ್‌ಬಾಸ್ 4 ಮುಗಿದಿದೆ. ಅಭಿಜಿತ್ ದುದ್ದಲ ವಿಜೇತರಾಗಿದ್ದಾರೆ. ಆದರೆ ಅದಕ್ಕೆ ಮುನ್ನಾ ಸ್ಪರ್ಧಿ ಸೋಹೆಲ್, 25 ಲಕ್ಷ ಹಣ ಪಡೆದು ಆಟದಿಂದ ನಿವೃತ್ತರಾದರು. ಅವರ ಎಣಿಕೆ ಸರಿಯಾಗಿಯೇ ಪರಿಣಿಮಿಸಿ ಆಟದಲ್ಲಿ ಅಭಿಜಿತ್ ಗೆದ್ದರು. ಹಣದ ಆಯ್ಕೆಯನ್ನು ಸೋಹೆಲ್ ಪರಿಗಣಿಸಿದೇ ಇದ್ದಿದ್ದರೆ ಅವರಿಗೆ ನಷ್ಟವಾಗಿರುತ್ತಿತ್ತು.

ಸೂಚನೆ ಪಾಲಿಸಿ ಆಟ ಆಡಿದ ಸೋಹೆಲ್
ಆದರೆ ಸೋಹೆಲ್ ಹಣದ ಆಯ್ಕೆಯನ್ನು ತೆಗೆದುಕೊಳ್ಳುವ ಹಿಂದೆ ಮೋಸವಿದೆ. ಆತನಿಗೆ ಸಹ ಸ್ಪರ್ಧಿಯೊಬ್ಬರು ಸೂಚನೆ ಕೊಟ್ಟು ಹಣದ ಆಯ್ಕೆಯನ್ನು ಪರಿಗಣಿಸುವಂತೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ವಿಡಿಯೋ ಒಂದು ಹರಿದಾಡುತ್ತಿದೆ.
ಭೇಟಿ ಮಾಡಲು ಬಂದಿದ್ದ ಮೆಹಬೂಬ್
ಸೋಹೆಲ್‌ಗೆ ಹಣದ ಆಯ್ಕೆ ನೀಡುವ ಮೊದಲಿಗೆ, ಆಟದಿಂದ ಮೊದಲೇ ಹೊರಗೆ ಆಗಿದ್ದ ಮೆಹಬೂಬ್ ಬಿಗ್‌ಬಾಸ್ ಮನೆಯ ಒಳಗೆ ಇದ್ದ ಅಭಿಜಿತ್, ಅಖಿಲ್, ದೇವಿ, ಸೋಹೆಲ್ ಅವರನ್ನು ಭೇಟಿ ಆಗಲು ಬಂದಿದ್ದರು. ಬಿಗ್‌ಬಾಸ್ ಮನೆ ಒಳಗಿದ್ದವರಿಗೂ ಹೊರಗಿದ್ದ ಮೆಹಬೂಬ್‌ಗೂ ಪಾರದರ್ಶಕ ಗಾಜಿನ ಗೋಡೆ ನಡುವೆ ಇತ್ತು.

ಸಜ್ಞೆ ಮಾಡಿದ ಮೆಹಬೂಬ್
ಒಬ್ಬೊಬ್ಬರಿಗೇ ವಿದಾಯ ಹೇಳುತ್ತಿದ್ದ ಮೆಹಬೂಬ್, ಸೋಹೆಲ್ ಬಳಿ ಬಂದ ಕೂಡಲೇ, ಗಾಜಿನ ಗೋಡೆ ಮೇಲೆ ಕೈಯಿಟ್ಟು, ಹಣಕ್ಕೆ ಬೆರಳಲ್ಲಿ ಮಾಡುವ ಸಜ್ಞೆ ಮಾಡಿದರು. ಮೆಹಬೂಬ್ ನೀಡಿದ ಇಶಾರೆ ಅರಿತುಕೊಂಡ ಸೊಹೆಲ್ ಏನೋ ಅರ್ಥವಾದಂತೆ ಹಿಂದಕ್ಕೆ ಸರಿದುಬಿಟ್ಟರು. ಮೆಹಬೂಬ್, ಸೋಹೆಲ್‌ಗೆ ಸಂಜ್ಞೆ ಮಾಡಿ ತೋರಿಸಿದ್ದು, ಯಾರಿಗೂ ಗೊತ್ತಾಗಲಿಲ್ಲ.

25 ಲಕ್ಷ ಹಣ ಆಯ್ಕೆ ಮಾಡಿಕೊಂಡ ಸೋಹೆಲ್
ಆ ನಂತರ ಸೊಹೆಲ್‌ಗೆ ಆಯ್ಕೆ ನೀಡಲಾಯಿತು. 25 ಲಕ್ಷ ಹಣ ಪಡೆದು ಈಗಲೇ ಹೊರಗೆ ಹೋಗುತ್ತೀಯಾ? ಅಥವಾ ಫೈನಲ್ ವೇದಿಕೆಗೆ ಬಂದು ಅಲ್ಲಿ ಗೆಲುವು-ಸೋಲು ನಿರ್ಧಾರಕ್ಕೆ ಕಾಯುತ್ತೀಯೋ ಎಂದು. ಮೊದಲೇ ಮೆಹಬೂಬ್‌ನಿಂದ ಪರಿಸ್ಥಿತಿಯ ಸೂಚನೆ ಪಡೆದಿದ್ದ ಸೊಹೆಲ್, ಕೂಡಲೇ ಹಣ ಆಯ್ಕೆ ಮಾಡಿಕೊಂಡು 25 ಲಕ್ಷ ಪಡೆದು ಹೊರಗೆ ಬಂದರು.