For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ನಲ್ಲಿ ಗೊಂದಲ, ಅಚ್ಚರಿಯ ಎಲಿಮಿನೇಷನ್

  By ಜೇಮ್ಸ್ ಮಾರ್ಟಿನ್
  |

  ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿಶೋ ಬಿಗ್ ಬಾಸ್ ನಲ್ಲಿ ಮತ್ತೊಮ್ಮೆ ಸ್ಪರ್ಧಿ ಎಲಿಮಿನೇಷನ್ ವಿಷಯ ಗೊಂದಲ, ಕುತೂಹಲ ಉಂಟಾಗಿತ್ತು, ಪುನೀತ್ ಇಸ್ಸಾರ್ ಹಾಗೂ ಮಿನಿಷಾ ಇಬ್ಬರಲ್ಲಿ ಯಾರು ಮನೆಯಿಂದ ಹೊರ ಬೀಳುತ್ತಾರೆ ಎಂಬುದು ಗೊಂದಲಮಯವಾಗಿತ್ತು. ಕೊನೆಗೆ ನಿರೂಪಕ ಸಲ್ಮಾನ್ ಖಾನ್ ಅವರು ಲಂಬಾ ರನ್ನು ಮನೆಯಿಂದ ಹೊರಬರುವಂತೆ ಆಹ್ವಾನಿಸಿದರು.

  ಬಿಗ್ ಬಾಸ್ 8 ನ ವೀಕೆಂಡ್ ಕಾ ವಾರ್ ಎಪಿಸೋಡ್ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡಿತು. ಪುನೀತ್ ಹಾಗೂ ಮಿನಿಷಾ ಇಬ್ಬರಲ್ಲಿ ಒಬ್ಬರು ಎಲಿಮಿನೇಟ್ ಆಗುವುದು ಖಾತ್ರಿಯಾಗಿತ್ತು. ಅದರೆ, ಇಬ್ಬರನ್ನು ರಹಸ್ಯ ಕೋಣೆಗೆ ಕರೆದೊಯ್ಯಲಾಯಿತು. ಇಬ್ಬರು ಅಲ್ಲಿ ಕುಳಿತು ಇತರೆ ಸ್ಪರ್ಧಿಗಳ ನ್ನು ನೋಡತೊಡಗಿದರು. [ಮೊದಲ ಎಲಿಮಿನೇಷನ್ನಲ್ಲೇ ಸಲ್ಲೂ ತುಂಟಾಟ]

  ಇಬ್ಬರಿಗೂ ನಮ್ಮಲ್ಲಿ ಯಾರು ಮನೆಯಿಂದ ಹೊರಕ್ಕೆ ಹೋಗುತ್ತಾರೆ ಎಂಬುದು ತಿಳಿದಿರಲಿಲ್ಲ. ಪ್ರೇಕ್ಷಕರಲ್ಲೂ ಈ ಕುತೂಹಲ ಉಳಿಯುವಂತೆ ಮಾಡುವಲ್ಲಿ ಸಲ್ಮಾನ್ ಯಶಸ್ವಿಯಾದರು. ಭಾನುವಾರದ ಎಪಿಸೋಡ್ ನಲ್ಲಿ ಸತ್ಯ ಹೊರಹಾಕಲಾಯಿತು. ಪುನೀತ್ ರಹಸ್ಯಕೋಣೆಯಿಂದ ಬಿಗ್ ಬಾಸ್ ಮನೆ ಕಡೆ ನಡೆದರೆ, ಮಿನಿಷಾ ಬಿಗ್ ಬಾಸ್ ಸ್ಪರ್ಧೆಯಿಂದ ಔಟ್ ಆಗಿದ್ದರು. [12 ಜನರಿಗೆ ಏರೋಪ್ಲೇನ್ ಹತ್ತಿಸಿದ ಸಲ್ಮಾನ್]

  ಭಾನುವಾರದ ಎಪಿಸೋಡ್ ನಲ್ಲಿ ರಣವೀರ್ ಸಿಂಗ್, ಪರಿಣಿತಿ ಛೋಪ್ರಾ, ಅಲಿ ಜಾಫರ್ ಅವರು ಮನೆ ಪ್ರವೇಶಿಸಿ ಸ್ಪಧಿಗಳಿಗೆ ಅಚ್ಚರಿ ಮೂಡಿಸಿದರು. ಕಿಲ್ ದಿಲ್ ಚಿತ್ರದ ಪ್ರಚಾರಕ್ಕಾಗಿ ಈ ಜೋಡಿ ಬಿಗ್ ಬಾಸ್ ಮನೆಗೆ ಬಂದಿದ್ದರು. ಒಟ್ಟಾರೆ ಮಿನಿಷಾ ಮನೆಯಿಂದ ಹೊರ ಬಂದಿದ್ದು ಸಲ್ಮಾನ್ ಗೂ ಅಚ್ಚರಿಯಾಗಿತ್ತು. ಕಳೆದ ಬಾರಿಯ ಸ್ಪರ್ಧಿ ತನಿಷಾರಂತೆ ಮಿನಿಷಾ ಕೂಡಾ ಇನ್ನಷ್ಟು ವಾರ ಇರುವ ಸೂಚನೆ ಇತ್ತು ಅದರೆ, ಬಿಗ್ ಬಾಸ್ ಎಂದರೆ ಅಚ್ಚರಿಗಳ ಸರಮಾಲೆ ಅಲ್ಲವೇ!

  ಎಲ್ಲರ ಮೆಚ್ಚುಗೆಯ ಸ್ಪರ್ಧಿಮಿನಿಷಾ ಔಟ್

  ಎಲ್ಲರ ಮೆಚ್ಚುಗೆಯ ಸ್ಪರ್ಧಿಮಿನಿಷಾ ಔಟ್

  ಎಲ್ಲರ ಮೆಚ್ಚುಗೆಯ ಸ್ಪರ್ಧಿಮಿನಿಷಾ ಔಟ್ ಆಗಿದ್ದು ಅವರ ಅಭಿಮಾನಿಗಳಿಗೆ ಶಾಕ್ ಆಗಿತ್ತು.ನಿರೂಪಕ ಸಲ್ಮಾನ್ ಗೂ ಅಚ್ಚರಿಯಾಗಿತ್ತು. ಮೊದಲ ದಿನ ರಹಸ್ಯ ಕೋಣೆಯಲ್ಲಿರಿಸಿದ ಮೇಲೆ ಯಾರು ಮನೆಯಲ್ಲಿ ಉಳಿಯುತ್ತಾರೆ ಎಂಬ ಕುತೂಹಲ ಹೆಚ್ಚಿತ್ತು.

  ಮಿನಿಷಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು

  ಮಿನಿಷಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು

  ಬಿಗ್ ಬಾಸ್ ಮನೆಯಲ್ಲಿ ಮಿನಿಷಾ ಇರುವಿಕೆ ಬಗ್ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

  ಬಿಗ್ ಬಾಸ್ ಮನೆಯಿಂದ ಎರಡು ಬಾರಿ ಔಟ್

  ಬಿಗ್ ಬಾಸ್ ಮನೆಯಿಂದ ಎರಡು ಬಾರಿ ಔಟ್

  ಮಿನಿಷಾ ಒಟ್ಟಾರೆ ಬಿಗ್ ಬಾಸ್ ಮನೆಯಿಂದ ಎರಡು ಬಾರಿ ಔಟ್ ಆದರು. ಮೊದಲಿಗೆ ಸ್ಪರ್ಧಿಗಳಿಂದ ವಿದಾಯಗೊಂಡು ರಹಸ್ಯ ಕೋಣೆ ತಲುಪಿದರು. ನಂತರ ಪ್ರೇಕ್ಷಕರಿಗೆ ತಿಳಿಯುವಂತೆ ಬಿಗ್ ಬಾಸ್ ಮನೆಯಿಂದ ಹೊರ ನಡೆದರು.

  ಮಿನಿಷಾ ಮೌನವೇ ಮುಳುವಾಯಿತೇ?

  ಮಿನಿಷಾ ಮೌನವೇ ಮುಳುವಾಯಿತೇ?

  ಮನೆಯಲ್ಲಿ ಎಲ್ಲರಿಗಿಂತ ಹೆಚ್ಚು ಮೌನಿಯಾಗಿ ಕಂಡು ಬಂದ ಮಿನಿಷಾರನ್ನು ಪ್ರೇಕ್ಷಕರು ತಿರಸ್ಕರಿಸಲು ಆಕೆಯ ಮೌನವೇ ಮುಳುವಾಯಿತೇ? ಇತರೆ ಸ್ಪರ್ಧಿಗಳು ಆಕೆಯ ಮೌನ ಮುರಿಯಲು ಯತ್ನಿಸಿದರೂ ಸಫಲರಾಗಿರಲಿಲ್ಲ.

  ಗೇಮ್ ಫಿಕ್ಸಿಂಗ್ ನಲ್ಲಿ ಮಿನಿಷಾ ಲಂಬಾ

  ಗೇಮ್ ಫಿಕ್ಸಿಂಗ್ ನಲ್ಲಿ ಮಿನಿಷಾ ಲಂಬಾ

  ಆರ್ಯ ಬಬ್ಬರ್ ಜೊತೆ ಗೇಮ್ ಫಿಕ್ಸಿಂಗ್ ನಲ್ಲಿ ಪಾಲ್ಗೊಂಡಿದ್ದನ್ನು ಒಪ್ಪಿಕೊಂಡಿದ್ದೆ ಮಿನಿಷಾ ಲಂಬಾಗೆ ತೊಂದರೆಯಾಯಿತು ಎನ್ನಬಹುದು.

  ಟಾಸ್ಕ್ ಗಳಲ್ಲಿ ಉತ್ಸಾಹ ತೋರಿದ್ದ ಮಿನಿಷಾ

  ಟಾಸ್ಕ್ ಗಳಲ್ಲಿ ಉತ್ಸಾಹ ತೋರಿದ್ದ ಮಿನಿಷಾ

  ಆರಂಭದ ಸೈಕಲ್ ತುಳಿಯುವ ಟಾಸ್ಕ್ ನಿಂದ ಹಿಡಿದು ಪುನೀತ್ ಗಾಗಿ ಟಾಸ್ಕ್ ಮಾಡುವ ತನಕ ಮಿನಿಷಾ ತುಂಬಾ ಉತ್ಸಾಹ ತೋರಿದ್ದರು.

  ಇತರೆ ಸ್ಪರ್ಧಿಗಳ ಮೈಂಡ್ ಗೇಮ್

  ಇತರೆ ಸ್ಪರ್ಧಿಗಳ ಮೈಂಡ್ ಗೇಮ್

  ಇತರೆ ಸ್ಪರ್ಧಿಗಳ ಮೈಂಡ್ ಗೇಮ್ ಆರ್ಥ ಮಾಡಿಕೊಳ್ಳದ ಮಿನಿಷಾ ಮನೆಯಿಂದ ಹೊರ ನಡೆಯಬೇಕಾಯಿತು.

  ಪುನೀತ್ ಲಕ್ಕಿಯಾದರೂ ಉಳಿಯುವುದು ಕಷ್ಟ

  ಪುನೀತ್ ಲಕ್ಕಿಯಾದರೂ ಉಳಿಯುವುದು ಕಷ್ಟ

  ಪುನೀತ್ ಇಸ್ಸಾರ್ ಅವರು ಈ ಬಾರಿ ಲಕ್ಕಿಯಾದರೂ ಹೆಚ್ಚು ದಿನ ಮನೆಯಲ್ಲಿ ಉಳಿಯುವುದು ಕಷ್ಟ. ಇತರೆ ಸ್ಪರ್ಧಿಗಳ ನಡುವೆ ಹಿರಿಯನಾಗಿ ಹೆಚ್ಚು ಭಾವುಕನಾಗಿ ಕಂಡು ಬರುವ ಪುನೀತ್ ಅವರು ಮುಂದಿನ ಕೆಲ ವಾರಗಳಲ್ಲೇ ಮನೆಯಿಂದ ಹೊರಬೀಳುವ ಲಕ್ಷಣಗಳಿವೆ

  English summary
  Bigg Boss 8 has Minissha Lamba, the Bollywood actress, getting eliminated from the controversial reality show. After a surprising twist in the tale, Salman Khan, host of the show, called Minissha out of the house to join him on stage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X