»   » 'ಬಿಗ್ ಬಾಸ್ ಅಲ್ಲ ಫ್ಲಾಪ್ ಬಾಸ್ ಡೌನ್ ಡೌನ್' ಅಂತಾವ್ರೆ ವೀಕ್ಷಕರು!

'ಬಿಗ್ ಬಾಸ್ ಅಲ್ಲ ಫ್ಲಾಪ್ ಬಾಸ್ ಡೌನ್ ಡೌನ್' ಅಂತಾವ್ರೆ ವೀಕ್ಷಕರು!

Posted By:
Subscribe to Filmibeat Kannada

''ಬಿಗ್ ಬಾಸ್' ಗೆ ಡೌನ್ ಡೌನ್''....''ಬಿಗ್ ಬಾಸ್-3' ಕಾರ್ಯಕ್ರಮ ಸ್ಕ್ರಿಪ್ಟೆಡ್ ಶೋ''...''ಬಿಗ್ ಬಾಸ್' ಒಂದು ಫೇಕ್ ಶೋ''...''ಬಿಗ್ ಬಾಸ್' ಅಲ್ಲ ಇದು ಫ್ಲಾಪ್ ಬಾಸ್'' - ಹೀಗಂತ ಹೇಳುತ್ತಿರುವವರು 'ಬಿಗ್ ಬಾಸ್-3' ಕಾರ್ಯಕ್ರಮವನ್ನ ತಪ್ಪದೆ ನೋಡುವ ವೀಕ್ಷಕರು.

ವೀಕ್ಷಕರು ಹೀಗೆ 'ಬಿಗ್ ಬಾಸ್' ಶೋ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವುದಕ್ಕೂ ಒಂದು ಕಾರಣ ಇದೆ. ಆ ಕಾರಣವೇ 'ಮಿಸ್ ಡ್ರಾಮಾ ಕ್ವೀನ್' ಕೃತಿಕಾ! ['ಕೃತಿಕಾ ಕೊಡೋ ಟಾರ್ಚರ್ ಹೆಂಗ್ ಗುರು ತಡೆಯೋದು?!']

ಹೌದು, ವೀಕ್ಷಕರ ಇಚ್ಛೆಯಂತೆ ನಟಿ ಕೃತಿಕಾ ಎಲಿಮಿನೇಟ್ ಆಗ್ಬೇಕಿತ್ತು. ಕಳೆದ ವಾರ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದ ಅಯ್ಯಪ್ಪ, ರೆಹಮಾನ್, ಚಂದನ್, ಕೃತಿಕಾ ಮತ್ತು ಮಿತ್ರ ಪೈಕಿ ಅಯ್ಯಪ್ಪ ಅಥವಾ ಕೃತಿಕಾ ಹೊರಹೋಗಬೇಕು ಎನ್ನುವುದು ವೀಕ್ಷಕರ ಆಶಯವಾಗಿತ್ತು. [ಡವ್ ಮಾಡದೆ 'ಬಿಗ್ ಬಾಸ್' ಡವ್ ರಾಣಿ ಕೃತಿಕಾನ ಆಚೆ ಹಾಕ್ಬೇಕ್!]

ಆ ಆಶಯವನ್ನ ಕೆಲ ವೀಕ್ಷಕರು ಕಲರ್ಸ್ ಕನ್ನಡ ಫೇಸ್ ಬುಕ್ ನಲ್ಲಿ ಪೇಜ್ ನಲ್ಲಿ ವ್ಯಕ್ತಪಡಿಸಿದ್ದರು. ಆದ್ರೆ, ಕೃತಿಕಾನ ಸೇಫ್ ಮಾಡಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಮಿತ್ರ ಔಟ್ ಆಗಿದ್ದು ಬಹುತೇಕ ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ. ಮುಂದೆ ಓದಿ....

ಫೇಸ್ ಬುಕ್ ನಲ್ಲಿ ಛೀಮಾರಿ...

ವೀಕ್ಷಕರ ಸಪೋರ್ಟ್ ಇಲ್ಲದೆ ಇದ್ದರೂ, ಮೂರು ಬಾರಿ ಕೃತಿಕಾ ಸೇಫ್ ಆಗಿದ್ದು ಹೇಗೆ ಅನ್ನೋ ಪ್ರಶ್ನೆ ವೀಕ್ಷಕರ ತಲೆಯಲ್ಲಿ ಕಾಡುತ್ತಿದೆ. ಆದ ಕಾರಣ 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ಜನರು ಛೀಮಾರಿ ಹಾಕುತ್ತಿದ್ದಾರೆ. ['ವಾರದ ಕಿಚ್ಚಿನ ಕಥೆ'ಯಲ್ಲಿ ಕಿಚ್ಚ ಸುದೀಪ್ ನೀಡಿದ ಚಮಕ್!]

ಡೌನ್ ಡೌನ್ ಬಿಗ್ ಬಾಸ್.!

ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ 'ಬಿಗ್ ಬಾಸ್'ಗೆ ಡೌನ್ ಡೌನ್ ಅಂತಿದ್ದಾರೆ ವೀಕ್ಷಕರು. ['ಬಿಗ್ ಬಾಸ್' ಮನೆಯಿಂದ ಔಟ್ ಆದ ನಟ ಮಿತ್ರ]

ಎಸ್.ಎಂ.ಎಸ್ ವರ್ಕ್ ಆಗಲ್ವಾ?

''ವೀಕ್ಷಕರು ಕಳುಹಿಸುವ ಎಸ್.ಎಂ.ಎಸ್ ವರ್ಕ್ ಆಗಲ್ಲ, ಕಾರ್ಯಕ್ರಮದಲ್ಲಿ ಏನು ಡಿಸೈಡ್ ಆಗಿರುತ್ತೋ ಅದೇ ನಡೆಯೋದು. ಎಸ್.ಎಂ.ಎಸ್ ರಿಕ್ವೆಸ್ಟ್ ಎಲ್ಲಾ ಸುಳ್ಳು'' ಎನ್ನುವುದು ವೀಕ್ಷಕರ ಅಭಿಪ್ರಾಯ. ['ಬಿಗ್ ಬಾಸ್' ಮೇಲೆ ರೆಹಮಾನ್ ಮಾಡಿದ ಆರೋಪ ಏನು?]

ಕೃತಿಕಾ ಯಾವಾಗ್ಲೋ ಹೋಗ್ಬೇಕಿತ್ತು

''ವೋಟ್ ಹಾಕುವುದೇ ನಡೆಯೋದಾದರೆ, ಕೃತಿಕಾ ಯಾವಾಗ್ಲೋ ಹೋಗ್ಬೇಕಿತ್ತು. ಬಿಗ್ ಬಾಸ್ ಈಗ ಡಬ್ಬಾ ಬಾಸ್'' ಅಂತಿದ್ದಾರೆ ವೀಕ್ಷಕರು. [ಮೈತ್ರಿಯಾ ಪ್ರಕಾರ ಬಿಗ್ ಬಾಸ್ 3 ಬ್ಲಡಿ ಫಿಕ್ಸಿಂಗ್ ಶೋ!]

ಸ್ಕ್ರಿಪ್ಟೆಡ್ ಶೋ

''ವೀಕ್ಷಕರ ಎಸ್.ಎಂ.ಎಸ್ ನಡೆಯೋಲ್ಲ ಅಂದ್ರೆ ಇದು ಪಕ್ಕಾ ಸ್ಕ್ರಿಪ್ಟೆಡ್ ಶೋ'' ಎನ್ನುವ ಕಾಮೆಂಟ್ ಗಳೇ ಹೆಚ್ಚು.

ಚಂದನ್ ಗಾಗಿ ಖುಷಿ!

ಒಂದ್ಕಡೆ 'ಬಿಗ್ ಬಾಸ್'ಗೆ ಎಲ್ಲರೂ ಛೀಮಾರಿ ಹಾಕ್ತಿದ್ರೆ, ಇನ್ನೊಂದ್ಕಡೆ ಚಂದನ್ ಸೇಫ್ ಆಗಿದ್ದಕ್ಕೆ ಕೆಲವರು ಸಂತಸ ವ್ಯಕ್ತಪಡಿಸಿದ್ದಾರೆ.

ಬೇಜಾರ್ ಆಗಿದೆ!

ಎರಡು ಎಲಿಮಿನೇಷನ್ ಅಂತ್ಹೇಳಿ ಕೃತಿಕಾನ ಸೇಫ್ ಮಾಡಿದ್ದು ವೀಕ್ಷಕರಿಗೆ ಕಿಂಚಿತ್ತೂ ಇಷ್ಟವಾಗಿಲ್ಲ.

ಫ್ಲಾಪ್ ಬಾಸ್.!

'ಬಿಗ್ ಬಾಸ್' ಬಗ್ಗೆ ವೀಕ್ಷಕರು ಬೇಸರಗೊಂಡಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಬೇಕಾ?

ನಿಮ್ಮ ಅಭಿಪ್ರಾಯ ಏನು?

ಕೃತಿಕಾ ಸೇಫ್ ಆಗಿದ್ದು, ಮಿತ್ರ ಔಟ್ ಆಗಿದ್ದು ನಿಮಗೆ ಸರಿ ಅನಿಸ್ತಾ? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ...

English summary
Bigg Boss Kannada 3 Viewers are unhappy over the decision of Kannada Actor Mithra's eviction and Actress Kruthika being safe in Bigg Boss house. Check out the viewers reaction here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada