For Quick Alerts
  ALLOW NOTIFICATIONS  
  For Daily Alerts

  'ಮಾರ್ಡನ್ ರೈತ' ಶಶಿ ಮುಡಿಗೆ 'ಬಿಗ್ ಬಾಸ್ ಕನ್ನಡ-6' ಗೆಲುವಿನ ಗರಿ.!

  |
  'ಮಾರ್ಡನ್ ರೈತ' ಶಶಿ ಮುಡಿಗೆ 'ಬಿಗ್ ಬಾಸ್ ಕನ್ನಡ-6' ಗೆಲುವಿನ ಗರಿ..! | FILMIBEAT KANNADA

  ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದ ಆರನೇ ಆವೃತ್ತಿ ಮುಕ್ತಾಯಗೊಂಡಿದೆ. ಮಾರ್ಡನ್ ರೈತ ಎಂದೇ ಗುರುತಿಸಿಕೊಂಡಿದ್ದ ಪಾರ್ಟ್ ಟೈಮ್ ಸೀರಿಯಲ್ ಆಕ್ಟರ್ ಶಶಿ ಕುಮಾರ್ ವಿಜೇತರಾಗಿ ಹೊರಹೊಮ್ಮಿದ್ದಾರೆ.

  ಕೃಷಿ ವಿಭಾಗದಲ್ಲಿ ಮಾಸ್ಟರ್ ಡಿಗ್ರಿ ಮಾಡಿರುವ ಶಶಿ ಕುಮಾರ್ ಧಾರಾವಾಹಿಯೊಂದರಲ್ಲೂ ಅಭಿನಯಿಸಿದ್ದರು. ಆದ್ರೆ, 'ಬಿಗ್ ಬಾಸ್' ಮನೆಯೊಳಗೆ ಕಾಮನ್ ಮ್ಯಾನ್ ಆಗಿ ಎಂಟ್ರಿಕೊಟ್ಟ ಶಶಿ ಕುಮಾರ್ 'ಮಾರ್ಡನ್ ಕೃಷಿಕ' ಎಂಬ ಕಾರಣಕ್ಕೆ ಹಲವು ಅಭಿಮಾನಿಗಳು ಹುಟ್ಟಿಕೊಂಡರು.

  ನೋಡಲು ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಆಗಿರುವ ಶಶಿ ಕುಮಾರ್ ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫ್ಯಾನ್ ಫಾಲೋವಿಂಗ್ ಇದೆ. ಅಭಿಮಾನಿಗಳ ಕೃಪೆಯಿಂದ ಶಶಿ ಕುಮಾರ್ 'ಬಿಗ್ ಬಾಸ್' ವಿನ್ನರ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ.

  ಟಾಪ್ 5 ಹಂತಕ್ಕೆ ಲಗ್ಗೆ ಇಟ್ಟಿದ್ದ ನವೀನ್ ಸಜ್ಜು, ಕವಿತಾ ಗೌಡ, ರಾಪಿಡ್ ರಶ್ಮಿ ಹಾಗೂ ಆಂಡ್ರ್ಯೂ ಅವರನ್ನ ಮಣಿಸಿ 'ಬಿಗ್ ಬಾಸ್' ಗೆಲ್ಲುವಲ್ಲಿ ಶಶಿ ಕುಮಾರ್ ಯಶಸ್ವಿ ಆಗಿದ್ದಾರೆ. ಮುಂದೆ ಓದಿರಿ...

  'ಬಿಗ್ ಬಾಸ್ ವಿನ್ನರ್' ಆದ ಶಶಿ ಕುಮಾರ್

  'ಬಿಗ್ ಬಾಸ್ ವಿನ್ನರ್' ಆದ ಶಶಿ ಕುಮಾರ್

  ''ಬಿಗ್ ಬಾಸ್ ಕನ್ನಡ-6 ವಿನ್ನರ್ ಶಶಿ ಕುಮಾರ್'' ಎಂದು ಶಶಿ ಕೈಹಿಡಿದೆತ್ತಿ ಸುದೀಪ್ ಘೋಷಿಸಿದರು. ಆಗ ಶಶಿ ಕುಮಾರ್ ಸಂಭ್ರಮಿಸಿದರು. ಶಶಿ ಕುಮಾರ್ ತಂದೆ-ತಾಯಿ ಕೂಡ ಆನಂದಭಾಷ್ಪ ಸುರಿಸಿದರು. ತಮಗಾಗಿ ಮತ ಹಾಕಿದ ಎಲ್ಲರಿಗೂ ಶಶಿ ಕುಮಾರ್ ಧನ್ಯವಾದ ಸಲ್ಲಿಸಿದರು.

  ಎಲ್ಲಾ ಸ್ಪರ್ಧಿಗಳಿಗೂ ಗೆಲುವು ಅರ್ಪಿಸಿದ ಶಶಿ

  ಎಲ್ಲಾ ಸ್ಪರ್ಧಿಗಳಿಗೂ ಗೆಲುವು ಅರ್ಪಿಸಿದ ಶಶಿ

  ''ನಾನು ವಿನ್ನರ್ ಎನ್ನುವುದು ನನ್ನ ಕೈಯಲ್ಲಿ ನಂಬಲು ಆಗುತ್ತಿಲ್ಲ. ಈ ಗೆಲುವನ್ನು ನಾನು ಎಲ್ಲ ಸ್ಪರ್ಧಿಗಳಿಗೂ ಡೆಡಿಕೇಟ್ ಮಾಡುವೆ. ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸುವೆ'' ಎಂದರು ಶಶಿ ಕುಮಾರ್.

  ವಿಜೇತ ಶಶಿ ಕುಮಾರ್ ಗೆ ಸಿಕ್ಕಿದ್ದೇನು.?

  ವಿಜೇತ ಶಶಿ ಕುಮಾರ್ ಗೆ ಸಿಕ್ಕಿದ್ದೇನು.?

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ವಿಜೇತರಾದ ಶಶಿ ಕುಮಾರ್ ಗೆ ಟ್ರೋಫಿಯೊಂದಿಗೆ ಐವತ್ತು ಲಕ್ಷ ರೂಪಾಯಿ ಲಭಿಸಿದೆ.

  ಬಂದ ಹಣದಲ್ಲಿ ಶಶಿ ಏನು ಮಾಡ್ತಾರೆ.?

  ಬಂದ ಹಣದಲ್ಲಿ ಶಶಿ ಏನು ಮಾಡ್ತಾರೆ.?

  ''ಕಾಮನ್ ಮ್ಯಾನ್ ಆಗಿ 'ಬಿಗ್ ಬಾಸ್' ಮನೆಯೊಳಗೆ ಬಂದೆ. ಇದರಿಂದ ಬಂದ ಹಣವನ್ನು ಕೃಷಿಯಲ್ಲಿ ತಂತ್ರಜ್ಞಾನ ಉಪಯೋಗದ ಬಗ್ಗೆ ಯುವಕರಿಗೆ ಅರಿವು ಮೂಡಿಸಲು ವಿನಿಯೋಗಿಸುವೆ'' ಎಂದಿದ್ದಾರೆ ಶಶಿ ಕುಮಾರ್.

  ರನ್ನರ್ ಅಪ್ ಆದ ನವೀನ್ ಸಜ್ಜು

  ರನ್ನರ್ ಅಪ್ ಆದ ನವೀನ್ ಸಜ್ಜು

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಶಶಿ ಕುಮಾರ್ ವಿನ್ನರ್ ಆದರೆ ರನ್ನರ್ ಅಪ್ ಸ್ಥಾನ ಅಲಂಕರಿಸಿದ್ದು ಗಾಯಕ, ಸಂಗೀತ ಸಂಯೋಜಕ ನವೀನ್ ಸಜ್ಜು. ಇನ್ನೂ ಮೂರನೇ ಸ್ಥಾನಕ್ಕೆ ಕವಿತಾ ಗೌಡ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

  ಜನರ ಮನಸ್ಸು ಗೆದ್ದಿರುವೆ ಎಂದ ನವೀನ್ ಸಜ್ಜು

  ಜನರ ಮನಸ್ಸು ಗೆದ್ದಿರುವೆ ಎಂದ ನವೀನ್ ಸಜ್ಜು

  ''ಇಲ್ಲಿಯವರೆಗೂ ಬಂದಿದ್ದೇನೆ ಅಂದ್ರೆ ನಾನು ಜನರ ಮನಸ್ಸು ಗೆದ್ದಿದ್ದೇನೆ. ನಿಮ್ಮಿಂದ (ಸುದೀಪ್) ಚಪ್ಪಾಳೆ ಪಡೆದಿದ್ದೇನೆ. ಆ ಸಾರ್ಥಕತೆ ನನಗಿದೆ. ಇವತ್ತಿಂದ ದೊಡ್ಡ ಜವಾಬ್ದಾರಿ ಇದೆ. ಜನಪ್ರಿಯತೆ ಅಂತೂ ಸಿಕ್ಕಿದೆ. ಅದನ್ನ ಆಡಂಬರಕ್ಕೆ ಉಪಯೋಗಿಸಿಕೊಳ್ಳದೆ, ಜನರಿಗೆ ಹಾಡುಗಳ ಮೂಲಕ ಮನರಂಜನೆ ಕೊಡುವೆ. ಜನರ ನಂಬಿಕೆ ಉಳಿಸಿಕೊಳ್ಳುವೆ'' ಎಂದರು ನವೀನ್ ಸಜ್ಜು.

  ನವೀನ್ ಗೆ ಸುದೀಪ್ ಸಹಾಯ

  ನವೀನ್ ಗೆ ಸುದೀಪ್ ಸಹಾಯ

  ಒಂದ್ವೇಳೆ 'ಬಿಗ್ ಬಾಸ್' ಗೆದ್ದರೆ, ಸ್ಟುಡಿಯೋ ಮಾಡುವೆ ಅಂತ ನವೀನ್ ಸಜ್ಜು ಹೇಳಿದ್ದರು. ಆದ್ರೆ, ನವೀನ್ ಸಜ್ಜು ಗೆಲ್ಲಲಿಲ್ಲ. ಹೀಗಾಗಿ, ''ಸ್ಟುಡಿಯೋ ಮಾಡಲು ನನ್ನ ಸಂಪೂರ್ಣ ಬೆಂಬಲ ನಿಮಗೆ ಇರುತ್ತದೆ. ನಮ್ಮ ಚಿತ್ರರಂಗಕ್ಕೆ ನೀವು ಹೆಮ್ಮೆಯ ಸಂಗೀತ ನಿರ್ದೇಶಕರಾಗಿ. ನಾನು ನಿಮ್ಮ ಸಪೋರ್ಟ್ ಗೆ ಇರುವೆ. ನಿಮಗಾಗಿ ಖಂಡಿತ ಒಂದು ಸ್ಟುಡಿಯೋ ಆಗುತ್ತೆ'' ಎಂದು ನವೀನ್ ಸಜ್ಜುಗೆ ಸುದೀಪ್ ಭರವಸೆ ನೀಡಿದರು.

  English summary
  Modern Farmer Shashi Kumar wins Bigg Boss Kannada 6. Singer, Music Director Naveen Sajju becomes first runner up.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X