For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್ ಸ್ಪರ್ಧಿಯ ಅಭಿಮಾನಿಗಳ ಮೇಲೆ ದೂರು ದಾಖಲಿಸಿದ ಮಾಜಿ ಸ್ಪರ್ಧಿ

  |

  ತೆಲುಗು ಬಿಗ್‌ಬಾಸ್ 4 ಅಂತಿಮ ಹಂತಕ್ಕೆ ಬಂದಿದ್ದು, ಸ್ಪರ್ಧಿ ಅಭಿಜಿತ್, ಅಖಿಲ್, ಸೋಹೆಲ್ ನಡುವೆ ಅಂತಿಮ ಸ್ಪರ್ಧೆ ಏರ್ಪಟ್ಟಿದೆ.

  ಕೆಲವು ದಿನಗಳ ಮುಂಚಿನವರೆಗೂ ಬಿಗ್‌ಬಾಸ್ ಮನೆಯಲ್ಲಿದ್ದ ಹಾಗೂ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿಕೊಂಡಿದ್ದ ಮೋನಲ್ ಗುಜ್ಜರ್ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.

  ಆದರೆ ಹೊರಗೆ ಬಂದಿರುವ ಮೋನಲ್ ಗುಜ್ಜರ್, ಸೈಬರ್ ಪೊಲೀಸ್ ಠಾಣೆಗೆ ಅಭಿಜಿತ್ ಅಭಿಮಾನಿಗಳ ಮೇಲೆ ದೂರು ದಾಖಲಿಸಿದ್ದಾರೆ.

  ಅಭಿಜಿತ್ ಕುರಿತಂತೆ ಮೋನಲ್ ಸಹೋದರಿ ಸಾಮಾಜಿಕ ಜಾಲತಾಣದಲ್ಲಿ, 'ನನ್ನ ಅಕ್ಕನ ಬಗ್ಗೆ ಆಕೆಯ ಬೆನ್ನ ಹಿಂದೆ ಮಾತನಾಡಬೇಡ' ಎಂದು ಪೋಸ್ಟ್ ಹಾಕಿದ್ದರು. ಇದರ ಬಗ್ಗೆ ಆಕ್ರೋಶಿತರಾದ ಅಭಿಜಿತ್ ಅಭಿಮಾನಿಗಳು ಮೋನಲ್ ಸಹೋದರಿಯನ್ನು ವಿಪರೀತವಾಗಿ ಟ್ರೋಲ್ ಮಾಡಿದ್ದಾರೆ.

  ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಮೋನಲ್ ಗುಜ್ಜರ್, 'ನನ್ನ ತಂಗಿಯನ್ನು ಕೆಟ್ಟದಾಗಿ ಟ್ರೋಲ್ ಮಾಡಲಾಗಿದೆ. ಆಕೆಗೆ ಸಾವಿನ ಬೆದರಿಕೆ ಸಹ ಹಾಕಲಾಗಿದೆ. ಇದನ್ನು ಅಭಿಜಿತ್ ನ ಪಿಆರ್ ತಂಡ ಮಾಡುತ್ತಿದೆಯೋ ಅಥವಾ ಅಭಿಮಾನಿಗಳು ಮಾಡುತ್ತಿದ್ದಾರೊ ಗೊತ್ತಿಲ್ಲ, ಆದರೆ ನಾನಂತೂ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ' ಎಂದಿದ್ದಾರೆ.

  ಆರಂಭದಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಅಭಿಜಿತ್ ಹಾಗೂ ಮೋನಲ್ ಗುಜ್ಜರ್ ಚೆನ್ನಾಗಿಯೇ ಹೊಂದಾಣಿಕೆಯಿಂದ ಇದ್ದರು, ಆದರೆ ದಿನಕಳೆದಂತೆ ಇಬ್ಬರ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಪ್ರಾರಂಭವಾದರು. ಮೋನಲ್ ಗುಜ್ಜರ್ ಸಹ ಬಿಗ್‌ಬಾಸ್‌ನ ಜನಪ್ರಿಯ ಸ್ಪರ್ಧಿಯಾಗಿದ್ದರು, ಆದರೆ ಅಂತಿಮ ಹಂತಕ್ಕೆ ಬರಲಾಗಲಿಲ್ಲ.

  KGF 2 ಸೆಟ್ ಗೆ ಹೋದ ಕಾರ್ತಿಕ್ ಗೌಡ ಪರಿಸ್ಥಿತಿ ನೋಡಿ | Filmibeat Kannada

  ಆದರೆ ಬಿಗ್‌ಬಾಸ್ಸ 4 ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದುಕೊಂಡ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಮೋನಲ್ ಗುಜ್ಜರ್ ಪಾತ್ರರಾಗಿದ್ದಾರೆ. ಬಿಗ್‌ಬಾಸ್‌ನ ಜನಪ್ರಿಯ ಸ್ಪರ್ಧಿ ಅಭಿಜಿತ್‌ಗಿಂತಲೂ ಹೆಚ್ಚಿನ ಮೊತ್ತವನ್ನು ಪಡೆದುಕೊಂಡಿದ್ದಾರಂತೆ ಮೋನಲ್ ಗುಜ್ಜರ್.

  English summary
  Bigg Boss 4 ex contestant Monal Gujjar files complaint against Abhijit's fans and PR for trolling and giving death threats to her sister.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X