For Quick Alerts
  ALLOW NOTIFICATIONS  
  For Daily Alerts

  ಕಿರುತೆರೆ ಚೆಲುವೆಯರಲ್ಲಿ 'ಕ್ವೀನ್' ಪಟ್ಟಕ್ಕೇರಿದ ನಂ.1 ನಟಿ ಯಾರು.?

  By Bharath Kumar
  |
  ರಾಧಾ ಟೀಚರ್ ಗೆ ಒಲಿದು ಬಂದ ಭಾಗ್ಯ ಇದೆ | Filmibeat Kannada

  'ರಾಧ ರಮಣ' ಧಾರಾವಾಹಿಯ ಅಭಿಮಾನಿಗಳಿಗೆ ಇದು ಸಿಹಿ ಸುದ್ದಿ. ಅರದಲ್ಲೂ ರಾಧ ಪಾತ್ರ ನಿರ್ವಹಿಸುವ ಶ್ವೇತಾ ಪ್ರಸಾದ್ ಅವರನ್ನ ಇಷ್ಟಪಡುವ ಫ್ಯಾನ್ಸ್ ಗಂತೂ ಡಬಲ್ ಖುಷಿ. ಯಾಕಂದ್ರೆ, 2017ನೇ ಮೋಸ್ಟ್ ಡಿಸೈರಬಲ್ ಕಿರುತೆರೆ ಮಹಿಳೆಯಾಗಿ ಶ್ವೇತಾ ಪ್ರಸಾದ್ ಆಯ್ಕೆಯಾಗಿದ್ದಾರೆ.

  'ಟೈಮ್ಸ್ ಮೋಸ್ಟ್ ಡಿಸೈರಬಲ್ ವುಮೆನ್ ಟೆಲಿವಿಷನ್' ಪಟ್ಟಿ ಬಹಿರಂಗವಾಗಿದ್ದು, ಇತ್ತೀಚಿಗಷ್ಟೆ ಪುರುಷರ ವಿಭಾದಲ್ಲಿ ಫಲಿತಾಂಶ ಹೊರಬಿದ್ದಿತ್ತು. ಈಗ ಮಹಿಳೆಯರ ವಿಭಾದಲ್ಲಿ ಪಟ್ಟಿ ಬಿಡುಗಡೆಯಾಗಿದ್ದು, 15 ಜನರ ಲಿಸ್ಟ್ ಸಿಕ್ಕಿದೆ. ಇವರ ಪೈಕಿ 'ರಾಧ ರಮಣ' ಶ್ವೇತಾ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

  ಕಿರುತೆರೆಯ ಈ ನಟರ ಪೈಕಿ ನಂ 1 ಪಟ್ಟ ಪಡೆದವರು ಯಾರು ? ಕಿರುತೆರೆಯ ಈ ನಟರ ಪೈಕಿ ನಂ 1 ಪಟ್ಟ ಪಡೆದವರು ಯಾರು ?

  ಪುರುಷರ ಪಟ್ಟಿಯಲ್ಲಿ ನಟ ವಿಜಯ ಸೂರ್ಯ ಪ್ರಥಮ ಸ್ಥಾನ ಪಡೆದಿದ್ದಾರೆ. ಹಾಗಿದ್ರೆ, ಇನ್ನುಳಿದಂತೆ ಯಾವೆಲ್ಲ ಧಾರಾವಾಹಿ ಮತ್ತು ಕಿರುತೆರೆ ಮಹಿಳೆಯರು 'ಟೈಮ್ಸ್ ಮೋಸ್ಟ್ ಡಿಸೈರಬಲ್ ವುಮೆನ್' ಆಗಿದ್ದಾರೆ ಮತ್ತು ಅವರ ಬಗ್ಗೆ ಒಂದು ಸಣ್ಣ ಪರಿಚಯ ಇಲ್ಲಿದೆ. ಮುಂದೆ ಓದಿ....

  'ರಾಧ ರಮಣ' ಶ್ವೇತಾ

  'ರಾಧ ರಮಣ' ಶ್ವೇತಾ

  ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ರಾಧ ರಮಣ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟಿಯಾಗಿರುವ ಶ್ವೇತಾ ಪ್ರಸಾದ್ ಅವರ 2017ನೇ ವರ್ಷದ ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಶ್ವೇತಾ ಅವರು RJ ಪ್ರದೀಪ್ ಜೊತೆಯಲ್ಲಿ ವಿವಾಹವಾಗಿದ್ದಾರೆ.

  'ನಾಗಕನ್ನಿಕೆ' ಅಧಿತಿ

  'ನಾಗಕನ್ನಿಕೆ' ಅಧಿತಿ

  ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ 'ನಾಗಕನ್ನಿಕೆ' ಅಧಿತಿ ಪ್ರಭುದೇವ ಎರಡನೇ ಸ್ಥಾನದಲ್ಲಿದ್ದಾರೆ. ಕಿರುತೆರೆಯಲ್ಲಿ ಮಾತ್ರವಲ್ಲದೇ 'ಧೈರ್ಯಂ' ಸೇರಿದಂತೆ ಕನ್ನಡ ಕೆಲವು ಸಿನಿಮಾಗಳಲ್ಲಿ ಕೂಡ ಅಧಿತಿ ನಟಿಸಿದ್ದಾರೆ.

  'ಗೊಂಬೆ' ನೇಹಾ ಗೌಡ

  'ಗೊಂಬೆ' ನೇಹಾ ಗೌಡ

  'ಲಕ್ಷ್ಮಿಬಾರಮ್ಮ' ಧಾರಾವಾಹಿಯ ಎಲ್ಲರ ನೆಚ್ಚಿನ 'ಗೊಂಬೆ' ನೇಹಾ ಗೌಡ ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನಟಿ ಸೋನು ಗೌಡ ಅವರ ಸಹೋದರಿಯಾಗಿರುವ ನೇಹಾ, ಚಂದನ್ ಅವರ ಜೊತೆ ವಿವಾಹವಾಗಿದ್ದರು.

  ನಿರೂಪಕಿ ಅನುಶ್ರೀ

  ನಿರೂಪಕಿ ಅನುಶ್ರೀ

  ಕಿರುತೆರೆ ಕಾರ್ಯಕ್ರಮಗಳಲ್ಲಿ ಧೂಳೆಬ್ಬಿಸುವ ನಿರೂಪಕ ಅನುಶ್ರೀ ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸದ್ಯ, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಸರಿಗಪಮ-13' ಕಾರ್ಯಕ್ರಮವನ್ನ ನಿರೂಪಣೆ ಮಾಡುತ್ತಿದ್ದಾರೆ.

  ವೈಷ್ಣವಿ ಗೌಡ

  ವೈಷ್ಣವಿ ಗೌಡ

  'ಅಗ್ನಿಸಾಕ್ಷಿ' ಧಾರಾವಾಹಿಯ ನಟಿ ವೈಷ್ಣವಿ ಗೌಡ ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಸನ್ನಿಧಿ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಮನೆಮಗಳಾಗಿರುವ ವೈಷ್ಣವಿ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ.

  ಅನುಪಮಾ ಗೌಡ

  ಅನುಪಮಾ ಗೌಡ

  'ಬಿಗ್ ಬಾಸ್' ಮೂಲಕ ಮೋಡಿ ಮಾಡಿದ ನಟಿ ಅನುಪಮಾ ಗೌಡ ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. 'ಬಿಗ್ ಬಾಸ್' ಗೂ ಮುಂಚೆ 'ಅಕ್ಕ' ಧಾರಾವಾಹಿಯಲ್ಲಿ ಅನುಪಮಾ ನಟಿಸುತ್ತಿದ್ದರು. ಈಗ ಸಿನಿಮಾಗಳಲ್ಲೂ ಕೂಡ ಬ್ಯುಸಿಯಾಗಿದ್ದಾರೆ.

  ಆಶಿತಾ ಚಂದ್ರಪ್ಪ

  ಆಶಿತಾ ಚಂದ್ರಪ್ಪ

  ಕಿರುತೆರೆ ನಟಿ ಆಶಿತಾ ಚಂದ್ರಪ್ಪ ಅವರು ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದುಕೊಂಡಿದ್ದಾರೆ. ಹಲವು ಧಾರಾವಾಹಿಯಲ್ಲಿ ನಟಿಸಿರುವ ಆಶಿತಾ, 'ಬಿಗ್ ಬಾಸ್ ಕನ್ನಡ-5'ನಲ್ಲಿ ಭಾಗಿಯಾಗಿದ್ದರು.

  'ನಾಗಿಣಿ' ದೀಪಿಕಾ

  'ನಾಗಿಣಿ' ದೀಪಿಕಾ

  ಜೀ ಕನ್ನಡದಲ್ಲಿ ಪ್ರಸಾರವಾಗುವ 'ನಾಗಿಣಿ' ಚಿತ್ರದಲ್ಲಿ 'ನಾಗಿಣಿ' ಪಾತ್ರದ ಮೂಲಕ ಕನ್ನಡಿಗರ ಮನೆಮತಾಗಿರುವ ದೀಪಿಕಾ ದಾಸ್ ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ಏಂಟನೇ ಸ್ಥಾನದಲ್ಲಿದ್ದಾರೆ.

  'ಪುಟ್ಟಗೌರಿ' ರಂಜನಿ

  'ಪುಟ್ಟಗೌರಿ' ರಂಜನಿ

  'ಪುಟ್ಟಗೌರಿ ಮದುವೆ' ಧಾರಾವಾಹಿಯ ರಂಜನಿ ರಾಘವನ್ ಸೀರಿಯಲ್ ವಿಚಾರದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಈಗ ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ಒಂಭತ್ತನೇ ಸ್ಥಾನದಲ್ಲಿದ್ದಾರೆ. 'ರಾಜಹಂಸ' ಚಿತ್ರದಲ್ಲಿ ನಾಯಕಿಯಾಗಿ ಕೂಡ ಅಭಿನಯಿಸಿದ್ದಾರೆ.

  ಕವಿತಾ ಗೌಡ

  ಕವಿತಾ ಗೌಡ

  'ವಿದ್ಯಾ ವಿನಾಯಕ' ಧಾರಾವಾಹಿ ಮೂಲಕ ಜನಪ್ರಿಯರಾಗಿರುವ ಕವಿತಾ ಗೌಡ ಅವರು ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದಾರೆ.

  ನಿಖಿಲ್ ಸುಮನ್

  ನಿಖಿಲ್ ಸುಮನ್

  'ಶನಿ' ಧಾರಾವಾಹಿಯಲ್ಲಿ 'ಸನ್ಯಾ' ದೇವಿ ಪಾತ್ರ ನಿರ್ವಹಿಸುತ್ತಿರುವ ನಟಿ ನಿಖಿಲ್ ಸುಮನ್ ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ಹನ್ನೊಂದನೇ ಸ್ಥಾನದಲ್ಲಿದ್ದಾರೆ. ಸುಮನ್ ಜಾದುಗರ್ ಅವರ ಜೊತೆ ಇವರ ವಿವಾಹವಾಗಿದೆ.

  ಶ್ವೇತಾ ಚಂಗಪ್ಪ

  ಶ್ವೇತಾ ಚಂಗಪ್ಪ

  'ಮಜಾ ಟಾಕೀಸ್'ನಲ್ಲಿ ಮಿಂಚುತ್ತಿರುವ ಶ್ವೇತಾ ಚಂಗಪ್ಪ ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ಹನ್ನೆರಡನೇ ಸ್ಥಾನದಲ್ಲಿದ್ದಾರೆ. ಬಿಗ್ ಬಾಸ್ ಕನ್ನಡ, ಕೆಲವು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಶ್ವೇತಾ ಚಂಗಪ್ಪ ಅಭಿನಯಿಸಿದ್ದಾರೆ.

  'ಕುಲವಧು' ಅಮೃತಾ

  'ಕುಲವಧು' ಅಮೃತಾ

  'ಕುಲವಧು' ಧಾರಾವಾಹಿಯ ನಟಿ ಅಮೃತಾ ರಾಮಮೂರ್ತಿ ಅವರು ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ಹದಿಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

  ದೀಪ್ತಿ ಮನ್ನೆ

  ದೀಪ್ತಿ ಮನ್ನೆ

  'ಪದ್ಮಾವತಿ' ಧಾರಾವಾಹಿ ದೀಪ್ತಿ ಮನ್ನೆ ಕೂಡ ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ಹದಿನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

  ಅಧ್ವಿತಿ ಶೆಟ್ಟಿ

  ಅಧ್ವಿತಿ ಶೆಟ್ಟಿ

  ಎರಡು ಕನಸು ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಅಧ್ವಿತಿ ಶೆಟ್ಟಿ ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ಹದಿನೈದನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಹಿಂದೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ಅಧ್ವಿತಿ ಅಭಿನಯಿಸಿದ್ದರು.

  English summary
  Here are the women who have made it to the maiden Bangalore Times 15 Most Desirable Women on Television 2017. These dazzling beauties look every bit the women that all households would like to welcome with open arms...

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X