Just In
Don't Miss!
- News
ಬಜೆಟ್ 2021 ಬಗ್ಗೆ ತಿಳಿಯಲು ವಿಶೇಷ APP ಬಿಡುಗಡೆ ಮಾಡಿದ ಸಚಿವೆ ನಿರ್ಮಲಾ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಡ್ರಾಮಾ ಜೂನಿಯರ್ಸ್'ಗೆ ಬಂದ ಹೊಸ ತೀರ್ಪುಗಾರರು ಇವರೇ ನೋಡಿ!

'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಿಂದ ನಿರ್ದೇಶಕ ಟಿ.ಎನ್.ಸೀತಾರಾಮ್ ಹೊರಬಂದ ವಿಷಯವನ್ನು ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ದೀರಿ. ಇದೀಗ ಈ ಕಾರ್ಯಕ್ರಮಕ್ಕೆ ಒಬ್ಬ ಹೊಸ ತೀರ್ಪುಗಾರರ ಆಗಮನ ಕೂಡ ಆಗಿದೆ.
ಇನ್ನು ಮುಂದೆ ಹಿರಿಯ ನಟಿ ಲಕ್ಷ್ಮಿ ಮತ್ತು ವಿಜಯ ರಾಘವೇಂದ್ರ ಜೊತೆ 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಲ್ಲಿ ಯಾರಿರುತ್ತಾರೆ ಎಂಬ ದೊಡ್ಡ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. 'ಜೀ ಕನ್ನಡ' ವಾಹಿನಿ ತಮ್ಮ ವೀಕ್ಷಕರಿಗೆ ಈ ವಾರ ಒಂದು ದೊಡ್ಡ ಸರ್ಪ್ರೈಸ್ ನೀಡುವುದಕ್ಕೆ ರೆಡಿ ಆಗಿದೆ.
ರಂಗಭೂಮಿ ಹಾಗೂ ಸಿನಿಮಾ ರಂಗದಲ್ಲಿ ದಶಕಗಳ ಕಾಲ ಕೆಲಸ ಮಾಡಿರುವ ನಟರೊಬ್ಬರನ್ನು ವಾಹಿನಿ 'ಡ್ರಾಮಾ ಜೂನಿಯರ್ಸ್' ತೀರ್ಪುಗಾರರ ಖುರ್ಚಿಯಲ್ಲಿ ಕೂರಿಸಿದೆ. ಮುಂದೆ ಓದಿ...

ಮುಖ್ಯಮಂತ್ರಿ ಚಂದ್ರು
ಕನ್ನಡ ಚಿತ್ರರಂಗ ಕಂಡ ಅದ್ಭುತ ಹಾಸ್ಯ ನಟ ಹಾಗೂ ಪೋಷಕ ಕಲಾವಿದ ಮುಖ್ಯಮಂತ್ರಿ ಚಂದ್ರು ಅವರು 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದ ಹೊಸ ತೀರ್ಪುಗಾರರಾಗಿದ್ದಾರೆ.

ಒಳ್ಳೆಯ ಆಯ್ಕೆ
ರಂಗಭೂಮಿ ಮತ್ತು ಸಿನಿಮಾ... ಎರಡರಲ್ಲಿಯೂ ದೊಡ್ಡ ಹೆಸರು ಮಾಡಿರುವ ಮುಖ್ಯಮಂತ್ರಿ ಚಂದ್ರು ಅವರನ್ನು 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದ ತೀರ್ಪುಗಾರರಾಗಿ ಆಯ್ಕೆ ಮಾಡಿದ್ದು, ಬಹಳ ಒಳ್ಳೆಯ ನಿರ್ಧಾರ ಅಂತ ಹೇಳಬಹುದು.

ಪ್ರೋಮೋ ನೋಡಿ
ಮುಖ್ಯಮಂತ್ರಿ ಚಂದ್ರು 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದೆ.
'ಡ್ರಾಮಾ ಜೂನಿಯರ್ಸ್'ನಿಂದ ಹೊರ ಬಂದ ಟಿ.ಎನ್.ಸೀತಾರಾಮ್.! ಯಾಕೆ.?

ಸೀತಾರಾಮ್ ಶುಭ ಹಾರೈಕೆ
ನಿರ್ದೇಶಕ ಸೀತಾರಾಮ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ''ನನ್ನ ಜಾಗಕ್ಕೆ ಬರಲಿರುವ ಚಂದ್ರು ನನಗಿಂತ ಸೂಕ್ಷ್ಮಜ್ಞ ಮತ್ತು ನನಗಿಂತ ವಿನೋದ ಪ್ರೇಮಿ. ನಿಮಗೆಲ್ಲಾ ಇಷ್ಟವಾಗುತ್ತಾರೆ'' ಎಂದು ಶುಭ ಕೋರಿದ್ದಾರೆ.