»   » ಇದೇ ಭಾನುವಾರ ಕಲರ್ಸ್ ಕನ್ನಡದಲ್ಲಿ 'ಮುಂಗಾರು ಮಳೆ-2' ಅಬ್ಬರ

ಇದೇ ಭಾನುವಾರ ಕಲರ್ಸ್ ಕನ್ನಡದಲ್ಲಿ 'ಮುಂಗಾರು ಮಳೆ-2' ಅಬ್ಬರ

Posted By:
Subscribe to Filmibeat Kannada

ಕಿರುತೆರೆಯಲ್ಲೇ ಮೊಟ್ಟ ಮೊದಲ ಬಾರಿಗೆ... ನಿಮ್ಮ ಅಚ್ಚುಮೆಚ್ಚಿನ ಕಲರ್ಸ್ ಕನ್ನಡ ವಾಹಿನಿಯಲ್ಲಿ... 2016 ರ ಸೂಪರ್ ಹಿಟ್ ಚಲನಚಿತ್ರ 'ಮುಂಗಾರು ಮಳೆ-2'.. ಇದೇ ಭಾನುವಾರ ಸಂಜೆ 5 ಗಂಟೆಗೆ..

ಹೌದು, ಸೆಪ್ಟೆಂಬರ್ 10, 2016 ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಂಗಾರು ಮಳೆ-2' ಸಿನಿಮಾ ಜನವರಿ 22 ರಂದು ಸಂಜೆ 5 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.[ವಿಮರ್ಶೆ: 'ಮುಂಗಾರು ಮಳೆ' ಅಮರ, 'ಮುಂಗಾರು ಮಳೆ-2' ಒಂಥರಾ.!]

'Mungaru Male-2' - Colors Kannada Premier on Jan 22nd

ಶಶಾಂಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಮುಂಗಾರು ಮಳೆ-2' ಚಿತ್ರಕ್ಕೆ ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದ್ರೂ, ಕಲೆಕ್ಷನ್ ವಿಷ್ಯದಲ್ಲಿ ಮಾತ್ರ ಡಲ್ ಆಗಲಿಲ್ಲ.

ಮೊದಲ ಬಾರಿಗೆ ಗಣೇಶ್ ತಂದೆ ಪಾತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಕಾಣಿಸಿಕೊಂಡಿರುವುದೂ ಕೂಡ ಈ ಚಿತ್ರದಲ್ಲಿಯೇ. ರಾಜಸ್ಥಾನ, ಕೊಡಗು ಸೇರಿದಂತೆ ಕಣ್ಣು ಕೋರೈಸುವ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ 'ಮುಂಗಾರು ಮಳೆ-2' ಚಿತ್ರವನ್ನ ನೀವು ಥಿಯೇಟರ್ ನಲ್ಲಿ ನೋಡಿಲ್ಲ ಅಂದ್ರೆ, ಈಗ ಮಿಸ್ ಮಾಡಿಕೊಳ್ಳಬೇಡಿ...'ಸರಿಯಾಗಿ ನೆನಪಿದೆ' ತಾನೆ... ಭಾನುವಾರ ಸಂಜೆ 5 ಗಂಟೆಗೆ...

English summary
Golden Star Ganesh starrer 'Mungaru Male-2' TV Premier on Jan 22nd in Colors Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada