For Quick Alerts
  ALLOW NOTIFICATIONS  
  For Daily Alerts

  ಮಹಾ ಗುರು ಹಂಸಲೇಖ ಬಳಿ ಕೆಲಸ ಮಾಡಿದ್ದರು ಎ ಆರ್ ರೆಹಮಾನ್

  By Naveen
  |

  ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸಂಗೀತ ನಿರ್ದೇಶಕ. ಸಾವಿರಾರು ಸೂಪರ್ ಹಿಟ್ ಹಾಡುಗಳು, ನೂರಾರೂ ದೊಡ್ಡ ದೊಡ್ಡ ಪ್ರಶಸ್ತಿ ಎಲ್ಲವನ್ನು ಅವರು ಪಡೆದಿದ್ದಾರೆ. ವಿಶೇಷ ಅಂದರೆ, ರೆಹಮಾನ್ ನಾದಬ್ರಹ್ಮ ಹಂಸಲೇಖ ಅವರ ಜೊತೆಗೆ ಕೆಲ ಕಾಲ ಕೆಲಸ ಮಾಡಿದ್ದರಂತೆ.

  ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ಹಂಸಲೇಖ ಅವರೇ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಕಾರ್ಯಕ್ರಮದ ಒಂದು ಸಂದರ್ಭದಲ್ಲಿ ಮಾತನಾಡುವ ವೇಳೆ ಹಂಸಲೇಖ ರೆಹಮಾನ್ ಬಗ್ಗೆ ಯಾರಿಗೂ ತಿಳಿಯದ ವಿಷಯವನ್ನು ಹೇಳಿಕೊಂಡಿದ್ದಾರೆ.

  'ಬ್ರೇಕಿಂಗ್ ನ್ಯೂಸ್' ವಿರುದ್ಧ ಹಂಸಲೇಖ ಬೇಸರ: 'ವಾಹಿನಿ ಅಂದರೆ ಮೋಹಿನಿ' ಎಂದ ಮನೋಹರ್! 'ಬ್ರೇಕಿಂಗ್ ನ್ಯೂಸ್' ವಿರುದ್ಧ ಹಂಸಲೇಖ ಬೇಸರ: 'ವಾಹಿನಿ ಅಂದರೆ ಮೋಹಿನಿ' ಎಂದ ಮನೋಹರ್!

  ''6-8 ತಾಳಕ್ಕೆ ತಮಿಳು ನಾಡಿನ ನಟರು ಕೊಡುವ ಬಾಡಿ ಗ್ರೇಸ್ ಬೇರೆ ಯಾರು ಕೊಡಲು ಆಗುವುದಿಲ್ಲ ಎಂಬ ದೊಡ್ಡ ಮಾತು ಇದೆ. ರೆಹಮಾನ್ ಇಪ್ಪತೈದು ವರ್ಷಗಳ ಹಿಂದೆ ನನ್ನ ಆರ್ಕೆಸ್ಟ್ರಾದಲ್ಲಿ ಕೆಲವು ಕಾಲ ನೂಡಿಸಿದ್ದ. ಆತ ತುಂಬ ಚುರುಕಾಗಿ ನುಡಿಸುತ್ತಿದ್ದನ್ನು ನೋಡಿ ನಾನು ಅವನ ಜೊತೆಗೆ ಮಾತನಾಡುತ್ತಿದೆ. ಒಮ್ಮೆ 'ಪ್ರೀತಿಯಲ್ಲಿ ಇರೋ ಸುಖ ಗೊತ್ತೆ ಇರಲಿಲ್ಲ..' ಹಾಡನ್ನು ಡಿಫರೆಂಟ್ ಆಗಿ ಪ್ರೊಗ್ರಾಮ್ ಮಾಡಿದ್ದ. ಆಗ ನಾನು ನಿನಗೆ ಇಷ್ಟೊಂದು ಟ್ಯಾಲೆಂಟ್ ಇದೆ. ನೀನು ಮ್ಯೂಸಿಕ್ ಡೈರೆಕ್ಟರ್ ಆದ್ರೆ ಏನ್ ಮಾಡ್ತಿಯಾ ? ಅಂತ ಕೇಳಿದೆ. ಆಗ ಅವನು ಸರ್ ನಾನು 6-8 ತಾಳದಲ್ಲಿ ಮಾತ್ರ ಸಾಂಗ್ ಮಾಡಲ್ಲ ಅಂದಿದ್ದ. ಇದುವರೆಗೆ ರೆಹಮಾನ್ 6-8 ತಾಳದಲ್ಲಿ ಹಾಡು ಮಾಡಿಲ್ಲ.'' ಎಂದು ಹಳೆಯ ನೆನಪನ್ನು ಹಂಸಲೇಖ ಹಂಚಿಕೊಂಡರು.

  ''ರೆಹಮಾನ್ ಚಿಕ್ಕ ವಯಸ್ಸಿನಲ್ಲಿಯೇ ಗುರಿ ಇಟ್ಟುಕೊಂಡಿದ್ದ ಮ್ಯೂಸಿಕ್ ಡೈರೆಕ್ಟರ್.'' ಎಂದು ಹೇಳಿದ ಹಂಸಲೇಖ ರೆಹಮಾನ್ ಪ್ರತಿಭೆಯನ್ನು ಹೊಗಳಿದರು.

  English summary
  Kannada music director Hamsalekha spoke about AR Rahman.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X