»   » ಚಿಂತೆ ಬಿಡ್ರಿ ನಗೋಣ ಬರ್ರಿ ಸುವರ್ಣ ಚಾನಲ್ ಹಾಕ್ರಿ

ಚಿಂತೆ ಬಿಡ್ರಿ ನಗೋಣ ಬರ್ರಿ ಸುವರ್ಣ ಚಾನಲ್ ಹಾಕ್ರಿ

Posted By:
Subscribe to Filmibeat Kannada

ಇಂದಿನ ಹರಿಬರಿಯ ಜೀವನದಲ್ಲಿ ಕೂತು ಮಾತಾಡಿ ನಕ್ಕು ನಲಿಯುವ ಅವಕಾಶಗಳೇ ವಿರಳ. ಸದಾ ಆಫಿಸ್ ಗೆ ಹೋಗಬೇಕು ಎನ್ನೋ ಆತುರ, ಮಕ್ಕಳನ್ನು ರೆಡಿ ಮಾಡ್ಬೇಕು ಎನ್ನೋ ಒತ್ತಡ, ಮನೆಗೆ ದುಡ್ಡು ಹೊಂದಿಸಬೇಕೆನ್ನುವ ಚಿಂತೆ ಹೀಗೆ ನೂರಾರು ಟೆನ್ಷನ್‍ನಲ್ಲೇ ಕಾಲ ಕಳೆಯುವ ಜೀವನ ನಮ್ಮದಾಗಿದೆ.

ಹಾಗಾದ್ರೆ ನೀವು ನಕ್ಕು ಎಷ್ಟೋ ದಿನಗಳಾಗಿವೆ ಎನಿಸಿರಬಹುದು ಅಲ್ವಾ? ಅದಕ್ಕೆ ಈ ಭಾನುವಾರ (ಏಪ್ರಿಲ್ 27) ಸಂಜೆ 6 ಗಂಟೆಗೆ ಸುವರ್ಣ ವಾಹಿನಿಗೆ ಟ್ಯೂನ್ ಮಾಡಿ ಹೊಟ್ಟೆ ಹುಣ್ಣಾಗುವಂತೆ ನಗುವ ಕಾರ್ಯಕ್ರಮ ವೀಕ್ಷಿಸಿ.

ಸುವರ್ಣ ವಾಹಿನಿಯ 'ಪಂಚರಂಗಿ ಪೋಂ ಪೋಂ' ಮತ್ತು 'ಸಿಂಗಾರಿ ಬಂಗಾರಿ' ಧಾರಾವಾಹಿ ತಂಡದವರಿಂದ ಹುಬ್ಬಳ್ಳಿಯಲ್ಲಿ ಏರ್ಪಡಿಸಿದ್ದ "ನಗೋಣ ಬರ್ರಿ" ಕಾರ್ಯಕ್ರಮ ಇದೇ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ.

ಏಳು ಕಾಮಿಡಿ ಸ್ಕಿಟ್ ಗಳು ಸಿದ್ಧವಾಗಿವೆ

ಸುವರ್ಣ ವಾಹಿನಿ ವೀಕ್ಷಕ ಬಳಗವನ್ನು ನಗಿಸೋಕೆ 'ಪಂಚರಂಗಿ ಪೋಂ ಪೋಂ' ಧಾರಾವಾಹಿ ತಂಡ ಮತ್ತು 'ಸಿಂಗಾರಿ ಬಂಗಾರಿ' ಧಾರಾವಾಹಿ ತಂಡದವರಿಂದ 7 ಕಾಮಿಡಿ ಸ್ಕಿಟ್ ಗಳು ಸಿದ್ಧವಾಗಿವೆ.

ಕಾರ್ಯಕ್ರಮದ ನಿರೂಪಕರಾಗಿ 'ಚತುರ್ಭುಜ' ನಾಯಕ

ನಗೋಣ ಬರ್ರಿ ಕಾರ್ಯಕ್ರಮದ ನಿರೂಪಕರಾಗಿ 'ಚತುರ್ಭುಜ' ಸಿನಿಮಾದ ನಾಯಕ ಆರ್ವ ನಕ್ಕು ನಗಸ್ತಾರೆ. ಹುಚ್ಚುಡುಗ್ರು ಸಿನೆಮಾ ತಂಡ ಕೂಡಾ ಭಾಗವಹಿಸಿದೆ.

ಮಲಗುವ ಹೊತ್ತಿಗೆ ನಗಿಸೋಕೆ ಪಂಚರಂಗಿ

ಮಲಗುವ ಹೊತ್ತಿಗೆ ನಗಿಸೋಕೆ 'ಪಂಚರಂಗಿ ಪೋಂ ಪೋಂ' ಇದ್ದರೆ, ಸಂಜೆಯ ಆಯಾಸ ನೀಗಿಸಲು ಸುವರ್ಣ ಪ್ಲಸ್ ನಲ್ಲಿ ಪ್ರಸಾರವಾಗುತ್ತಿದ್ದ 'ಸಿಂಗಾರಿ ಬಂಗಾರಿ' ಇದೇ ಏಪ್ರಿಲ್ 28 ರಿಂದ ಸಂಜೆ 6-30 ಕ್ಕೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಪಂಚರಂಗಿ ರೇಣುಕಾಳಿಗೆ ವಿಶೇಷ ಬೀಳ್ಕೊಡುಗೆ

ಮತ್ತೊಂದು ವಿಶೇಷ ಎಂದರೆ ಪಂಚರಂಗಿ ಪೋಂ ಪೋಂ ಧಾರಾವಾಹಿಯ ರೇಣುಕಾಳಿಗೆ ಒಂದು ವಿಶೇಷ ಬೀಳ್ಕೊಡುಗೆ ಕೂಡಾ ಇದೆ.

ರೇಣುಕಾ ಪರದೆ ಪ್ರಪಂಚದಿಂದ ದೂರವಾಗ್ತಿದ್ದಾರಾ?

ಯಾಕೆ ನಿಮ್ಮ ರೇಣುಕಾ ಪರದೆ ಪ್ರಪಂಚದಿಂದ ದೂರವಾಗ್ತಿದ್ದಾರಾ ಅನ್ನೋ ಕುತೂಹಲ ನಿಮ್ಮಲ್ಲೂ ಮೂಡಿರಬಹುದು ಅಲ್ವೇ ಅದಕ್ಕೆ ಉತ್ತರ ಪಡೆಯಲು ತಪ್ಪದೇ ನೋಡಿ ನಗೋಣ ಬರ್ರಿ ಇವೆಂಟ್.

English summary
Are you feeling stressed and exhausted? Looking for good rib tickling show on small screen. Here is the one such programme, it will definately make you a few solid laughs. 'Nagona Barri' (Let us laugh) event which will telecast on April 27 th Sunday 6 PM on Suvarna Channel.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada