»   » ಹರಕು ಬಾಯಿ ಗುರೂಜಿ ಮಾನ ಬಿಗ್ ಬಾಸಲ್ಲಿ ಹರಾಜು

ಹರಕು ಬಾಯಿ ಗುರೂಜಿ ಮಾನ ಬಿಗ್ ಬಾಸಲ್ಲಿ ಹರಾಜು

Posted By:
Subscribe to Filmibeat Kannada

ಬಿಗ್ ಬಾಸ್ ಸದಭಿರುಚಿಯಿಂದ ಕೂಡಿದೆಯಾ? ಅಥವಾ ಅಸಭ್ಯತೆಯ ಗೆರೆಯನ್ನು ದಾಟಿದೆಯಾ? ಅಥವಾ ಬಿಗ್ ಬಾಸ್ ರಿಯಾಲಿಟಿ ಶೋ ಹೀಗೇ ಇರಬೇಕಾ? ಏನೋ ಒಂದು. ಆದರೆ, ಸಹಸ್ರಾರು ಜನರನ್ನು ನಾನಾ ಕಾರಣಗಳಿಗಾಗಿ ಸೆಳೆಯುತ್ತಿರುವ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಅನೇಕ ಪ್ರಶ್ನೆಗಳನ್ನು ಮಾತ್ರ ನೋಡುಗರಲ್ಲಿ ಹುಟ್ಟುಹಾಕಿದೆ.

ಬಿಗ್ ಬಾಸ್ ಮನೆಯಲ್ಲಿದ್ದ ಡಜನ್ ಜನರಲ್ಲಿ 'ಆಡ್ ಪರ್ಸನ್' ಆಗಿದ್ದ ನರ್ಸ್ ಜಯಲಕ್ಷ್ಮಿ ಹೊರಬಿದ್ದಾಗಿದೆ. ಮುಂದಿನ ಬಲಿಪಶು ಯಾರು ಎಂಬುದಕ್ಕೆ ಈ ವಾರದ ಕೊನೆಯಲ್ಲಿ ಉತ್ತರ ಸಿಗಲಿದೆ. ಆದರೆ, ಹೊರಬಿದ್ದಿರುವ ನರ್ಸಮ್ಮ ಮಾತ್ರ ವ್ಯತಿರಿಕ್ತ ಪ್ರಚಾರವನ್ನು ಪಡೆದುಕೊಳ್ಳುತ್ತಿದ್ದಾರೆ. ಚಾನಲ್ಲಿನಿಂದ ಚಾನಲ್ಲಿಗೆ ಹಾರುತ್ತ, ಬಿಗ್ ಬಾಸ್ ಮಾನ ಹರಾಜಾಕುತ್ತಿದ್ದಾರೆ. ಭವಿಷ್ಯದ ರಾಜಕಾರಣಿಯ ಎಲ್ಲ ಲಕ್ಷಣಗಳನ್ನು ಅವರು ತೋರುತ್ತಿದ್ದಾರೆ.

ಹೊರಗಡೆ ಜಯಲಕ್ಷ್ಮಿ ತಮಗೆ ಅನ್ಯಾಯವಾಗಿದೆ, ಮಾಜಿ ಸಚಿವರೊಂದಿಗೆ ಇದ್ದ ಫೋಟೋವನ್ನು ತೋರಿಸಿದ್ದರಿಂದ ನ್ಯಾಯಾಲಯಕ್ಕೆ ಹೋಗುತ್ತೇನೆ ಎಂದು ಬಡಬಡಾಯಿಸುತ್ತಿದ್ದರೆ, ಬಿಗ್ ಬಾಸ್ ಮನೆಯಲ್ಲಿ ಜಯಲಕ್ಷ್ಮಿಗಿಂತ ಹೆಚ್ಚು ವಿವಾದ ಸೃಷ್ಟಿಸುತ್ತಿರುವ, 'ಬೃಹತ್ ಬ್ರಹ್ಮಾಂಡ' ಖ್ಯಾತಿ ಜ್ಯೋತಿಷಿ ನರೇಂದ್ರ ಬಾಬು ಶರ್ಮಾ ಅವರ ಮಾನ ಮೂರು ಕಾಸಿಗೆ ಹರಾಜಾಗಿ ಹೋಗಿದೆ.

ಅದು ಹೇಗೆಂದು ನೋಡೋಣ ಬನ್ನಿ.

ಮತ್ತೆ ಗೊರಕೆ ಹೊಡೆದ ನರೇಂದ್ರ ಶರ್ಮಾ

ಬಿಗ್ ಬಾಸ್ ಮನೆಯಲ್ಲಿ ಇರುವವರು ಅಲ್ಲಿಯ ಎಲ್ಲ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಅದರಲ್ಲಿ ಮಧ್ಯಾಹ್ನ ನಿದ್ದೆ ಮಾಡದಿರುವುದೂ ಒಂದು. ಈ ನಿಮಯವನ್ನು ನರೇಂದ್ರ ಬಾಬು ಶರ್ಮಾ ಅವರು ಮತ್ತೆ ಗಾಳಿಗೆ ತೂರಿ, ಮಟಮಟ ಮಧ್ಯಾಹ್ನ ಗೊರಕೆ ಹೊಡೆದಿದ್ದಾರೆ. ದೈತ್ಯ ದೇಹ, ಸಖತ್ ಊಟ, ತಣ್ಣನೆಯ ವಾತಾವರಣ... ನಿದ್ದೆ ಬರದೆ ಇರತ್ತಾ? ಅದಕ್ಕಾಗಿ ನೀಡಿದ ಶಿಕ್ಷೆ ಏನು ಗೊತ್ತಾ?

ನಿದ್ದೆ ಹೊಡೆದ ಗುರೂಜಿಗೆ ಶಿಕ್ಷೆ ಎಂಥದು?

ತೆರೆದ ಪ್ರಾಂಗಣದಲ್ಲಿ ಭರ್ತಿ ಬಿಸಿಲಲ್ಲಿ, ಅವರು ಕುಳಿತುಕೊಳ್ಳಲು ಕಷ್ಟವಾಗುವಂಥ ಕುರ್ಚಿಯನ್ನು ಹಾಕಿ ಅದರ ಮೇಲೆ ಅವರನ್ನು ಸಂಜೆಯವರೆಗೂ ಕುಳ್ಳಿರಿಸಲಾಗಿತ್ತು. ಶೌಚಕ್ಕೆ ಹೋಗುವಾಗ ಮಾತ್ರ ಅವರು ಕುರ್ಚಿಯಿಂದ ಏಳಬಹುದಾಗಿತ್ತು. ಊಟ ಕೂಡ ಅಲ್ಲೇ. ಈ ಶಿಕ್ಷೆಯನ್ನು ಅವರು ಆನಂದದಿಂದಲೇ ಸ್ವೀಕರಿಸಿದರು. ಕುಂತಲ್ಲೇ ಆಗಾಗ ಗೊರಕೆಯನ್ನೂ ಹೊಡೆದರು.

ಗುರೂಜಿ ಕತ್ತಿಗೆ ಸ್ಲೇಟು, ಯಾವ ನ್ಯಾಯ?

ಇದು ಒಂದು ರೀತಿಯ ಶಿಕ್ಷೆಯಾದರೆ, ಅವರ ಕೊರಳಿಗೆ ಸ್ಲೇಟನ್ನು ತೂಗುಹಾಕಿ ಕುಳ್ಳಿರಿಸಿದ್ದು ಯಾವ ನ್ಯಾಯ? ಅದರಲ್ಲಿ ಏನೆಂದು ಬರೆದಿತ್ತು ಗೊತ್ತಾ? 'ನಾನು ಬಿಗ್ ಬಾಸ್ ನಿಯಮ ಮುರಿದಿದ್ದೇನೆ, ತಪ್ಪಾಯಿತು, ಕ್ಷಮಿಸಿ'. ಸಾಲದೆಂಬಂತೆ, ಅವರು ಯಾರೊಂದಿಗೆ ಮಾತನಾಡಬೇಕಾಗಿದ್ದರೆ ಈ ಘೋಷವಾಕ್ಯವನ್ನು ಹೇಳಿಯೇ ಮಾತನಾಡಬೇಕಾಗಿತ್ತು. ಬೇಕಿತ್ತಾ ಇದೆಲ್ಲಾ?

ಬಸವಳಿದ ಗುರೂಜಿ ಸೊಂಟ ಉಳುಕಿತ್ತು

ಕೊನೆಗೂ ಅವರು ಪಡುತ್ತಿರುವ ಕಷ್ಟವನ್ನು ನೋಡಿ, ಅವರ ವಯಸ್ಸನ್ನು ಪರಿಗಣಿಸಿ ಸಂಜೆಯ ಹೊತ್ತಿಗೆ ಶಿಕ್ಷೆಯನ್ನು ಮನ್ನಾ ಮಾಡಲಾಗಿತ್ತು. ಅಷ್ಟರಲ್ಲಿ ಗುರೂಜಿಯವರು ಬೆಂದು ಬಸವಳಿಸಿದ್ದರು. ಸೊಂಟ ಹಿಡಿದುಕೊಂಡಿತ್ತು. ಅಂಗಾತ ಮಲಗಿದವರ ಸುತ್ತ ಮನೆಯ ಎಲ್ಲರೂ ಸೇರಿ ಸಾಂತ್ವನ ಹೇಳಿದರು. ಇಷ್ಟೆಲ್ಲ ಅನುಭವಿಸಿರುವ ನರೇಂದ್ರ ಬಾಬು ಶರ್ಮಾ ಅವರನ್ನು ಹೊರಹಾಕಲು ಅನೇಕರು ಮತ ಹಾಕಿದ್ದಾರೆ.

ಸಂಜನಾ ತಿಲಕ್ ಜೊತೆ ಹರಟೆ ಹೊಡೆಯುವಾಗ

ಇದೆಲ್ಲ ಆಗುವ ಮೊದಲು ಗುರೂಜಿಯವರು ಉದುರಿಸಿರುವ ಕೆಲ ನುಡಿಮುತ್ತುಗಳನ್ನು ಓದಿರಿ. ಕೆಲ ದಿನಗಳ ಹಿಂದೆ ಜಯಲಕ್ಷ್ಮಿಗೆ 'ಟಿಶರ್ಟ್ ಯಾಕೆ ಹಾಕ್ತಿಯಮ್ಮಾ, ನನ್ನ ಹಾಗೆ ಶಾಲು ಹೊದ್ದುಕೋ ಸಾಕು' ಎಂದಿದ್ದರು. ಈ ವಾರ ಕೂಡ ಸಂಜನಾ ಮತ್ತು ತಿಲಕ್ ಜೊತೆ ಹರಟೆ ಹೊಡೆಯುವಾಗ, ಸಂಜನಾ ತಿಲಕ್‌ನನ್ನು ಅಣ್ಣ ಎಂದು ಸಂಬೋಧಿಸಿದರು. ಆಗ ಥಟಕ್ಕೆ ಮತ್ತೊಂದು ನುಡಿಮುತ್ತು ಹೊರಬಿತ್ತು ನೋಡಿ. ಅದೇನೆಂದರೆ...

ಹರಕು ಬಾಯಿ ಗುರೂಜಿಯಿಂದ ಇಂಥ ಮಾತೆ?

"ಹಗಲು ಹೊತ್ತಿನಲ್ಲಿ ತಂಗಿ, ರಾತ್ರಿಯಾದ ಕೂಡಲೆ ಹೆಂಡತಿ..." ಎಂದು ಯಾವುದೇ ಮುಲಾಜಿಲ್ಲದೆ ಉದುರಿಸಿಯೇಬಿಟ್ಟರು ಗುರೂಜಿ. ಇಷ್ಟು ಸಾಕಲ್ಲವಾ ಸಂಜನಾಗೆ ಮುಜುಗರ ಮಾಡುವುದಕ್ಕೆ. ಲಕ್ಷಾಂತರ ಜನರಿಗೆ ಅತ್ಯಂತ ನಿಖರವಾಗಿ ಭವಿಷ್ಯ ಹೇಳುವ, ವಾಸ್ತು ಮಾರ್ಗದರ್ಶನ ಮಾಡುವ, ಶಾಸ್ತ್ರಗಳ ಬಗ್ಗೆ ತಿಳಿವಳಿಕೆ ಹೇಳುವ, ಅಗಾಧ ಪಾಂಡಿತ್ಯದ ಗುರೂಜಿಯೊಬ್ಬರು ಮಹಿಳೆಯೊಬ್ಬಳ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುವುದೆ?

ಮುಂದೆ ಏನಾಗುತ್ತೋ ಬಲ್ಲವರಾರು?

ಈ ರಿಯಾಲಿಟಿ ಶೋ ಗೆದ್ದವರು ಮುಂದೆ ಇನ್ನೂ ದೊಡ್ಡ ಸೆಲೆಬ್ರಿಟಿಗಳಾಗಬಹುದು ಅಥವಾ ವಿಶ್ವದ ಕನ್ನಡಿಗರೆದಿರು ಬಂಡವಾಳ ಎಲ್ಲ ಬಯಲಾದ ಮೇಲೆ ಏನೂ ಆಗದೆ ಉಳಿದುಕೊಳ್ಳಬಹುದು. ಅಥವಾ ಗುರೂಜಿಗಳೇ ಹೆಂಗಳೆಯರ ಬಗ್ಗೆ ಹೇಳುವ ಹಾಗೆ, 'ಸುಮ್ನಿರೆ ಏನೂ ಆಗಲ್ಲ' ಎಂದು ಉಟ್ಟ ಶಾಲನ್ನು ಕೊಡವಿ ಏನೂ ಆಗೇ ಇಲ್ಲ ಎಂಬಂತೆ ಜೀವನ ಸಾಗಿಸಬಹುದು. ಮನರಂಜನೆಗಾಗಿ ಇದೆಲ್ಲ ಬೇಕಿತ್ತಾ? ಎಂಬ ಪ್ರಶ್ನೆಗೆ ನಿಮ್ಮ ಉತ್ತರವೇನು?

English summary
Famous astrologer of Bruhat Brahmanda fame Narendra Babu Sharma was punished at Kannada Bigg Boss reality show in E-TV for napping in the afternoon again. Was it all necessary for a personality like Sharma in this show anchored by Kannada actor Sudeep?
Please Wait while comments are loading...