For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ನಿಮ್ಗೆ ತಲೆ ಕೆಟ್ಟಿದ್ಯಾ.? ಹೋಗಿ ಹೋಗಿ ಡವ್ ರಾಜನ್ನ ಗೆಲ್ಸಿದ್ದೀರಲ್ಲ.! ಅನ್ನದಾತರಿಗೆ ಅವಮಾನ.!

  |
  Bigg Boss Kannada Season 6: ಬಿಗ್ ಬಾಸ್' ನಿಮ್ಗೆ ತಲೆ ಕೆಟ್ಟಿದ್ಯಾ.? ಹೋಗಿ ಹೋಗಿ ಡವ್ ರಾಜನ್ನ ಗೆಲ್ಸಿದ್ದೀರಲ್ಲ.!

  '''ಬಿಗ್ ಬಾಸ್' ನಿಮ್ಗೆ ತಲೆ ಕೆಟ್ಟಿದ್ಯಾ... ಹೋಗಿ ಹೋಗಿ ಡವ್ ರಾಜನನ್ನು ಗೆಲ್ಸಿದ್ದೀರಲ್ಲ... ಅನ್ನದಾತರಿಗೆ ಅವಮಾನ'' - ಹೀಗಂತ ದೇವ್ರಾಣೆ ನಾವು ಹೇಳ್ತಿಲ್ಲ. ಬದಲಾಗಿ, 'ಬಿಗ್ ಬಾಸ್' ಕಾರ್ಯಕ್ರಮವನ್ನು ತಪ್ಪದೇ ಪ್ರತಿದಿನ ವೀಕ್ಷಿಸುತ್ತಿದ್ದವರು ಆಡಿರುವ ಮಾತು.

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ನಿನ್ನೆ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. 'ಮಾಡರ್ನ್ ರೈತ' ಅಂತ ಹೇಳಿಕೊಂಡು 'ಬಿಗ್ ಬಾಸ್' ಮನೆಗೆ ಬಂದ ಶಶಿ ಕುಮಾರ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಇದು ಕೆಲವರಿಗೆ ಖುಷಿ ಕೊಟ್ಟಿದ್ದರೆ, ಹಲವರಿಗೆ ನಿರಾಸೆ ತರಿಸಿದೆ.

  ಈ ಬಾರಿಯ 'ಬಿಗ್ ಬಾಸ್' ಸೀಸನ್ ನ ಗಾಯಕ/ಸಂಗೀತ ನಿರ್ದೇಶಕ ನವೀನ್ ಸಜ್ಜು ಗೆಲ್ಲಬೇಕು ಎಂಬುದು ಹಲವು ವೀಕ್ಷಕರ ಇಚ್ಛೆ ಆಗಿತ್ತು. ಆದ್ರೆ, ವೀಕ್ಷಕರ ಆಸೆಗೆ ವಿರುದ್ಧವಾಗಿ ಶಶಿ ಗೆಲುವಿನ ನಗೆ ಬೀರಿದ್ದಾರೆ.

  'ಬಿಗ್ ಬಾಸ್' ಮನೆಯಲ್ಲಿ ನೂರು ದಿನಗಳ ಕಾಲ ಗದ್ದಲ-ಗಲಾಟೆ, ವಾದ-ವಿವಾದಗಳಿಗೆ ಸಾಕ್ಷಿ ಆಗದೆ, ಸರಳ-ಸಜ್ಜನ ವ್ಯಕ್ತಿತ್ವ ಹೊಂದಿದ್ದ ನವೀನ್ ಸಜ್ಜು ವಿನ್ನರ್ ಆಗಲು ಅರ್ಹರು ಎಂಬುದು ಹಲವರ ಅಭಿಪ್ರಾಯವಾಗಿತ್ತು. ಆದ್ರೆ, ಅದಕ್ಕೆ ತದ್ವಿರುದ್ಧ ತೀರ್ಪು ನಿನ್ನೆ ಹೊರಬಿತ್ತು.

  ಇದರಿಂದ ಕುಪಿತಗೊಂಡ ವೀಕ್ಷಕರು ಕಲರ್ಸ್ ಸೂಪರ್ ವಾಹಿನಿಯ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲೇ 'ಬಿಗ್ ಬಾಸ್'ಗೆ ಛೀಮಾರಿ ಹಾಕುತ್ತಿದ್ದಾರೆ. ಬೇಕಾದ್ರೆ, ನೀವೇ ಕೆಲ ಕಾಮೆಂಟ್ ಗಳನ್ನು ನೋಡಿಕೊಂಡು ಬನ್ನಿ...

  ಅನ್ನದಾತರಿಗೆ ಅವಮಾನ ಮಾಡ್ಬೇಡಿ.!

  ಅನ್ನದಾತರಿಗೆ ಅವಮಾನ ಮಾಡ್ಬೇಡಿ.!

  ''ಬಿಗ್ ಬಾಸ್' ಅನ್ನೋ ಶೋ ನೇ ಫೇಕ್. ಶಶಿ ದೊಡ್ಡ ಡವ್ ರಾಜ. ಒಂದು ಹುಡುಗಿಗೋಸ್ಕರ ಕೈ ಮುರಿದುಕೊಂಡ.. ಈ ಡವ್ ರಾಜನ್ನ ರೈತ ಅಂತ ಕರೆದು ನಮಗೆಲ್ಲ ಅನ್ನ ಕೊಡುವ ಅನ್ನದಾತರಿಗೆ ಅವಮಾನ ಮಾಡಬೇಡಿ. ಈ ಡವ್ ರಾಜ ಬಿಗ್ ಬಾಸ್ ಮನೆಯಲ್ಲಿ ರೈತರಿಗೋಸ್ಕರ ಏನೂ ಮಾಡ್ಲೇ ಇಲ್ಲ. ಆ ಡವ್ ರಾಣಿ ಕವಿತಾಗೆ ಡವ್ ಹೊಡ್ಕೊಂಡೇ ನೂರು ದಿನ ಪೂರೈಸ್ದ. ನಿಜವಾದ ವಿನ್ನರ್ ನವೀನ್. ವ್ಯಕ್ತಿಗಿಂತ ಅವನ ವ್ಯಕ್ತಿತ್ವ ಮುಖ್ಯ'' ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

  'ಮಾರ್ಡನ್ ರೈತ' ಶಶಿ ಮುಡಿಗೆ 'ಬಿಗ್ ಬಾಸ್ ಕನ್ನಡ-6' ಗೆಲುವಿನ ಗರಿ.!

  ತಲೆ ಕೆಟ್ಟಿದ್ಯಾ.?

  ತಲೆ ಕೆಟ್ಟಿದ್ಯಾ.?

  ''ತಲೆ ಕೆಟ್ಟಿದ್ಯೇನ್ರೀ.. ಯಾವತ್ತಾದರೂ ನಿಯತ್ತಾಗಿ ವಿನ್ನರ್ ನ ಅನೌನ್ಸ್ ಮಾಡಿದ್ದೀರಾ.? ಜನರು ದಡ್ಡರಲ್ಲ. ನವೀನ್ ಒಬ್ಬನಿಗೆ ಗೆಲ್ಲುವ ಅರ್ಹತೆ ಇದ್ದದ್ದು. ಈ ಶಶಿ ಸ್ಕೋಪ್ ರಾಜ'' ಎಂಬುದು ವೀಕ್ಷಕರೊಬ್ಬರ ಅಭಿಪ್ರಾಯ.

  ಈ ಬಾರಿಯ 'ಬಿಗ್ ಬಾಸ್' ವಿನ್ನರ್ ನವೀನ್ ಸಜ್ಜು?

  ರನ್ನರ್ ಅಪ್ ಟ್ರೋಫಿ ಕೊಡ್ಲಿಲ್ವಲ್ಲಾ.!

  ರನ್ನರ್ ಅಪ್ ಟ್ರೋಫಿ ಕೊಡ್ಲಿಲ್ವಲ್ಲಾ.!

  ರನ್ನರ್ ಅಪ್ ಆದ ನವೀನ್ ಗೆ 'ಬಿಗ್ ಬಾಸ್' ಕನಿಷ್ಟ ಟ್ರೋಫಿ ಕೂಡ ಕೊಡಲಿಲ್ಲ. ಇದರಿಂದ ಬೇಸರಗೊಂಡ ವೀಕ್ಷಕರೊಬ್ಬರು ಕಾಮೆಂಟ್ ಮಾಡಿರುವುದು ಹೀಗೆ...

  ಒಳ್ಳೆಯವರನ್ನು ಹೊರಗೆ ತಳ್ಳುವ 'ಡಬ್ಬಾ' ಬಿಗ್ ಬಾಸ್ ಗೆ ಮಹಾ ಮಂಗಳಾರತಿ ಎತ್ತಿದ ವೀಕ್ಷಕರು.!

  ಇನ್ಮೇಲೆ ನೋಡಲ್ಲ.!

  ಇನ್ಮೇಲೆ ನೋಡಲ್ಲ.!

  ''ಬಾಡಿಗೆ ಮನೆಯಲ್ಲಿ ಇದ್ದರೂ, ಅದನ್ನ ನವೀನ್ ಎಲ್ಲೂ ಹೇಳಿಕೊಂಡಿಲ್ಲ. ಅಂಥವರಿಗೆ ಗೆಲುವು ಸಿಗಬೇಕಿತ್ತು. ಬಿಗ್ ಬಾಸ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಇನ್ಮೇಲೆ ಈ ಫೇಕ್ ಶೋನ ನೋಡಲ್ಲ'' ಅಂತ ಹೇಳ್ತಿರೋ ಜನರೇ ಹೆಚ್ಚು.

  ಬಿಗ್ ಬಾಸ್.. ಈ ಬಾರಿ ನೀವು ವೀಕ್ಷಕರಿಗೆ ಈ ಅವಕಾಶ ನೀಡಿಲ್ಲ ಯಾಕೆ.?

  ಗ್ಯಾಂಗ್ ಕಟ್ಟಿಕೊಂಡು ಮೆರೆಯೋರೇ ಗೆದ್ದಿದ್ದು.!

  ಗ್ಯಾಂಗ್ ಕಟ್ಟಿಕೊಂಡು ಮೆರೆಯೋರೇ ಗೆದ್ದಿದ್ದು.!

  ''ಕೊನೆಗೂ ಗ್ಯಾಂಗ್ ಕಟ್ಟಿಕೊಂಡು ಮೆರೆಯೋರೇ ಗೆಲ್ಲೋದು ಅಂತ ಪ್ರೂವ್ ಆಯ್ತು. ಸೀಸನ್ ಒಂದರಲ್ಲಿ ಅರುಣ್ ಸಾಗರ್, ಸೀಸನ್ ಎರಡರಲ್ಲಿ ಸೃಜನ್ ಆದ ನವೀನ್ ಗೆ ಆಯ್ತು. ಫೇಕ್ ಐಡಿ ಕ್ರಿಯೇಟ್ ಮಾಡಿ ವೋಟ್ ಮಾಡಿಕೊಂಡು, ಬಿಲ್ಡಪ್ ಕೊಟ್ಕೊಂಡು, ರೈತ ಅನ್ಕೊಂಡು, ಶಶಿ ಗೆಲುವು ಸಾಧಿಸಿದ್ರು'' ಎಂಬುದು ವೀಕ್ಷಕರ ನಿರಾಸೆಗೆ ಕಾರಣವಾಗಿದೆ.

  ನವೀನ್ ಗೆ ಸಿಕ್ಕ ಬೆಸ್ಟ್ ಅವಾರ್ಡ್.!

  ನವೀನ್ ಗೆ ಸಿಕ್ಕ ಬೆಸ್ಟ್ ಅವಾರ್ಡ್.!

  ''ಸುದೀಪ್ ಚಪ್ಪಾಳೆ ತಟ್ಟಿದ್ದೇ ನವೀನ್ ಗೆ ಸಿಕ್ಕ ಬೆಸ್ಟ್ ಅವಾರ್ಡ್. ವ್ಯಕ್ತಿತ್ವದಲ್ಲಿ ನವೀನ್ ಗೆ ಎಲ್ಲಾ ಸ್ಪರ್ಧಿಗಳು ನೂರಕ್ಕೆ ನೂರು ಅಂಕ ಕೊಟ್ಟರು. ನವೀನ್ ಗೆ ಸ್ಟುಡಿಯೋ ಮಾಡಿ ಕೊಡುವುದಾಗಿ ಸುದೀಪ್ ಹೇಳಿದರು. ಇದಕ್ಕಿಂತ ಬೆಸ್ಟ್ ಅವಾರ್ಡ್ ಬೇಕಾ.?'' ಅಂತಿದ್ದಾರೆ ವೀಕ್ಷಕರು.

  ಹಣ ಇರುವವರಿಗೆ ಮಾತ್ರ ಬಿಗ್ ಬಾಸ್

  ಹಣ ಇರುವವರಿಗೆ ಮಾತ್ರ ಬಿಗ್ ಬಾಸ್

  ''ಸರಳ, ಪ್ರಾಮಾಣಿಕ ವ್ಯಕ್ತಿಗಳಿಗೆ, ಬಡತನದಲ್ಲಿ ಇರುವವರಿಗೆ 'ಬಿಗ್ ಬಾಸ್' ಅಲ್ಲ. ಇದು ಫೇಕ್ ಶೋ. ಹಣ ಇರುವವರು ಮಾತ್ರ ಬಿಗ್ ಬಾಸ್ ಗೆಲ್ಲೋದು ಅಂತ ಪಕ್ಕಾ ಆಯ್ತು. ರೈತ ಅಂತ ಹೇಳಿ ಶಶಿ ಗೆದ್ದಿದ್ದು ಅವನ ಆಟದಿಂದಲ್ಲ. ನಮ್ಮ ರೈತರಿಂದ ಅನ್ನೋದು ಮರೆಯಬಾರದು'' ಅಂತಾವ್ರೆ ವೀಕ್ಷಕರು.

  ಸಾಲು ಸಾಲು ಕಾಮೆಂಟ್ಸ್.!

  ಸಾಲು ಸಾಲು ಕಾಮೆಂಟ್ಸ್.!

  ''ನವೀನ್ ಸಜ್ಜು ರಿಯಲ್ ವಿನ್ನರ್. ಐ ಹೇಟ್ ಬಿಗ್ ಬಾಸ್.. ಇನ್ಮೇಲೆ ಬಿಗ್ ಬಾಸ್ ನೋಡಲ್ಲ'' ಅಂತ ಹೇಳುವ ಕಾಮೆಂಟ್ ಗಳೇ ಜಾಸ್ತಿ ಇವೆ.

  ಸುದೀಪ್ ಮೇಲೂ ವೀಕ್ಷಕರಿಗೆ ಬೇಜಾರು.!

  ಸುದೀಪ್ ಮೇಲೂ ವೀಕ್ಷಕರಿಗೆ ಬೇಜಾರು.!

  ಅನ್ಯಾಯ ನಡೆಯುತ್ತಿದ್ದರೂ, ಸುಮ್ಮನೆ ಇದ್ದ ಸುದೀಪ್ ಮೇಲೂ ವೀಕ್ಷಕರು ಮುನಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಈ ಕಾಮೆಂಟ್ಸ್.

  ರೈತರ ಬಗ್ಗೆ ತುಟಿ ಬಿಚ್ಚಿಲ್ಲ.!

  ರೈತರ ಬಗ್ಗೆ ತುಟಿ ಬಿಚ್ಚಿಲ್ಲ.!

  ''ಒಂದು ಹುಡುಗಿಯ ಸಲುವಾಗಿ ಕೈ ಮುರಿದುಕೊಂಡ ಕೈಮುರುಕ ರೈತರ ಬಗ್ಗೆ ಚಕಾರ ಎತ್ತದ ಇವನ್ನೊಬ್ಬ ವಿನ್ನರ್'' ಎನ್ನುತ್ತಾ ಶಶಿ ಬಗ್ಗೆ ಛೀಮಾರಿ ಹಾಕುತ್ತಿದ್ದಾರೆ ವೀಕ್ಷಕರು.

  ಒಳ್ಳೆತನಕ್ಕೆ ಕಾಲ ಇಲ್ಲ.!

  ಒಳ್ಳೆತನಕ್ಕೆ ಕಾಲ ಇಲ್ಲ.!

  ''ಬಿಗ್ ಬಾಸ್' ಮನೆಯೊಳಗೆ ಶಶಿ ಕುಮಾರ್ ರೈತರ ಪರವಾಗಿ ಯಾವುದೇ ಹೇಳಿಕೆ ಕೊಡಲಿಲ್ಲ. ಆದರೂ ರೈತರ ಹೆಸರಿನಲ್ಲಿ ಗೆದ್ದಿದ್ದಾರೆ. ವಿನ್ನರ್ ಆದರೆ ಹಳ್ಳಿಯನ್ನು ದತ್ತು ತೆಗೆದುಕೊಳ್ಳುವುದಾಗಿ ತಿಳಿಸಿದ್ದ ನವೀನ್ ಸೋತಿದ್ದಾರೆ. ಇಲ್ಲಿ ಒಳ್ಳೆತನಕ್ಕೆ, ಒಳ್ಳೆ ಮನುಷ್ಯರಿಗೆ ಕಾಲವಿಲ್ಲ'' ಎನ್ನುತ್ತಿದ್ದಾರೆ ವೀಕ್ಷಕರು.

  ನಿಮ್ಮ ಅಭಿಪ್ರಾಯವನ್ನು ತಿಳಿಸಿ...

  ನಿಮ್ಮ ಅಭಿಪ್ರಾಯವನ್ನು ತಿಳಿಸಿ...

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ನವೀನ್ ಸಜ್ಜು ರನ್ನರ್ ಅಪ್ ಆಗಿದ್ದಕ್ಕೆ ನಿಮ್ಮ ಪ್ರತಿಕ್ರಿಯೆ ಏನು.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

  English summary
  Bigg Boss Kannada 6: Viewers have taken Colors Super official Facebook page to express their anger for making Naveen Sajju as Runner up.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X