»   » ಸುವರ್ಣ ವಾಹಿನಿಯಲ್ಲಿ 'ನೀವು ಭಲೇ ಕಿಲಾಡಿ' ಹೊಸ ಶೋ..!

ಸುವರ್ಣ ವಾಹಿನಿಯಲ್ಲಿ 'ನೀವು ಭಲೇ ಕಿಲಾಡಿ' ಹೊಸ ಶೋ..!

Posted By:
Subscribe to Filmibeat Kannada

ಕಿರುತೆರೆಯಲ್ಲೇ ಪ್ರಪ್ರಥಮ ಬಾರಿಗೆ ಬೃಹತ್ ಕಂಪೆನಿಯ ಸಹಯೋಗದೊಂದಿಗೆ ಖಾಸಗಿ ಚಾನಲ್ ಸುವರ್ಣ ವಾಹಿನಿ 'ನೀವು ಭಲೇ ಕಿಲಾಡಿ' ಎಂಬ ಮತ್ತೊಂದು ಹೊಸ ರಿಯಾಲಿಟಿ ಶೋ ಒಂದನ್ನು ನಿಮ್ಮ ಮುಂದೆ ತರಲು ಮುಂದಾಗಿದೆ.

ಈಗಾಗಲೇ ಜನಪ್ರಿಯವಾಗಿರುವ 'ಓಲ್ಡ್ ಟ್ರಾವನ್ ಸೋಡಾ' ಸಂಸ್ಥೆ ಮತ್ತು ಸುವರ್ಣ ವಾಹಿನಿ ಈ ಶೋಗೆ ರೂಪುರೇಷೆ ನೀಡಿದ್ದು, ಸುಮಾರು 21 ವರ್ಷ ಮೇಲ್ಪಟ್ಟ ವಯೋಮಿತಿಯವರು ಇದರಲ್ಲಿ ಭಾಗವಹಿಸಬಹುದಾಗಿದೆ. ಒಂದು ಗಂಟೆಗೆ 1 ಲಕ್ಷ ಗೆಲ್ಲುವ ಅವಕಾಶವನ್ನು ಈ ಶೋ ನಿಮಗೆ ಕಲ್ಪಿಸುತ್ತಿದೆ.[ಸುವರ್ಣ ವಾಹಿನಿಯಲ್ಲಿ 10 ಸೆಲೆಬ್ರಿಟಿ ದಂಪತಿಗಳ 'ಸೂಪರ್ ಜೋಡಿ']

'Neevu Bhale Kiladi' a new reality show in Suvarna Channel

ಸಂದರ್ಭಕ್ಕೆ ಅನುಸಾರವಾಗಿ ಅವರವರಲ್ಲಿ ಅಡಗಿರುವ ನೈಪುಣ್ಯತೆಯನ್ನು ಪತ್ತೆ ಹಚ್ಚುವುದು ಈ ರಿಯಾಲಿಟಿ ಶೋನ ಮುಖ್ಯ ಉದ್ದೇಶ. ಪ್ರತೀ ಸಂಚಿಕೆಯಲ್ಲಿ 4 ಜನ ಸ್ಪರ್ಧಿಗಳಿದ್ದು, ಒಟ್ಟು 3 ಸುತ್ತುಗಳು ಇರುತ್ತವೆ. ಆ ಸುತ್ತುಗಳಿಗೆ ವಿವಿಧ ರೀತಿಯ ಟಾಸ್ಕ್ ಗಳು ಇರುತ್ತವೆ. ಪ್ರತೀ ರೌಂಡಿಗೂ ಒಬ್ಬರು ಎಲಿಮಿನೇಟ್ ಆಗುತ್ತಾರೆ. ಹಾಗೆ ಕೊನೆಯವರೆಗೂ ಯಾರು ತಮ್ಮ ಟ್ಯಾಲೆಂಟ್ ಅನ್ನು ತೋರಿಸುತ್ತಾರೋ ಅವರು 1 ಲಕ್ಷ ಗೆಲ್ಲುವ ಅವಕಾಶ ಇದೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ತಿಂಗಳಲ್ಲಿ ಸುವರ್ಣ ವಾಹಿನಿಯಿಂದ ಆಡಿಶನ್ ನಡೀತಾ ಇದೆ. ಡಿಸೆಂಬರ್ 5, ಶನಿವಾರದಂದು ಮೈಸೂರಿನ ವಿಜಯನಗರ ಬಸವಭವನದಲ್ಲಿ, ಹುಬ್ಬಳ್ಳಿಯ ತೃಪ್ತಿ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಮತ್ತು ಡಿಸೆಂಬರ್ 6, ಭಾನುವಾರದಂದು ದಾವಣಗೆರೆಯ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ, ಮಂಗಳೂರಿನ ಹಂಪನಕಟ್ಟೆಯ ಡಾನ್ ಭಾಸ್ಕೋ ಹಾಲ್ ನಲ್ಲಿ ಹಾಗೂ ಡಿಸೆಂಬರ್ 12, ಶನಿವಾರದಂದು ಬೆಂಗಳೂರಿನ ಮಹಾರಾಣಿ ಕಾಲೇಜ್ ಹತ್ತಿರವಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಡಿಟೋರಿಯಮ್ ನಲ್ಲಿ ಬೆಳಗ್ಗೆ 10 ರಿಂದ 5 ರವರೆಗೆ ನಡೆಯಲಿದೆ.[ಮದುವೆ ಸಂಭ್ರಮದಲ್ಲಿ ಭಾಗಿಯಾದ 'ರಿಂಗ್ ರೋಡ್' ಜೋಡಿ]

'Neevu Bhale Kiladi' a new reality show in Suvarna Channel

ಆಸಕ್ತರು ಆಡಿಶನ್ ಗೆ ಬರುವಾಗ ತಮ್ಮ ಇತ್ತೀಚೆಗಿನ ಭಾವಚಿತ್ರ ಮತ್ತು ವಿಳಾಸದ ದಾಖಲೆಯನ್ನು ತರಲು ಸುವರ್ಣ ವಾಹಿನಿ ತಿಳಿಸಿದೆ. ಅಂದಹಾಗೆ ಈ ಕಾರ್ಯಕ್ರಮವನ್ನು 'ಪ್ರೋ ಕಬಡ್ಡಿ' ಕಾರ್ಯಕ್ರಮವನ್ನು ನಿರೂಪಣೆ ಮಾಡಿದ ದಾನಿಷ್ ಅವರು ನಿರೂಪಣೆ ಮಾಡಲಿದ್ದಾರೆ.

English summary
Kannada's popular Suvarna Channel is launching a new reality show called 'Neevu Bhale Kiladi'. Danish is hosting this show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada