Just In
Don't Miss!
- News
ಎಲ್ಲಾ ಲೆಕ್ಕಾಚಾರ ಉಲ್ಟಾ: ಬಸವಕಲ್ಯಾಣ ಬಿಜೆಪಿ ಟಿಕೆಟ್ ಬಹುತೇಕ ಫೈನಲ್: ಈ ಇಬ್ಬರಲ್ಲಿ ಒಬ್ಬರಿಗೆ ಪಕ್ಕಾ?
- Sports
ಏಷ್ಯಕಪ್ 2021ರಲ್ಲಿ ಭಾರತಕ್ಕೆ ಭಾಗವಹಿಸಲು ಅವಕಾಶವಿಲ್ಲ?!
- Education
CBSE CTET Result 2021: ಫಲಿತಾಂಶ ವೀಕ್ಷಿಸುವುದು ಹೇಗೆ ? ಇಲ್ಲಿದೆ ಮಾಹಿತಿ
- Lifestyle
ಕೊರೊನಾ 2ನೇ ಅಲೆ: ಹೀಗೆ ಮಾಡಿ ವೈರಸ್ ವಿರುದ್ಧ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸಿ
- Automobiles
ಸನ್ರೂಫ್, ಪೆಟ್ರೋಲ್ ವೆರಿಯೆಂಟ್ ಸೇರಿದಂತೆ ಭಾರೀ ಬದಲಾವಣೆ ಪಡೆದುಕೊಂಡ ನ್ಯೂ ಜನರೇಷನ್ ಸ್ಕಾರ್ಪಿಯೋ
- Finance
ಮಾರ್ಚ್ 2021ರ ಬ್ಯಾಂಕ್ ರಜಾ ದಿನಗಳು: 11 ದಿನಗಳು ಮುಚ್ಚಲ್ಪಡಲಿದೆ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದೊಡ್ಮನೆ ಅಂಗಳದಲ್ಲಿ ಕೇಳುತ್ತಿದೆ 'ನೆನಪಿರಲಿ' ಪ್ರೇಮ್ ಹೆಸರು?
ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಆರಂಭಕ್ಕೆ ಕೆಲವು ದಿನಗಳು ಮಾತ್ರ ಬಾಕಿ ಇದೆ. ಫೆಬ್ರವರಿ 28 ರಂದು ಬಿಗ್ ಬಾಸ್ ಹೊಸ ಸೀಸನ್ ಶುರುವಾಗುತ್ತಿದೆ. ಈ ಸಲ ದೊಡ್ಮನೆಗೆ ಯಾರೆಲ್ಲ ಪ್ರವೇಶ ಮಾಡಬಹುದು ಎಂಬ ಚರ್ಚೆ ಬಹಳ ಜೋರಾಗಿ ಇದೆ. ಈ ಆವೃತ್ತಿಯಲ್ಲಿ ಕಾಮನ್‌ಮ್ಯಾನ್‌ಗಳಿಗೆ ಅವಕಾಶ ಇಲ್ಲ ಎಂದು ಬಿಗ್ ಬಾಸ್ ಆಯೋಜಕರು ಸ್ಪಷ್ಟಪಡಿಸಿದ್ದಾರೆ.
ಇನ್ನು ಬಿಗ್ ಮನೆಯಲ್ಲಿ ಯಾವೆಲ್ಲ ಸೆಲೆಬ್ರಿಟಿಗಳೇ ಇರ್ತಾರೆ ಎನ್ನುವ ಲೆಕ್ಕಾಚಾರ ವೀಕ್ಷಕರನ್ನು ಕಾಡ್ತಿದೆ. ಕಿರುತೆರೆ, ಸಿನಿಮಾ ಇಂಡಸ್ಟ್ರಿ, ರಿಯಾಲಿಟಿ ಶೋಗಳ ಸ್ಪರ್ಧಿಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ಕೆಲವು ವ್ಯಕ್ತಿಗಳು ದೊಡ್ಮನೆಗೆ ಅವಕಾಶ ಪಡೆದುಕೊಳ್ಳಬಹುದು ಎಂಬ ನಿರೀಕ್ಷೆ ಇದೆ.
ಚಿತ್ರರಂಗಕ್ಕೆ ಕಾಲಿಟ್ಟು 19 ವರ್ಷ: ಹಳೆಯ ನೆನಪು ಮೆಲುಕು ಹಾಕಿದ ನೆನಪಿರಲಿ ಪ್ರೇಮ್
ಈ ಮಧ್ಯೆ 'ನೆನಪಿರಲಿ' ಖ್ಯಾತಿಯ ಪ್ರೇಮ್ ಅವರು ಹೆಸರು ಸಹ ಬಿಗ್ ಬಾಸ್ ಪಟ್ಟಿಯಲ್ಲಿ ಚರ್ಚೆಯಾಗುತ್ತಿದೆ. ಬಿಗ್ ಬಾಸ್ ಕಾರ್ಯಕ್ರಮದ ಬಹಳ ಹತ್ತಿರದ ಮೂಲಗಳಿಂದ ಹೊರಬಿದ್ದಿರುವ ಮಾಹಿತಿ ಪ್ರಕಾರ ಪ್ರೇಮ್ ಅವರು ಈ ಸಲ ಬಿಗ್ ಬಾಸ್ ಮನೆಗೆ ಬರ್ತಾರೆ ಎನ್ನಲಾಗಿದೆ.
ಕ್ವಾರಂಟೈನ್ ಆಗುವ ಸ್ಪರ್ಧಿಗಳ ಪಟ್ಟಿಯಲ್ಲಿ ಪ್ರೇಮ್ ಅವರು ಹೆಸರು ಸಹ ಇದೆ. ಆದರೆ, ಈ ಹೆಸರು ಬಹಳ ಅಚ್ಚರಿ ತಂದಿದೆ. ಈ ಬಗ್ಗೆ ವಿಚಾರಿಸಲು ಖುದ್ದು ಪ್ರೇಮ್ ಅವರನ್ನು ಫಿಲ್ಮಿಬೀಟ್ ಕನ್ನಡ ಸಂಪರ್ಕಿಸಿತ್ತು.
''ನಾನು ಬಿಗ್ ಬಾಸ್‌ಗೆ ಹೋಗ್ತಿಲ್ಲ, ನನಗೆ ಬೇರೆ ಕೆಲಸಗಳು ಇವೆ'' ಎಂದು ಹೇಳಿದರು.
ಈ ಬಾರಿ ಕನ್ನಡ 'ಬಿಗ್ ಬಾಸ್'ನಲ್ಲಿ ಇರ್ತಾರಾ ಈ ಸುಂದರ ನಟ?
ಅಂದ್ಹಾಗೆ, ಬಿಗ್ ಬಾಸ್ ನಿಯಮಗಳ ಪ್ರಕಾರ, ಯಾವ ಸ್ಪರ್ಧಿಯೂ ಬಿಗ್ ಬಾಸ್ ಆರಂಭಕ್ಕೆ ಮುನ್ನವೇ ಕಾರ್ಯಕ್ರಮಕ್ಕೆ ಹೋಗುವುದನ್ನು ಬಹಿರಂಗಪಡಿಸುವಂತಿಲ್ಲ. ಹಾಗಾಗಿ, ಬಿಗ್ ಬಾಸ್ ಆರಂಭದವರೆಗೂ ಈ ಕುತೂಹಲ ಇದ್ದೆ ಇರುತ್ತದೆ.
ಪ್ರೇಮ್ ಅವರು ಸದ್ಯ ಪ್ರೇಮಂ ಪೂಜ್ಯಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಪ್ರೇಮ್ ಅಭಿನಯದ 25ನೇ ಚಿತ್ರ. ರಾಘವೇಂದ್ರ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಇತ್ತೀಚಿಗಷ್ಟೆ ಟೀಸರ್ ಬಿಡುಗಡೆಯಾಗಿದೆ.