»   » ಗುರುಪ್ರಸಾದ್, ಯೋಗೇಶ್ ಹೊಸ ರಿಯಾಲಿಟಿ ಶೋ

ಗುರುಪ್ರಸಾದ್, ಯೋಗೇಶ್ ಹೊಸ ರಿಯಾಲಿಟಿ ಶೋ

Posted By:
Subscribe to Filmibeat Kannada

'ಬಿಗ್ ಬಾಸ್ ಸೀಸನ್ 2' ಸ್ಪರ್ಧಿ ಗುರುಪ್ರಸಾದ್ ಅವರು ಇದೀಗ ನಿರೂಪಕರಾಗಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಗುರು ಜೊತೆಗೆ ಲೂಸ್ ಮಾದ ಯೋಗೇಶ್ ಅವರೂ ಸಾಥ್ ನೀಡಲಿದ್ದಾರೆ. ಕಿರುತೆರೆಯಲ್ಲಿ ಇವರಿಬ್ಬರ ಕಾಂಬಿನೇಷನ್ ಎಲ್ಲರ ಗಮನಸೆಳೆದಿದೆ.

ಜೀ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲೇ ಆರಂಭವಾಗಲಿರುವ ಈ ಹೊಸ ರಿಯಾಲಿಟಿ ಶೋಗೆ 'ಲೈಫ್ ಸೂಪರ್ ಗುರು' ಎಂದು ಹೆಸರಿಡಲಾಗಿದೆ. ಈ ರಿಯಾಲಿಟಿ ಶೋ ಬದುಕಿನ ಮುಸ್ಸಂಜೆಯಲ್ಲಿರುವವರ ಸೂಪರ್ ಕಥೆಗಳನ್ನು ತೆರೆದಿಡಲಿದೆ ಎಂಬುದು ಪ್ರೊಮೋ ನೋಡಿದರೆ ಗೊತ್ತಾಗುತ್ತದೆ. [ಜನಮನ ಸೂರೆಗೊಂಡ 'ವೀಕೆಂಡ್ ವಿತ್ ರಮೇಶ್']

Life Super Guru

"ಜನ ಅರವತ್ತಕ್ಕೆ ಅರುಳೋ ಮರುಳೋ ಅಂತಾರೆ, ಸೀನಿಯರ್ ಗಳ ಸೆಕೆಂಡ್ ಇನ್ನಿಂಗ್ಸ್ ಶುರು, ಯಾಕೆಂದರೆ ಲೈಫ್ ಸೂಪರ್ ಗುರು" ಎನ್ನುತ್ತದೆ ಈ ರಿಯಾಲಿಟಿ ಶೋನ ಪ್ರೊಮೋ. 'ವೀಕೆಂಡ್ ವಿತ್ ರಮೇಶ್' ಬಳಿಕ ರಿಯಾಲಿಟಿ ಶೋಗಳಲ್ಲಿ ಗಮನಸೆಳೆಯುತ್ತಿರುವ ಜೀ ಕನ್ನಡ ಇದೀಗ ಲೈಫ್ ಸೂಪರ್ ಗುರು ಮೂಲಕ ಮತ್ತೊಂದು ಹೊಸ ಪ್ರಯೋಗಕ್ಕೆ ಸಿದ್ಧವಾಗಿದೆ.

ನವೆಂಬರ್ ಮೊದಲ ವಾರದಲ್ಲಿ ಈ ಹೊಸ ರಿಯಾಲಿಟಿ ಶೋ ಪ್ರಾರಂಭವಾಗಲಿದೆ. ಜೀ ಟಿವಿ ಕಾರ್ಯಕ್ರಮದ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರು ಈ ಕಾರ್ಯಕ್ರಮದಲ್ಲಿ ನಿರೂಪಕರಲ್ಲಿ ಒಬ್ಬರು ಎಂಬುದು ಇನ್ನೊಂದು ವಿಶೇಷ. ಮೂವರ ನಿರೂಪಣೆಯಲ್ಲಿ ಈ ರಿಯಾಲಿಟಿ ಶೋ ಮೂಡಿಬರುತ್ತಿರುವುದು ಇನ್ನೊಂದು ಆಕರ್ಷಣೆ ಎನ್ನಬಹುದು.

Life Super Guru

ಇದು ಹಿರಿಯ ನಾಗರೀಕರ ಸೆಕೆಂಡ್ ಇನ್ನಿಂಗ್ಸ್ ಗೆ ಸಂಬಂಧಿಸಿದ ಶೋ ಆದರೂ ಕುಟುಂಬ ಸಮೇತ ಸವಿಯುವಂತಹ ಕಾರ್ಯಕ್ರಮ ಇದು ಎನ್ನುತ್ತವೆ ಮೂಲಗಳು. ಈ ಹಿಂದೆ ಯೋಗಿ ಮತ್ತು ಗುರು ಅವರು 'ಡಾನ್ಸಿಂಗ್ ಸ್ಟಾರ್' ಕಾರ್ಯಕ್ರಮದ ತೀರ್ಪುಗಾರರಾಗಿದ್ದರು. ಇದೀಗ ಇವರಿಬ್ಬರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಮತ್ತೊಂದು ಭಿನ್ನ ಶೋ ಇದು. (ಫಿಲ್ಮಿಬೀಟ್ ಕನ್ನಡ)
English summary
Zee Kannada is launching new reality show 'Life Super Guru' from the first week of November. 'Loose Mada' Yogesh and actor-director Guruprasad are the anchors of the show. The reality show is for super life of senior citizens.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada