For Quick Alerts
  ALLOW NOTIFICATIONS  
  For Daily Alerts

  ಸ್ಲಿಮ್ ಆದ ನಿಧಿ ಸುಬ್ಬಯ್ಯ: ಗ್ಲಾಮರಸ್ ಚಿತ್ರಗಳ ನೋಡಿ ಅಭಿಮಾನಿಗಳು ಫಿದಾ

  By ಪೂರ್ವ
  |

  'ಪಂಚರಂಗಿ' ಖ್ಯಾತಿಯ ಸುಂದರಿ ನಿಧಿ ಸುಬ್ಬಯ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ. ಇತ್ತೀಚೆಗೆ ಸಖತ್ ಸ್ಲಿಮ್ ಆಗಿರುವ ನಿಧಿ ಸುಬ್ಬಯ್ಯ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಲು ಹೀಗೆ ದೇಹವನ್ನು ಸಪೂರ ಗೊಳಿಸಿಕೊಂಡರಾ ಎಂಬ ಅನುಮಾನ ಕಾಡುತ್ತಿದೆ.

  ಮೂಲತಃ ಕೊಡಗಿನವರಾಗಿರುವ ನಿಧಿ ಸುಬ್ಬಯ್ಯ ಬೆಳೆದಿದ್ದು ಮೈಸೂರಿನಲ್ಲಿ. ನಿಧಿ ಸುಬ್ಬಯ್ಯ ಜನಿಸಿದ ಬಳಿಕ ಅವರ ಕುಟುಂಬವು ಮೈಸೂರಿನ ಗೋಕುಲಂಗೆ ಸ್ಥಳಾಂತರಗೊಂಡಿತು, ಅಲ್ಲಿ ಅವರು ತಮ್ಮ ಬಾಲ್ಯವನ್ನು ಕಳೆದರು. ಮೈಸೂರಿನ ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್‌ನಲ್ಲಿ ಮತ್ತು ಸಿವಿಲ್ ಇಂಜಿನಿಯರಿಂಗ್ ಮಾಡಲು ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್‌ಗೆ ಹೋದರು. ನಿಧಿ ತನ್ನ ಶಾಲಾ ದಿನಗಳಲ್ಲಿ ಕ್ರೀಡೆಯಲ್ಲಿ ಉತ್ತಮ ಆಸಕ್ತಿಯನ್ನು ಹೊಂದಿದ್ದರು. ವಿದ್ಯಾಭ್ಯಾಸ ಮಾಡಿದರು. ಬಿ ಇ ಮಾಡುತ್ತಿದ್ದಾಗ ಮಾಡೆಲಿಂಗ್‌ನಲ್ಲಿ ಆಸಕ್ತಿ ಬೆಳೆಸಿಕೊಂಡು ಬಳಿಕ ಚಿತ್ರರಂಗ ಪ್ರವೇಶಿಸಿದರು.

  ನಿಧಿ, ಬೊಳ್ಳಚಂಡ ಸುಭಾಷ್ ಸುಬ್ಬಯ್ಯ ಮತ್ತು ಝಾನ್ಸಿ ಸುಬ್ಬಯ್ಯ ಅವರ ಪುತ್ರಿ. ಅವರ ತಂದೆ ತಾಯಿಗೆ ಅವರು ಒಬ್ಬಳೇ ಮಗಳು. ನಿಧಿ 21 ಫೆಬ್ರವರಿ 2017 ರಂದು ಲವೇಶ್ ಖೈರಾಜನಿ ಎಂಬ ಉದ್ಯಮಿಯನ್ನು ವಿವಾಹವಾದರು. ನಂತರ ಈ ದಂಪತಿ ವಿಚ್ಚೇಧನ ಪಡೆದರು. ನಿಧಿ ಸುಬ್ಬಯ್ಯ ಕನ್ನಡ ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ನಟಿ.

  ಮಾಡೆಲಿಂಗ್ ಮಾಡುತ್ತ ಟಿವಿ ಜಾಹೀರಾತುಗಳಲ್ಲಿ ಅಭಿನಯಿಸುತ್ತಿದ್ದ ಇವರು 2009 ರಲ್ಲಿ ತೆರೆಕಂಡ ಅಭಿಮಾನಿ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಪಂಚರಂಗಿ' ಚಿತ್ರದ ಮೂಲಕ ಮುನ್ನಲೆಗೆ ಬಂದ ನಿಧಿ ನಂತರ ಅಣ್ಣಾ ಬಾಂಡ್' ಚಿತ್ರದಲ್ಲಿ ನಟಿಸಿದರು. 2012 ರಲ್ಲಿ ತೆರೆಕಂಡ ಓ ಮೈ ಗಾಡ್' ಚಿತ್ರದಿಂದ ಹಿಂದಿ ಚಿತ್ರರಂಗದಲ್ಲೂ ಕೂಡ ಅಭಿನಯಿಸಲು ಪ್ರಾರಂಭಿಸಿದರು. ಪಂಚರಂಗಿ (2010) ಮತ್ತು ಕೃಷ್ಣನ್ ಮ್ಯಾರೇಜ್ ಸ್ಟೋರಿ (2011) ಕನ್ನಡ ಚಲನಚಿತ್ರಗಳಿಂದ ಹೆಸರು ಗಳಿಸಿದರು.

  Nidhi Subbaiah Posted Her New Photos On Instagram

  ನಿಧಿ ಸುಬ್ಬಯ್ಯ ತಮ್ಮ ಹೊಸ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಿಧಿಯ ಗ್ಲಾಮರಸ್ ಫೋಟೊಗಳನ್ನು ಕಂಡು ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಕಡು ಕಪ್ಪು ಬಣ್ಣದ ಡ್ರೆಸ್ ಧರಿಸಿ ಪೋಸ್ ನೀಡಿದ್ದಾರೆ ನಿಧಿ. ದಾಂಪತ್ಯ ಜೀವನದಲ್ಲಿ ಬಿರುಕು ಕಂಡ ತಕ್ಷಣ ಅದೆಷ್ಟೋ ಮಂದಿ ಕುಗ್ಗಿ ಹೋಗುತ್ತಾರೆ ಆದರೆ ಇದಾವುದಕ್ಕೂ ತಲೆ ಕೆಡಿಸಿ ಕೊಳ್ಳದ ನಿಧಿ ಮುಂದಿನ ಸಿನಿಮಾಗಳಲ್ಲಿ ನಟಿಸುವತ್ತ ಮುಖ ಮಾಡಿರುವುದು ಅಭಿಮಾನಿಗಳಿಗೆ ಖುಷಿಯ ಸಂಗತಿ.

  English summary
  Nidhi Subbaiah posted her new photos on Instagram. She became slim, more fit. She may coming back to movies after a short break.
  Friday, May 6, 2022, 21:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X