»   » ಮಾಸ್ಟರ್ ಆನಂದ್ ನಿರ್ದೇಶನದಲ್ಲಿ ಬರುತ್ತಿದೆ 'ನಿಗೂಢ ರಾತ್ರಿ'

ಮಾಸ್ಟರ್ ಆನಂದ್ ನಿರ್ದೇಶನದಲ್ಲಿ ಬರುತ್ತಿದೆ 'ನಿಗೂಢ ರಾತ್ರಿ'

Posted By:
Subscribe to Filmibeat Kannada

ನಟ ಮತ್ತು ಟಿವಿ ಕಾರ್ಯಕ್ರಮಗಳ ನಿರೂಪಕ ಮಾಸ್ಟರ್ ಆನಂದ್ ಈಗ ಮತ್ತೆ ಧಾರಾವಾಹಿ ನಿರ್ದೇಶನದ ಕಡೆ ಮುಖ ಮಾಡಿದ್ದಾರೆ.

20 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ರಿಯಾಲಿಟಿ ಶೋಗಳಲ್ಲಿ ಹೋಸ್ಟ್ ಆಗಿ ಜನಪ್ರಿಯತೆ ಗಳಿಸಿರುವ ಮಾಸ್ಟರ್ ಆನಂದ್ ಈಗ ಮತ್ತೆ ಧಾರಾವಾಹಿ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಮಾಸ್ಟರ್ ಆನಂದ್ ಈಗ 'ನಿಗೂಢ ರಾತ್ರಿ' ಎಂಬ ಹಾರರ್ ಥ್ರಿಲ್ಲರ್ ಧಾರಾವಾಹಿಯೊಂದಕ್ಕೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದು, ಈ ಸೀರಿಯಲ್ ಜುಲೈ 17(ಸೋಮವಾರ) ರಿಂದ ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 10-30 ಕ್ಕೆ ಪ್ರಸಾರವಾಗಲಿದೆ. ಈಗಾಗಲೇ 'ನಿಗೂಢ ರಾತ್ರಿ' ಪ್ರೋಮೋ ಸಹ ಬಿಡುಗಡೆ ಆಗಿದ್ದು, ಹಾರರ್ ಪ್ರಿಯರ ಗಮನ ಸೆಳೆದಿದೆ.

'Niguda Ratri': Master Anand shifts gears to horror

'ನಿಗೂಢ ರಾತ್ರಿ' ಧಾರಾವಾಹಿಯಲ್ಲಿ ಹೆಚ್ಚಾಗಿ ರಂಗಭೂಮಿ ಕಲಾವಿದರು ಅಭಿನಯಿಸಿದ್ದು, 'ಜಾನಿ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ಧಾರಾವಾಹಿ ನಿರ್ಮಾಣ ಮಾಡಲಾಗುತ್ತಿದೆ. 'ನಿಗೂಢ ರಾತ್ರಿ' ಧಾರಾವಾಹಿ ಪ್ರೋಮೋ ನೋಡಲು ಕ್ಲಿಕ್ ಮಾಡಿ

'Niguda Ratri': Master Anand shifts gears to horror 2

ಮಾಸ್ಟರ್ ಆನಂದ್ ಈ ಹಿಂದೆ ನಿರ್ದೇಶನ ಮಾಡಿದ್ದ 'ಎಸ್‌ಎಸ್‌ಎಲ್‌ಸಿ ನನ್ ಮಕ್ಳು', 'ಪಡುವಾರಳ್ಳಿ ಪಡ್ಡೆಗಳು' ಧಾರಾವಾಹಿಗಳು ಸ್ಟಾರ್ ಸುವರ್ಣ ವಾಹಿನಿಯಲ್ಲಿ, 'ರೋಬೋ ಫ್ಯಾಮಿಲಿ' ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದವು.

English summary
After gaining popularity through his comedy show and film, Master Anand is trying his hand at horror. The comedy star is set to direct a horror TV serial titled 'Niguda Ratri', which features theatre artistes.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada