For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ 4: ಬರ್ತ್ ಡೇ ಬಾಯ್ ನಿರಂಜನ್ ದೇಶಪಾಂಡೆ ಕಾಲೆಳೆದ ಕಿಚ್ಚ

  By Suneetha
  |

  ಶನಿವಾರ ಎಂದಿನಂತೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮಕ್ಕೆ, ಮನೆಯ ಸದಸ್ಯರೆಲ್ಲಾ ಮೇಕಪ್ಪ್ ಮಾಡಿಕೊಂಡು ತಯಾರಾದರು. ಸುದೀಪ್ ಅವರು ನಿರಂಜನ್ ದೇಶಪಾಂಡೆ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ, ಕೇಕ್ ಕಳುಹಿಸಿಕೊಟ್ಟರು.

  ಕಿಚ್ಚನ ಕಟ್ಟೆ ಪಂಚಾಯತಿ ಕಾರ್ಯಕ್ರಮದಲ್ಲಿ ಸುದೀಪ್ ಅವರು ಬರ್ತ್ ಡೇ ಬಾಯ್ ನಿರಂಜನ್ ದೇಶಪಾಂಡೆ ಅವರ ಜೊತೆ ಮಾತು-ಕತೆ ಶುರು ಹಚ್ಚಿಕೊಂಡರು. ಇಲ್ಲಿಯವರೆಗೆ ಬಿಗ್ ಬಾಸ್ ಮನೆಯಲ್ಲಿ ನಾಲ್ಕು ಹುಟ್ಟುಹಬ್ಬ ಆಚರಣೆ ನಡೆದಿದ್ದು, ನಿರಂಜನ್ ಅವರದು ಐದನೇ ಹುಟ್ಟುಹಬ್ಬ ಎಂದು ಕಿಚ್ಚ ನುಡಿದರು.['ಬಿಗ್‌ ಬಾಸ್' ವೇದಿಕೆ ಮೇಲೆ 'ಕನ್ನಡ ಪ್ರೇಮ' ಮೆರೆದ ಸುದೀಪ್]

  ಕಿಚ್ಚ ಸುದೀಪ್ ಅವರು ನಿರಂಜನ್ ದೇಶಪಾಂಡೆ ಅವರ ಜೊತೆ ನಡೆಸಿದ ಮಾತುಕತೆ ಮತ್ತು ವಾರದ ಬೆಳವಣಿಗೆಗಳ ಚರ್ಚೆ, ಕಥೆ ಇತ್ಯಾದಿಗಳ ಬಗ್ಗೆ ಎಲ್ಲಾ ತಿಳಿಯೋಣ ಮುಂದೆ ಓದಿ....

  ಬರ್ತ್ ಡೇ ಬಾಯ್ ಜೊತೆ ಕಿಚ್ಚ ಚಾಟಿಂಗ್

  ಬರ್ತ್ ಡೇ ಬಾಯ್ ಜೊತೆ ಕಿಚ್ಚ ಚಾಟಿಂಗ್

  ಸುದೀಪ್: ಇದಕ್ಕಿಂತ ಮುನ್ನ ಅದ್ಭುತವಾದ ಬರ್ತ್ ಡೇ ಸೆಲೆಬ್ರೇಷನ್ ನಿಮ್ಮ ಜೀವನದಲ್ಲಿ ಯಾವಾಗ ನಡೆದಿದೆ.?

  ನಿರಂಜನ್: ಕಳೆದ ವರ್ಷ ನನ್ನ ಫಿಯಾನ್ಸಿ ಅಚರಣೆ ಮಾಡಿದ ರೀತಿ ನನಗೆ ತುಂಬಾ-ತುಂಬಾ ಸರ್ ಪ್ರೈಸ್ ಆಗಿತ್ತು. ನಾನು ಆಗಲೇ ಮಲಗಿಬಿಟ್ಟಿದ್ದೆ. ಆವಾಗ ಅವಳು ನನ್ನ ಹಳೇ ಫ್ರೆಂಡ್ಸ್ ಅನ್ನು ಹೇಗೋ ಕಾಂಟ್ಯಾಕ್ಟ್ ಮಾಡಿ ಎಲ್ಲರನ್ನು ಕರೆಸಿಬಿಟ್ಟಿದ್ದಳು. ಆಮೇಲೆ ರೂಮ್ ತುಂಬಾ ಕ್ಯಾಂಡೆಲ್ ನಲ್ಲಿ 'ಐ ಲವ್ ಯೂ' ಅಂತ ಬರೆದು ಸಖತ್ ಸರ್ ಪ್ರೈಸ್ ಕೊಟ್ಟಿದ್ದಳು.
  ಇದಕ್ಕೆ ಸುದೀಪ್ ಅವರು ನೀವು ಅದೇ ಸೇಮ್ ಫಿಯಾನ್ಸಿ ಬಗ್ಗೆ ಮಾತಾಡ್ತಾ ಇದ್ದೀರಲ್ಲಾ ಅಂತ ತಮಾಷೆ ಮಾಡಿದರು.[ನಿರಂಜನ್ ದೇಶಪಾಂಡೆಗೆ ನಟಿ ವಾಣಿಶ್ರೀ ಕೊಟ್ಟ ಶಿಕ್ಷೆ ಇದು.!]

  ಕೆಟ್ಟ ಘಟನೆ ಬಗ್ಗೆ ಕಿಚ್ಚನ ಪ್ರಶ್ನೆ

  ಕೆಟ್ಟ ಘಟನೆ ಬಗ್ಗೆ ಕಿಚ್ಚನ ಪ್ರಶ್ನೆ

  ಇದೇ ಸಂದರ್ಭದಲ್ಲಿ ಸುದೀಪ್ ಅವರು ನಿರಂಜನ್ ಅವರ ಬಳಿ, ಯಾವುದಾದ್ರೂ ಟ್ರ್ಯಾಜಿಡಿ ನಡೆದಿದೆಯಾ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ನಿರಂಜನ್ 'ಇಲ್ಲ' ಮೊದಲು ತಂದೆ ಜೊತೆಗಿಲ್ಲ ಎಂಬ ಕೊರಗು ಇತ್ತು ಹುಟ್ಟುಹಬ್ಬದ ಸಮಯದಲ್ಲಿ. ಆದ್ರೆ ಈಗ ಆ ಕೊರಗು ಇಲ್ಲ ಎಂದರು. ಇಷ್ಟು ಮಾತ್ರವಲ್ಲದೇ, ನಿಮ್ಮ ಎಲ್ಲಾ ಗರ್ಲ್ ಫ್ರೆಂಡ್ ಗಳು ಬರ್ತ್ ಡೇ ದಿನ ಒಟ್ಟಿಗೆ ಕೇಕ್ ತಂದಿದ್ದಾರಾ ಎಂದು ಸುದೀಪ್, ನಿರಂಜನ್ ಅವರ ಕಾಲೆಳೆದರು.

  ಓಂ ಪ್ರಕಾಶ್ ಗೆ ಸ್ವಾಗತ ಕೋರಿದ ಕಿಚ್ಚ

  ಓಂ ಪ್ರಕಾಶ್ ಗೆ ಸ್ವಾಗತ ಕೋರಿದ ಕಿಚ್ಚ

  ಇದೇ ಸಂದರ್ಭದಲ್ಲಿ ಸುದೀಪ್ ಅವರು ಕಳೆದ ವಾರ ಅತಿಥಿಯಾಗಿ ಎಂಟ್ರಿ ಕೊಟ್ಟ ಓಂ ಪ್ರಕಾಶ್ ರಾವ್ ಅವರಿಗೆ, ಬಿಗ್ ಬಾಸ್ ಮನೆಗೆ ಸ್ವಾಗತ ಕೋರಿದರು. ನಂತರ ಬಿಗ್ ಬಾಸ್ ಮನೆಯಲ್ಲಿ ಅವರಿಗಾಗುವ ಅನುಭವ ಹಂಚಿಕೊಳ್ಳಲು ಅವಕಾಶ ನೀಡಿದರು. ಇದಕ್ಕೆ ಓಂ ಪ್ರಕಾಶ್ ರಾವ್ ಅವರು ಮನೆಯಲ್ಲಿ ತುಂಬಾ ಖುಷಿಯಾಗುತ್ತೆ ಎಂದರು.

  ವಾರದ ಬೆಳವಣಿಗೆ

  ವಾರದ ಬೆಳವಣಿಗೆ

  'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಅವರು ಇಡೀ ಒಂದು ವಾರದ ಕಥೆ ಮತ್ತು ಮನೆಯಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲು ಮುಂದಾದರು. ಹಾಗಾಗಿ ಒಬ್ಬೊಬ್ಬರ ಬಳಿ ಇಡೀ ವಾರದಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕುವಂತೆ ಕಿಚ್ಚ ತಿಳಿಸಿದರು.

  ಪ್ರಥಮ್ ಮೇಲೆ ಮುಗಿಬಿದ್ದ ಮನೆ ಸದಸ್ಯರು

  ಪ್ರಥಮ್ ಮೇಲೆ ಮುಗಿಬಿದ್ದ ಮನೆ ಸದಸ್ಯರು

  ಕಿಚ್ಚ ಸುದೀಪ್ ಅವರ ಬಳಿ ಮನೆಯ ಇಡೀ ಸದಸ್ಯರು ಪ್ರಥಮ್ ಬಗ್ಗೆ ದೂರು ಹೇಳಿದರು. ಇದಕ್ಕೆ ಪ್ರತಿಯಾಗಿ ಸುದೀಪ್ ಅವರು ಕುಳಿತು ಎಲ್ಲವನ್ನೂ ಶಾಂತವಾಗಿ ಆಲಿಸಿದರು.

  English summary
  'Bigg Boss Kannada-4' Week 2: 'Varada Kathe' with Kichcha Sudeep. Niiranjan Deshpande Celebrates his Birthday at Bigg Boss house

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X