»   » ನಿಕಿತಾ ಕೂದಲಿಗೆ ಕೈಹಾಕಿ ಛೀ ಎನ್ನಿಸಿಕೊಂಡ ಚಂದ್ರಿಕಾ

ನಿಕಿತಾ ಕೂದಲಿಗೆ ಕೈಹಾಕಿ ಛೀ ಎನ್ನಿಸಿಕೊಂಡ ಚಂದ್ರಿಕಾ

Posted By:
Subscribe to Filmibeat Kannada
<ul id="pagination-digg"><li class="next"><a href="/tv/shweta-pandit-vijay-connection-bigg-boss-074864.html">Next »</a></li></ul>

ಈಟಿವಿ ಕನ್ನಡ ವಾಹಿನಿಯ 'ಬಿಗ್ ಬಾಸ್' ಕಾರ್ಯಕ್ರಮದ ಎಂಬತ್ತನೇ ದಿನದ ಹೈಲೈಟ್ಸ್ ಇಲ್ಲಿವೆ. ಬಿಗ್ ಬಾಸ್ ಕೊಟ್ಟಿರುವ ಟಾಸ್ಕನ್ನು ನಿಭಾಯಿಸುವಲ್ಲಿ ಚಂದ್ರಿಕಾ ಹಾಗೂ ಮನೆಯ ಇತರೆ ಸದಸ್ಯರು ಸಂಪೂರ್ಣ ಸೋತು ಸುಣ್ಣವಾಗಿದ್ದಾರೆ. ಆದರೂ ಬಿಗ್ ಬಾಸ್ ಮಾತ್ರ ಎಲ್ಲರನ್ನೂ ಚೆನ್ನಾಗಿ ಆಡುತ್ತಿದ್ದೀರಿ ಎಂದು ಬೆನ್ನುತಟ್ಟಿದ್ದು ವಿಶೇಷವಾಗಿತ್ತು.

ಕೋತಿಯ ವೇಷಧಾರಿ ನಿಕಿತಾ ಅವರು ಮನೆಯಲ್ಲಿ ಸ್ವಲ್ಪ ಹೆಚ್ಚಾಗಿಯೇ ಚೇಷ್ಟೆಗಳನ್ನು ಮಾಡುತ್ತಿದ್ದಾರೆ. ಇನ್ನು ಸಿಂಹದ ಪಾತ್ರಧಾರಿ ಅರುಣ್ ಸಾಗರ್ ಮಾತ್ರ ಅಷ್ಟೇ ಗಂಭೀರವಾಗಿದ್ದಾರೆ. ಆಗಾಗ ಗರ್ಜಿಸುತ್ತಾ ತಾನೂ ಟಾಸ್ಕ್ ನಲ್ಲಿದ್ದೇನೆ ಎಂಬುದನ್ನು ನೆನಪಿಸುತ್ತಿದ್ದಾರೆ.

Bigg Boss Kannada

ಕರಡಿ ಪಾತ್ರಧಾರಿ ವಿಜಯ್ ರಾಘವೇಂದ್ರ ಅವರು ಸಾಕಷ್ಟು ಸಮಯವನ್ನು ನಿದ್ದೆಯಲ್ಲೇ ಕಳೆಯುತ್ತಿದ್ದಾರೆ. ಇವರಿಗೆ ಸಾಥ್ ನೀಡುತ್ತಿರುವವರು ಆನೆ ವೇಷ ತೊಟ್ಟಿರುವ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ. ಇವರಿಬ್ಬರೂ ಸೋಮಾರಿ ಕರಡಿ ಹಾಗೂ ಆನೆಯಂತೆ ಮನೆಯಲ್ಲಿದ್ದಾರೆ.

ಈ ಎಲ್ಲಾ ಕಾಡುಪ್ರಾಣಿಗಳನ್ನು ಪಳಗಿಸುತ್ತಿರುವವರು ರಿಂಗ್ ಮಾಸ್ಟರ್ ಚಂದ್ರಿಕಾ. ಕೋತಿ ವೇಷದಲ್ಲಿರುವ ನಿಕಿತಾ ಅವರ ಮಂಗಾಟಗಳು ಜಾಸ್ತಿಯಾಗಿ ಚಂದ್ರಿಕಾ ಅವರನ್ನು ಕೆಣಕಿದವು. ಇದರಿಂದ ಕೋತಿಗೆ ಬುದ್ಧಿ ಕಲಿಸಲು ಅವರು ಸ್ವಲ್ಪ ಕ್ರೂರವಾಗಿ ವರ್ತಿಸಬೇಕಾಯಿತು.

ನಿಕಿತಾ ಅವರ ಕೂದಲನ್ನು ಹಿಡಿದು ಎಳೆದರು. ಒಂದಷ್ಟು ಕೂದಲು ಕಿತ್ತುಬಂದವು. ಇದರಿಂದ ದೃತಿಗೆಟ್ಟ ನಿಕಿತಾ ಅವರು ಚಂದ್ರಿಕಾ ಮೇಲೆ ಎಗರಿಬಿದ್ದರು. ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದೀರ ಎಂದ ಅವರು ಛೀ ಹೀಗಾ ನಡೆದುಕೊಳ್ಳುವುದು. ಹೇಗೆ ನಡೆದುಕೊಳ್ಳಬೇಕೆಂಬುದೇ ಗೊತ್ತಿಲ್ಲ ಎಂದು ಚಂದ್ರಿಕಾ ಮೇಲೆ ಬೇಸರಿಸಿಕೊಂಡರು.

<ul id="pagination-digg"><li class="next"><a href="/tv/shweta-pandit-vijay-connection-bigg-boss-074864.html">Next »</a></li></ul>
English summary
All was well in the latest task about 'a hunter and animals'. But it took a serious turn when Bigg Boss tried to modify the game by asking Nikita, who was playing the role of a monkey, to escape from the hunter and assigned her to bail out other animals played by Narendra Babu Sharma (Elephant), Arun Sagar (Lion) and Vijay Raghavendra (Bear). Here is the day 80th highlights.
Please Wait while comments are loading...