For Quick Alerts
  ALLOW NOTIFICATIONS  
  For Daily Alerts

  ಜಾನಕಿ ಮೇಲೆಯೆ ಅನುಮಾನ ಪಟ್ಟ ಪತಿ ನಿರಂಜನ್

  |

  ಮಗಳು ಜಾನಕಿ ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿ. ಜಾನಕಿ ಪೊಲೀಸ್ ಅಧಿಕಾರಿಯಾಗಿ ಅನೇಕ ದಿನಗಳೆ ಕಳೆದಿವೆ. ಆದರು ತಂದೆ ಭಾರ್ಗಿಯ ನಿಜ ಬಣ್ಣ ಇನ್ನು ಜಾನಕಿ ಮುಂದೆ ಬಯಲಾಗಿಲ್ಲ. ಶಂಕರ್ ದೇವಘಟ್ಟ ಪರ ನಿಂತ ಜಾನಕಿಯ ವಿರುದ್ಧ ಭಾರ್ಗಿಯ ಕೋಪ ನೆತ್ತಿಗೇರಿದೆ.

  ಮಗಳ ಮುಂದೆ ಕೋಪ ತೋರಿಸಿಕೊಳ್ಳದೆ ಮಗಳನ್ನು ನಯವಾಗಿಯೆ ಮಾತಡಿಸಿದ್ದಾರೆ. ಇತ್ತ ನಿರಂಜನ್ ಕೂಡ ಭಾರ್ಗಿ ಮನಗೆ ಎಂಟ್ರಿ ಕೊಟ್ಟಿದ್ದಾರೆ. ಬ್ಯುಸಿನೆಸ್ ವಿಚಾರವಾಗಿ ಚಂಚಲ ಜೊತೆ ಮಾತನಾಡಲು ಭಾರ್ಗಿ ಮನೆಗೆ ಹೋಗಿದ್ದಾರೆ.

  ರೋಚಕ ತಿರುವು ಪಡೆದ ಮಗಳು ಜಾನಕಿ : ಕೋರ್ಟ್ ಗೆ ಎಂಟ್ರಿ ಕೊಟ್ಟ ಸಿ ಎಸ್ ಪಿ

  ಜಾನಕಿ ಕೂಡ ಅಮ್ಮನ ಜೊತೆ ಭಾರ್ಗಿ ಮನೆಗೆ ಬಂದಿದ್ದಾರೆ. ನಿರಂಜನ್ ಭಾರ್ಗಿ ಇಬ್ಬರು ಜಾನಕಿ ತವರು ಮನೆಯಲ್ಲಿದ್ದಾರೆ. ಭಾವನಾತ್ಮಕವಾಗಿ ಭಾರ್ಗಿ ಮಗಳನ್ನು ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಮತ್ತೊಂದೆಡೆ ಜಾನಕಿ ಮೇಲೆಯೆ ಅನುಮಾನ ಪಟ್ಟಿದ್ದಾರೆ ಪತಿ ನಿರಂಜನ್. ಮುಂದೆ ಓದಿ..

  ಜಾನಕಿ ಮೇಲೆ ನಿರಂಜನ್ ಅನುಮಾನ

  ಜಾನಕಿ ಮೇಲೆ ನಿರಂಜನ್ ಅನುಮಾನ

  ಮೊದಲ ಬಾರಿಗೆ ಜಾನಕಿ ಮೇಲೆ ಅನುಮಾನ ಪಟ್ಟಿದ್ದಾರೆ ನಿರಂಜನ್. ಮಾಜಿ ಪ್ರಿಯಕರ ಆನಂದ್ ಬೆಳಗೂರ್ ಮನೆಯಿಂದ ಬರುವ ಊಟವನ್ನು ಜಾನಕಿ ಮಾಡುತ್ತಿರುವ ಕಾರಣ ನಿರಂಜನ್ ಆತಂಕ ಕೊಂಡಿದ್ದಾರೆ. ಪ್ರತೀದಿನ ನಿರಂಜನ್ ಜೊತೆ ಜಾನಕಿ ಊಟಮಾಡುತ್ತಿರುವುದಾಗಿ ನಿರಂಜನ್ ಮನೆಯಲ್ಲಿ ಹೇಳುತ್ತಾರೆ ಜಾನಕಿ ಮಾತು ಕೇಳಿ ಶಾಕ್ ಆಗಿದ್ದಾರೆ ನಿರಂಜನ್.

  ಅನುಮಾನ ಬೇಡ ಎಂದ ಜಾನಕಿ

  ಅನುಮಾನ ಬೇಡ ಎಂದ ಜಾನಕಿ

  ಆನಂದ್ ಬೆಳಗೂರು ಜೊತೆ ಊಟ ಮಾಡುವುದರಿಂದ ಅನುಮಾನ ಪಡಬೇಕಾಗಿಲ್ಲ ಎಂದು ಜಾನಕಿ ಸ್ಪಷ್ಟನೆ ನೀಡಿದ್ದಾರೆ. ಇಬ್ಬರು ಮಿತಿಯನ್ನು ದಾಟಿ ಹೋಗುವುದಿಲ್ಲ ಎಂದು ಜಾನಕಿ ಹೇಳಿದ್ರು ನಿರಂಜನ್ ಮಾತ್ರ ಆತಂಕಕ್ಕೆ ಒಳಗಾಗಿದ್ದಾರೆ. ನಿರಂಜನ್ ಊಟ ತಂದು ಕೊಡುತ್ತೇನೆ ಅಂತ ಹೇಳಿದ್ರು ಜಾನಕಿ ಮಂಗಳಮ್ಮ ಮಾಡುವ ಅಡುಗೆ ತುಂಬ ಚೆನ್ನಾಗಿರುತ್ತೆ. ಹಾಗಾಗಿ ಅವರ ಮನೆಯ ಊಟನೆ ಮಾಡುತ್ತೇನೆ ಎಂದು ಹೇಳುವ ಮೂಲಕ ನಿರಂಜನ್ ಗೆ ಇದ್ದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

  ಭಾರ್ಗಿ ಕುತಂತ್ರ: ಮಗಳು ಜಾನಕಿ ಅಧಿಕಾರದಿಂದ ಸಸ್ಪೆಂಡ್?

  ಜಾನಕಿ ಮನಸ್ಸು ಆನಂದ್ ಕಡೆ ವಾಲುತ್ತಿದೆಯ?

  ಜಾನಕಿ ಮನಸ್ಸು ಆನಂದ್ ಕಡೆ ವಾಲುತ್ತಿದೆಯ?

  ಜಾನಕಿ ಮತ್ತು ಆನಂದ್ ಒಂದೇ ಆಫೀಸಿನಲ್ಲಿ ಕೆಲೆಸಮಾಡುತ್ತಿದ್ದಾರೆ. ಅಲ್ಲದೆ ಆನಂದ್ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ. ಹಾಗಾಗಿ ಜಾನಕಿ ಮನಸ್ಸು ಆನಂದ್ ಕಡೆ ವಾಲುತ್ತಿದೆಯ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ. ಜಾನಕಿಗೆ ಈಗಾಗಲೆ ನಿರಂಜನ್ ಮೇಲೆ ಪ್ರೀತಿ ಶುರುವಾಗಿದೆ. ಆದ್ರೂ ಆನಂದ್ ಮಾಜಿ ಪ್ರಿಯತಮ ಹಾಗಾಗಿ ಆನಂದ್ ಮೇಲೆ ಮತ್ತೆ ಪ್ರೀತಿ ಶುರುವಾದರು ಅಚ್ಚರಿ ಇಲ್ಲ.

  ಭಾರ್ಗಿ ಮನೆಯಲ್ಲಿ ಜಾನಕಿ-ಆನಂದ್

  ಭಾರ್ಗಿ ಮನೆಯಲ್ಲಿ ಜಾನಕಿ-ಆನಂದ್

  ಭಾರ್ಗಿ ಮನೆಯಲ್ಲಿ ಜಗಳವಾಡಿದ ನಂತರ ನಿರಂಜನ್ ಮತ್ತೆ ಜಾನಕಿ ತವರು ಮನೆಗೆ ಕಡೆ ಹೋಗಿರ್ರಿಲ್ಲ. ಆದ್ರೀಗ ಮತ್ತೆ ಭಾರ್ಗಿ ಮನೆಯಲ್ಲಿ ಕುಳಿತಿದ್ದಾರೆ ಆನಂದ್. ಅದೆ ಸಮಯಕ್ಕೆ ಜಾನಕಿ ಕೂಡ ಮನೆಗೆ ಬಂದಿದ್ದಾರೆ. ಬ್ಯುಸಿನೆಸ್ ವಿಚಾರವಾಗಿ ಚಂಚಲ ಜೊತೆ ಮಾತನಾಡಲು ನಿರಂಜನ್ ಮನೆಗೆ ಬಂದಿದ್ದಾರೆ. ನಿರಂಜನ್ ನೋಡಿ ಭಾರ್ಗಿ ಸಿಟ್ಟಾದರು ಚಂಚಲ ಅಪ್ಪನ್ನು ಸಮಾಧಾನ ಮಾಡಿ ಹಾಗೆ ಹೋಗುವಂತೆ ಮಾಡುತ್ತಾರೆ.

  ಪೊಲೀಸ್ ಅಧಿಕಾರಿಯಾದ ಜಾನಕಿ: ಅಪ್ಪ ಭಾರ್ಗಿ ವಿರುದ್ಧ ತಿರುಗಿ ನಿಲ್ಲುತ್ತಾಳಾ ಮಗಳು

  ಜಾನಕಿಯ ಮನವೊಲಿಸುತ್ತಾರಾ ಭಾರ್ಗಿ

  ಜಾನಕಿಯ ಮನವೊಲಿಸುತ್ತಾರಾ ಭಾರ್ಗಿ

  ಮಗಳು ಜಾನಕಿ ಭಾರ್ಗಿ ನಿರ್ಧಾರಗಳ ವಿರುದ್ಧವಾಗಿ ಹೋಗುತ್ತಿದ್ದಾರೆ ಎನ್ನುವುದು ಭಾರ್ಗಿಗೆ ಗೊತ್ತು. ಹೇಗಾದ್ರು ಮಾಡಿ ಮಗಳನ್ನು ತನ್ನತ್ತ ಸೆಳೆದುಕೊಳ್ಳಬೇಕೆನ್ನುವ ಉದ್ದೇಶದಿಂದ ಮಗಳ ಮನವೊಲಿಸುವ ಕಾರ್ಯಕ್ರದಲ್ಲಿ ನಿರತರಾಗಿದ್ದಾರೆ. ಅಪ್ಪನನ್ನು ಬಿಟ್ಟು ಶಂಕರ್ ದೇವಘಟ್ಟ ಪರವಾಗಿ ಇರುವ ಜಾನಕಿಯನ್ನು ಪ್ರಶ್ನೆಮಾಡುತ್ತಿದ್ದಾರೆ ಭಾರ್ಗಿ. ಅಪ್ಪನ ವಿರುದ್ಧ ನಿಲ್ಲುತ್ತಾರಾ ಎಂದು ಮಗಳನ್ನು ಭಾವನಾತ್ಮಕವಾಗಿ ಒಲಿಸಿಕೊಳ್ಳುತ್ತಿದ್ದಾರೆ ಭಾರ್ಗಿ.

  English summary
  Niranjan was doubt on his wife Janaki in 'Magalu Janaki' kannada serial. Niranjan is worried about the Janaki is getting closer with the former lover Anand.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X