»   » ಇದೇ ವಾರ ಪ್ರಸಾರವಾಗ್ತಿದೆ ಸುದೀಪ್ 'ನಂ.1 ಯಾರಿ' ಎಪಿಸೋಡ್

ಇದೇ ವಾರ ಪ್ರಸಾರವಾಗ್ತಿದೆ ಸುದೀಪ್ 'ನಂ.1 ಯಾರಿ' ಎಪಿಸೋಡ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿರೂಪಣೆ ಮಾಡಿಕೊಡುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಭಾಗವಹಿಸಿದ್ದರು ಎಂಬುದು ಈ ಹಿಂದೆಯೇ ಸುದ್ದಿಯಾಗಿತ್ತು. ಆದ್ರೆ, ಈ ಎಪಿಸೋಡ್ ಯಾವಾಗ ಪ್ರಸಾರವಾಗುತ್ತೆ ಎಂಬ ಕುತೂಹಲ ಅಭಿಮಾನಿ ವಲಯದಲ್ಲಿ ಉಂಟಾಗಿತ್ತು.

ಕೊನೆಗೂ ಕಿಚ್ಚ ಎಪಿಸೋಡ್ ಗೆ ಸಮಯ ಮತ್ತು ದಿನಾಂಕ ನಿಗದಿಯಾಗಿದೆ. ಇದೇ ಶನಿವಾರ (ಮೇ 19) ಸುದೀಪ್ ಅತಿಥಿಯಾಗಿ ಆಗಮಿಸಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರಲಿದೆ.

ಈಗಾಗಲೇ ಸುದೀಪ್ ಅವರ ಎಪಿಸೋಡ್ ನ ಪ್ರೋಮೋಗಳು ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಅಂದ್ಹಾಗೆ, ಸುದೀಪ್ ಅವರ ಜೊತೆಯಲ್ಲಿ ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ವಿಶೇಷ ಆಹ್ವಾನಿತರಾಗಿ ಬಂದಿದ್ದಾರೆ.

No 1 yaari with shivanna episode on may 19th

'ನಂ 1 ಯಾರಿ' ಶೋನಲ್ಲಿ ಸುದೀಪ್ ಜೊತೆ ಆಗಮಿಸಿರುವ ಸ್ನೇಹಿತ ಯಾರು.?

ಸ್ಟಾರ್ ಸುವರ್ಣ ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ 'ನಂ 1 ಯಾರಿ ವಿತ್ ಶಿವಣ್ಣ' ದೊಡ್ಡ ಮಟ್ಟದ ಜನಪ್ರಿಯತೆ ಹೊಂದಿದೆ. ಉಪೇಂದ್ರ, ಶರಣ್, ಲೂಸ್ ಮಾದ ಯೋಗಿ, ಧನಂಜಯ್, ವಸಿಷ್ಟ, ದಿಗಂತ್, ಶ್ರೀಮುರಳಿ, ರಮೇಶ್ ಅರವಿಂದ್ ಅಂತಹ ನಟರು ಶಿವಣ್ಣ ಜೊತೆಯಲ್ಲಿ ಟೈಂ ಪಾಸ್ ಮಾಡಿ ಹೋಗಿದ್ದಾರೆ.

ಅಂದ್ಹಾಗೆ, 'ನಂ.1 ಯಾರಿ ವಿತ್ ಶಿವಣ್ಣ' ಈ ಕಾರ್ಯಕ್ರಮದಲ್ಲಿ ಕೇವಲ ಹದಿಮೂರು ಸಂಚಿಕೆಗಳಷ್ಟೇ ಪ್ರಸಾರ ಆಗಲಿದೆ. ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಕಾಲ್ ಶೀಟ್ ಪಡೆದದ್ದು ಕೂಡ ಹದಿಮೂರು ಸಂಚಿಕೆಗಳಿಗಾಗಿ. ಹೀಗಾಗಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾದರೂ, ಅನಿವಾರ್ಯವಾಗಿ ಶೋಗೆ ಶುಭಂ ಹಾಡಬೇಕಾಗಿದೆ.

English summary
Kannada actor sudeep and director prem will be part in 'No 1 yaari programme'. programme hosted by hatrick hero shiva rajkumar and telecast on may 19th.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X