»   » 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ದಿಢೀರ್ ಮುಕ್ತಾಯ: ಕಾರಣವೇನು.?

'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ದಿಢೀರ್ ಮುಕ್ತಾಯ: ಕಾರಣವೇನು.?

Posted By:
Subscribe to Filmibeat Kannada
ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ಮುಕ್ತಾಯವಾಗಲು ಕಾರಣವೇನು? | Filmibeat Kannada

ಕನ್ನಡ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಕಾರ್ಯಕ್ರಮಗಳ ಪೈಕಿ 'ನಂ.1 ಯಾರಿ ವಿತ್ ಶಿವಣ್ಣ' ಕೂಡ ಒಂದು. ಡ್ಯಾನ್ಸ್ ರಿಯಾಲಿಟಿ ಶೋ 'ಕಿಕ್' ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಿರುತೆರೆ ಕಡೆ ಮುಖ ಮಾಡಿದ್ದೇ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ.

ಗೆಳೆಯರ ಅನುಬಂಧ ಸಾರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಆತ್ಮೀಯ ಸ್ನೇಹಿತರು ಭಾಗವಹಿಸಿದ್ದರು. ಕುಚ್ಚಿಕ್ಕು ಗೆಳೆಯರಾದ ಗುರುಕಿರಣ್-ಉಪೇಂದ್ರ, ದಿಗಂತ್-ಲೂಸ್ ಮಾದ, ಶರಣ್-ತರುಣ್ ಸುಧೀರ್, ಧನಂಜಯ್-ವಸಿಷ್ಟ ಸಿಂಹ, ಶ್ರುತಿ ಹರಿಹರನ್-ಶ್ರದ್ಧಾ ಶ್ರೀನಾಥ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಮಸ್ತ್ ಮನರಂಜನೆ ನೀಡುತ್ತಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಈ ಕಾರ್ಯಕ್ರಮ ಮುಕ್ತಾಯದ ಹಂತ ತಲುಪಿದೆ. ದಿಢೀರ್ ಅಂತ ಈ ಕಾರ್ಯಕ್ರಮವನ್ನ ಮುಗಿಸುತ್ತಿರುವುದಕ್ಕೆ ಕಾರಣ ಏನು.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಹದಿಮೂರು ಸಂಚಿಕೆಗಳಷ್ಟೇ.!

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಅದಾಗಲೇ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಆರು ಸಂಚಿಕೆಗಳು ಪ್ರಸಾರ ಆಗಿದೆ. ಇನ್ನೂ ಏಳು ಸಂಚಿಕೆಗಳು ಪ್ರಸಾರ ಆದರೆ, ಕಾರ್ಯಕ್ರಮ ಮುಗಿದ ಹಾಗೆ. ಅರ್ಥಾತ್ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಕೇವಲ ಹದಿಮೂರು ಸಂಚಿಕೆಗಳಷ್ಟೇ ಪ್ರಸಾರ ಆಗಲಿದೆ.

'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಆದ ರಮೇಶ್

ಪ್ಲಾನ್ ಇದ್ದದ್ದೇ ಅಷ್ಟು!

ಅಷ್ಟಕ್ಕೂ, 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಆಯೋಜಕರು ಪ್ಲಾನ್ ಮಾಡಿದ್ದೇ ಹದಿಮೂರು ಸಂಚಿಕೆಗಳು. ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಕಾಲ್ ಶೀಟ್ ಪಡೆದದ್ದು ಕೂಡ ಹದಿಮೂರು ಸಂಚಿಕೆಗಳಿಗಾಗಿ. ಹೀಗಾಗಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾದರೂ, ಅನಿವಾರ್ಯವಾಗಿ ಶೋಗೆ ಶುಭಂ ಹಾಡಬೇಕಾಗಿದೆ.

'ನಂ 1 ಯಾರಿ' ಶೋನಲ್ಲಿ ಸುದೀಪ್ ಜೊತೆ ಆಗಮಿಸಿರುವ ಸ್ನೇಹಿತ ಯಾರು.?

ಕೊನೆಯ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್.?

'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಸುದೀಪ್ ಹಾಗೂ 'ಜೋಗಿ' ಪ್ರೇಮ್ ಭಾಗವಹಿಸಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. ಮೂಲಗಳ ಪ್ರಕಾರ, ಸುದೀಪ್ ಹಾಗೂ ಪ್ರೇಮ್ ಭಾಗವಹಿಸಿರುವ ಸಂಚಿಕೆಯೇ ಕೊನೆಯದ್ದು.

ಮುಂದಿನ ವಾರ ಬರ್ತಾರೆ ರಮೇಶ್

ಮುಂದಿನ ಭಾನುವಾರ ಪ್ರಸಾರ ಆಗುವ ಸಂಚಿಕೆಯಲ್ಲಿ ನಟ, ನಿರ್ದೇಶಕ ರಮೇಶ್ ಅರವಿಂದ್ ಹಾಗೂ ಪಾರುಲ್ ಯಾದವ್ ಭಾಗವಹಿಸಿದ್ದಾರೆ.

English summary
Popular show No.1 Yari with Shivanna to end with 13 episodes.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X