For Quick Alerts
  ALLOW NOTIFICATIONS  
  For Daily Alerts

  ನನ್ನ ಮತ್ತು ಕಪಿಲ್ ಶರ್ಮಾ ನಡುವೆ ಯಾವುದು ಮುನಿಸು ಇಲ್ಲ ಎಂದ ಕೃಷ್ಣ ಅಭಿಷೇಕ್

  |

  ನಟ ಹಾಗೂ ಹಿಂದಿ ಕಿರುತೆರೆಯ ಸ್ಟಾರ್ ಕಪಿಲ್ ಶರ್ಮಾ ಮತ್ತು ನನ್ನ ನಡುವೆ ಯಾವುದೇ ಮುನಿಸು ಇಲ್ಲ ಎಂದು ಹಾಸ್ಯ ನಟ ಕೃಷ್ಣ ಅಭಿಷೇಕ್ ಸ್ಪಷ್ಟಪಡಿದ್ದಾರೆ.

  'ದಿ ಕಪಿಲ್ ಶರ್ಮಾ ಶೋ'ನಿಂದ ಕಪಿಲ್ ಆನ್‌ಸ್ಕ್ರೀನ್ ವೈಫ್ ಹೊರಕ್ಕೆ?

  ಕಪಿಲ್ ಶರ್ಮಾ ಸಾರಥ್ಯದ 'ದಿ ಕಪಿಲ್ ಶರ್ಮಾ' ಶೋ ಕಾರ್ಯಕ್ರಮದಲ್ಲಿ ಕೃಷ್ಣ ಅಭಿಷೇಕ್ ಕೂಡ ಇದ್ದರು. ಆದರೆ, ಇಬ್ಬರ ನಡುವಿನ ಮನಸ್ತಾಪದಿಂದ ಕೃಷ್ಣ ಅಭಿಷೇಕ್ ದೂರ ಆಗಿದ್ದರು.

  ಆದರೆ, ಇದೀಗ ತಮ್ಮ ಈ ಘಟನೆ ಬಗ್ಗೆ ಕೃಷ್ಣ ಅಭಿಷೇಕ್ ಮಾತನಾಡಿದ್ದಾರೆ. ''ನನಗೆ ಮತ್ತು ಕಪಿಲ್ ಶರ್ಮಾಗೆ ಯಾವುದೇ ದ್ವೇಷ ಇಲ್ಲ. ನಮ್ಮ ಇಬ್ಬರ ನಡುವೆ ಗೌರವಾನ್ವಿತ ಸಂಬಂಧ ಇದೆ. ಅವರು ತಮ್ಮ ಹೊಸ ಶೋ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ನಮ್ಮ ನಡುವೆ ವೈಯಕ್ತಿಕ ದ್ವೇಷ ಇಲ್ಲ. ನಮ್ಮ ಶೋಗಳ ನಡುವೆ ಸ್ಪರ್ಧೆ ಇದೆ ಅಷ್ಟೇ'' ಎಂದಿದ್ದಾರೆ.

  ಕಪಿಲ್ ಶರ್ಮಾ ಶೋ ತಂಡದ ಜೊತೆಗಿನ ಫೋಟೋವನ್ನು ಕೃಷ್ಣ ಅಭಿಷೇಕ್ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಪಿಲ್ ಶರ್ಮಾ ಲಾಂಗ್ ಗ್ಯಾಪ್ ನಂತರ ಮತ್ತೆ ತಮ್ಮ ಶೋ ಶುರು ಮಾಡಿದ್ದಾರೆ. ಇತ್ತೀಚಿಗೆ ಈ ಕಾರ್ಯಕ್ರಮದಲ್ಲಿ ನಟ ಸುನೀಲ್ ಶೆಟ್ಟಿ ಜೊತೆಗೆ ಸುದೀಪ್ ಕೂಡ ಭಾಗಿಯಾಗಿದ್ದರು.

  English summary
  No rivalry with Kapil Sharma says co star Krushna Abhishek.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X