For Quick Alerts
  ALLOW NOTIFICATIONS  
  For Daily Alerts

  ಈಟಿವಿ ಕನ್ನಡ ವಾಹಿನಿಯಲ್ಲಿ ನೂರೆಂಟು ಸುಳ್ಳು

  By Rajendra
  |

  ಈಟಿವಿ ಕನ್ನಡ ವಾಹಿನಿಯಲ್ಲಿ ಇದೇ ಜುಲೈ 23ರಿಂದ 'ನೂರೆಂಟು ಸುಳ್ಳು' ಎಂಬ ಕಾಮಿಡಿ ಧಾರಾವಾಹಿ ಪ್ರಸಾರವಾಗುತ್ತಿದೆ. ಸೀರಿಯಲ್ ಪ್ರಸಾರವಾಗುವ ಸಮಯ ರಾತ್ರಿ 10.30. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ವಾರದ ಐದು ದಿನ ಈ ಧಾರಾವಾಹಿಯನ್ನು ಆಸಕ್ತರು ನೋಡಿ ಎಂಜಾಯ್ ಮಾಡಬಹುದು.

  ತಾನೊಬ್ಬ ಪ್ರಾಮಾಣಿಕ ಎಂದು ಸೋಗು ಹಾಕಿಕೊಂಡ ಯುವಕನೊಬ್ಬನ ಸುತ್ತ ಸುತ್ತವ ಕತೆಯೇ ಈ ಧಾರಾವಾಹಿ ಹೂರಣ. ಆ ಯುವಕನ ಹೆಸರು ಸತ್ಯನಾರಾಯಣ. ಹೆಸರಿಗಷ್ಟೇ ಸತ್ಯನಾರಾಯಣ. ಬಾಯಿಬಿಟ್ಟರೆ ಸುಳ್ಳೇ ಸುಳ್ಳು. ಮೂವತ್ತರ ಹರೆಯದ ಈತ ಅತಿದೊಡ್ಡ ಬಿಜಿನೆಸ್ ಮ್ಯಾನ್ ನಿತ್ಯಾನಂದ ಶೆಟ್ಟಿ ಬಳಿ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ.

  ತಾನೊಬ್ಬ ಸಂಪ್ರದಾಯಸ್ಥ ಕುಟುಂಬದವನು ಎಂದು ಹೇಳಿಕೊಂಡು ಅವರ ವಿಶ್ವಾಸವನ್ನು ಗಿಟ್ಟಿತ್ತಾನೆ. ಶೆಟ್ಟರ ಮಗಳು ಆರತಿಗೂ ಆತ್ಮೀಯನಾಗಿ ಆಕೆಯ ಗೆಳೆತನ ಸಂಪಾದಿಸುವಲ್ಲಿ ಯಶಸ್ವಿಯಾಗುತ್ತಾನೆ. ಆರತಿಗೆ ಮದುವೆ ಫಿಕ್ಸ್ ಆಗುತ್ತದೆ. ಆ ಮದುವೆ ಮುರಿದು ಬೀಳುತ್ತದೆ.

  ಇನ್ನು ವಿಧಿಯಿಲ್ಲದೆ ಶೆಟ್ಟರು ನಂಬಿಕಸ್ಥ ಸತ್ಯನಿಗೆ ತನ್ನ ಮಗಳು ಆರತಿಯನ್ನು ಕೊಡಲು ದೃಢ ನಿರ್ಧಾರ ಮಾಡುತ್ತಾರೆ. ಬೆಂಗಳೂರಿನಲ್ಲಿ ಮದುವೆ ಎಂದು ನಿಶ್ಚಯವಾಗುತ್ತದೆ. ಸತ್ಯನಾರಾಯಣ ಕುಟುಂಬಿಕರ ಸಮ್ಮುಖದಲ್ಲಿ ಮದುವೆಯಾಗಬೇಕೆಂದು ಶೆಟ್ಟರು ಹಠ ಹಿಡಿಯುತ್ತಾರೆ.

  ಇಕ್ಕಟ್ಟಿಗೆ ಸಿಕ್ಕಿಬೀಳುವ ಸತ್ಯ ಈ ಗಡಾಂತರದಿಂದ ಪಾರಾಗಲು ಬಾಡಿಗೆ ಕುಟುಂಬವನ್ನು ಹೊಂದಿಸಬೇಕಾಗುತ್ತದೆ. ಸತ್ಯನ ಪಡಿಪಾಟಲು ಕಾಮಿಡಿಯಾಗಿ ಸಾಗುತ್ತದೆ. ಈ ಪ್ರಯತ್ನದಲ್ಲಿ ಸತ್ಯ ಪಾಸಾಗುತ್ತಾನಾ, ಫೇಲಾಗುತ್ತಾನಾ ಎಂಬುದೇ 'ನೂರೆಂಟು ಸುಳ್ಳು' ಧಾರಾವಾಹಿ ತಿರುಳು.

  ಆರ್.ಕೆ ಸಂಸ್ಥೆ ನಿರ್ಮಿಸುತ್ತಿರುವ ಈ ಧಾರಾವಾಹಿ ಪ್ರಧಾನ ನಿರ್ದೇಶಕ ಮೊಹೇನಾ ಸಿಂಗ್ ಶೌರಿ, ಸಂಚಿಕೆ ನಿರ್ದೇಶನ ಜಯದೇಶ್. ಪಿ ಕಣ್ಣನ್ ಛಾಯಾಗ್ರಹಣ ಇರುವ ಈ ಧಾರಾವಾಹಿಯಲ್ಲಿ ಭಾರ್ಗವಿ ನಾರಾಯಣ್, ಬಾಬು ಹಿರಣ್ಣಯ್ಯ, ರಘು ಶಿವಮೊಗ್ಗ, ವಿವೇಕ್ ಮದನ್, ಚಿತ್ಕಲಾ, ಸೋನು ವಾಲಾ ಇತರ ತಾರಾಬಳಗವಿದೆ. ಈ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ವಿ. ಮನೋಹರ್ ರಚಿಸಿದ್ದಾರೆ. ಹಿನ್ನೆಲೆ ಸಂಗೀತ ಸುಮೇರು ರಾವುತ್. (ಒನ್ ಇಂಡಿಯಾ ಕನ್ನಡ)

  English summary
  Noorentu Sullu comedy soap on Etv Kannada starts from 23rd July, 2012 at 10.30 pm IST on every Monday to Friday. Sathya lies about having dependent family members in order to get a job. When the situation gets out of control, Sathya calls his friend, Raju and tells him about his quandary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X