For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಮನೆಗೆ ನರ್ಸ್ ಜಯಲಕ್ಷ್ಮಿ ರೀ ಎಂಟ್ರಿ

  By Rajendra
  |

  ಈ ಬಾರಿ ಬಿಗ್ ಬಾಸ್ ಮನೆಯಿಂದ ಯಾರು ಹೊರಹೋಗುತ್ತಾರೆ ಎಂಬ ಬಗ್ಗೆ ತೀವ್ರ ಕುತೂಹಲ ಉಂಟಾಗಿತ್ತು. ವಿನಾಯಕ ಜೋಶಿ, ಋಷಿಕುಮಾರ ಹಾಗೂ ನಿಖಿತಾ ತುಕ್ರಲ್ ನಾಮಿನೇಟ್ ಆಗಿದ್ದರು. ನಿಖಿತಾ ತುಕ್ರಲ್ ಅಥವಾ ವಿನಾಯಕ ಜೋಶಿ ಇವರಿಬ್ಬರಲ್ಲಿ ಒಬ್ಬರು ಗ್ಯಾರಂಟಿ ಎಲಿಮಿನೇಟ್ ಆಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆಗಿದ್ದೇ ಬೇರೆ.

  ಇಬ್ಬರು ಸ್ವಾಮಿಗಳಲ್ಲಿ ಒಬ್ಬ ಸ್ವಾಮಿ ಮನೆಯಿಂದ ಹೊರಬಿದ್ದಿದ್ದಾರೆ. ಋಷಿಕುಮಾರ ಎಲಿಮಿನೇಟ್ ಆಗಿದ್ದಾರೆ. ಈ ಶುಕ್ರವಾರ (ಏ.20) 'ವಾರದ ಕಥೆ ಕಿಚ್ಚನ ಜೊತೆ' ಹಲವು ಕುತೂಹಲಗಳಿಗೆ ಕಾರಣವಾಯಿತು. ತಾನು ಮನೆಯಿಂದ ಹೊರಹೋಗುತ್ತೇನೆ ಎಂದು ಸ್ವತಃ ಋಷಿಕುಮಾರ ಸಹ ಊಹಿಸಲಿಲ್ಲ ಎನ್ನಿಸುತ್ತದೆ.

  ವಿನಾಯಕ ಜೋಶಿ ನಿಮ್ಮ ಸೂಟ್ ಕೇಸ್ ರೆಡಿನಾ. ಹಾಗಿದ್ದರೆ ನೀವು ಅದನ್ನು ಅಲ್ಲೇ ಇಟ್ಟು ಮನೆಯಲ್ಲೇ ಉಳಿಯಿರಿ ಎಂದಾಗ ಬಿಗ್ ಬಾಸ್ ಕಾರ್ಯಕ್ರವನ್ನು ಚಾಚೂ ತಪ್ಪದೆ ನೋಡುತ್ತಿರುವ ವೀಕ್ಷಕರು ಕ್ಷಣ ಕಾಲ ಗಲಿಬಿಲಿಯಾದರು. ಅಯ್ಯೋ ಜೋಶಿ ಔಟ್ ಆಗುತ್ತಾನೆ ಎಂದುಕೊಂಡಿದ್ದೆವು. ಇದೇನಪ್ಪಾ ಎಲ್ಲಾ ಉಲ್ಟಾ ಆಯ್ತು ಎಂದುಕೊಂಡರು.

  ತಾಳ್ಮೆಕಳೆದುಕೊಂಡ ವಿನಾಯಕ ಜೋಶಿ

  ತಾಳ್ಮೆಕಳೆದುಕೊಂಡ ವಿನಾಯಕ ಜೋಶಿ

  ಈ ಬಾರಿಯ ಎಪಿಸೋಡ್ ಎಂದಿನಂತಿರಲಿಲ್ಲ. ವಿನಾಯಕ ಜೋಶಿ ಅಂತೂ ತಾನೇ ಮನೆಯಿಂದ ಹೊರಹೋಗಲು ನಿರ್ಧರಿಸಿಬಿಟ್ಟಿದ್ದ. ತಾಯಿಗೆ ಹುಷಾರಿಲ್ಲ. ಅವರಿಗೆ ಒಂದು ಬಾರಿ ಮೈಲ್ಡ್ ಅಟ್ಯಾಕ್ ಆಗಿದೆ. ಮನೆಯಲ್ಲಿ ಅವರು ಒಬ್ಬರೇ ಇರುತ್ತಾರೆ. ಅವರ ಆರೋಗ್ಯ ಹೇಗಿದೆಯೋ ಏನೋ. ನನ್ನನ್ನು ದಯವಿಟ್ಟು ಇಲ್ಲಿಂದ ಕಳುಹಿಸಿ ಬಿಡಿ ಎಂದು ಸುದೀಪ್ ಅವರನ್ನು ಬೇಡಿಕೊಂಡರು.

  ಜೋಶಿಗೆ ಸುದೀಪ್ ಸಮಾಧಾನ

  ಜೋಶಿಗೆ ಸುದೀಪ್ ಸಮಾಧಾನ

  ವಿನಾಯಕ ಜೋಶಿ ಸಂಪೂರ್ಣವಾಗಿ ತಾಳ್ಮೆ ಕಳೆದುಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಏನೇನೋ ಆಗುತ್ತಿದೆ. ನನಗೆ ಇಲ್ಲಿ ಇರೋದಕ್ಕೆ ಸಾಧ್ಯವಿಲ್ಲ. ಇಲ್ಲಿಂದ ಬಂದ ಮೇಲೆ ನಾನು ಎಲ್ಲವನ್ನೂ ನಿಮಗೆ ಹೇಳುತ್ತೇನೆ ಎಂದು ಅಂಗಲಾಚಿಕೊಂಡರು. ಬಳಿಕ ಸುದೀಪ್, ನಿಮ್ಮ ತಾಯಿ ಆರಾಮವಾಗಿದ್ದಾರೆ ಎಂದು ಹೇಳಿ ಸಮಾಧಾನಪಡಿಸಿದರು. ಬಳಿಕ ಎಲ್ಲರೂ ಶಾಂತಚಿತ್ತರಾದರು.

  ನಗುನಗುತ್ತಾ ಮನೆಯಿಂದ ಹೊರನಡೆದ ಋಷಿ

  ನಗುನಗುತ್ತಾ ಮನೆಯಿಂದ ಹೊರನಡೆದ ಋಷಿ

  ಋಷಿಕುಮಾರ ಮನೆಯಿಂದ ಹೊರಬೀಳಬೇಕಾದರೆ ಕಣ್ಣೀರಕೋಡಿ ಎಲ್ಲಿ ಹರಿಸಿಬಿಡುತ್ತಾನೋ ಎಂದು ಎಲ್ಲರೂ ಭಾವಿಸಿದರು. ಆದರೆ ಅವರು ನಗುನಗುತ್ತಲೇ ಮನೆಯಿಂದ ಹೊರಹೋದರು. 'ಬ್ರಹ್ಮಾಂಡ' ನರೇಂದ್ರ ಬಾಬು ಶರ್ಮಾ ಅವರನ್ನು ಆಶೀರ್ವದಿಸಿದರು.

  ಶರ್ಮಾ ಅವರದು ಮಗುವಿನಂತಹ ಮನಸ್ಸು

  ಶರ್ಮಾ ಅವರದು ಮಗುವಿನಂತಹ ಮನಸ್ಸು

  ಬ್ರಹ್ಮಾಂಡ ಗುರೂಜಿ ಬಗ್ಗೆ ಏನು ಹೇಳ್ತೀರಾ ಎಂದು ಋಷಿಕುಮಾರನನ್ನು ಸುದೀಪ್ ಕೇಳಿದಾಗ, ಅವರು ಮಾತನಾಡುತ್ತಾ. ಇಲ್ಲಿಗೆ ಬರುವ ಮುನ್ನ ನಾನು ಅವರ ಬಗ್ಗೆ ಏನೇನೋ ತಿಳಿದಿದ್ದೆ. ಇಲ್ಲಿ ಬಂದ ಬಳಿಕ ಗೊತ್ತಾಯಿತು. ಅವರ ಮನಸ್ಸು ಮಗುವಿನಂತಹದ್ದು ಎಂದರು.

  ಹದಿಮೂರನೇ ಸ್ಪರ್ಧಿಯಾಗಿ ಜಯಲಕ್ಷ್ಮಿ ರೀ ಎಂಟ್ರಿ

  ಹದಿಮೂರನೇ ಸ್ಪರ್ಧಿಯಾಗಿ ಜಯಲಕ್ಷ್ಮಿ ರೀ ಎಂಟ್ರಿ

  ಋಷಿಕುಮಾರ ಏನೋ ಎಲಿಮಿನೇಟ್ ಆದ. ಆದರೆ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಅಂದರೆ ಇವರು ಹಳೆ ಅತಿಥಿ. ಆದರೆ ಮತ್ತೆ ರೀ ಎಂಟ್ರಿ ಕೊಟ್ಟಿದ್ದಾರೆ. ಅವರು ಬೇರಾರು ಅಲ್ಲ ನರ್ಸ್ ಜಯಲಕ್ಷ್ಮಿ. ಹದಿಮೂರನೇ ಸ್ಪರ್ಧಿ ಯಾರಾಗಲಿದ್ದಾರೆ ಎಂಬುದು ಕುತೂಹಲಕ್ಕೆ ಕಡೆಗೂ ತೆರೆಬಿದ್ದಿದೆ.

  ಶರ್ಮಾಗೆ ಸುದೀಪ್ ಕೊಟ್ಟ ಗಿಫ್ಟ್ ಜಯಲಕ್ಷ್ಮಿ

  ಶರ್ಮಾಗೆ ಸುದೀಪ್ ಕೊಟ್ಟ ಗಿಫ್ಟ್ ಜಯಲಕ್ಷ್ಮಿ

  ಗುರುಗಳೇ ನಿಮಗೊಂದು ಗಿಫ್ಟ್. ಸ್ಟೋರ್ ರೂಮಿನಲ್ಲಿ ಹೋಗಿ ನೀವು ತಗೊಂಡು ಬನ್ನಿ ಎಂದರು ಸುದೀಪ್. ನರೇಂದ್ರ ಬಾಬು ಶರ್ಮಾ ಅವರು ಇನ್ನೇನೂ ನಿರೀಕ್ಷಿಸಿ ಸ್ಟೋರ್ ರೂಮಿಗೆ ಹೋದರು. ವಾಶಿಂಗ್ ಮಿಷಿನ್ ಇರಬಹುದು ಎಂದುಕೊಂಡು ಕರ್ಟನ್ ಸರಿಸಿದರು. ನೋಡಿದರೆ ನರ್ಸ್ ಜಯಲಕ್ಷ್ಮಿ.

  ಜಯಲಕ್ಷ್ಮಿಗೆ ಅಭೂತಪೂರ್ವ ಸ್ವಾಗತ

  ಜಯಲಕ್ಷ್ಮಿಗೆ ಅಭೂತಪೂರ್ವ ಸ್ವಾಗತ

  ನರ್ಸ್ ಜಯಲಕ್ಷ್ಮಿ ಆಗಮನದಿಂದ ಮತ್ತೆ ಮನೆಯಲ್ಲಿ ಗೆಲುವಿನ ವಾತಾವರಣ ಏರ್ಪಟ್ಟಿದೆ. ಆಕೆಯನ್ನು ಮತ್ತೆ ಯಾಕೆ ಕರೆಸಿದರು ಎಂಬ ಬಗ್ಗೆ ಸುದೀಪ್ ಏನೂ ಹೇಳಲಿಲ್ಲ. ಮುಂದಿನ ದಿನಗಳಲ್ಲಿ ಜಯಲಕ್ಷ್ಮಿ ಅವರೇ ಹೇಳುತ್ತಾರೆ ಅನ್ನಿಸುತ್ತದೆ. ಒಟ್ಟಿನಲ್ಲಿ ಜಯಲಕ್ಷ್ಮಿಯನ್ನು ಎಲ್ಲರೂ ಅಪ್ಪಿ ಬರಮಾಡಿಕೊಂಡರು.

  ತಂದೆತಾಯಿಯನ್ನು ನೆನೆದು ಶರ್ಮಾ ಕಣ್ಣು ಒದ್ದೆ

  ತಂದೆತಾಯಿಯನ್ನು ನೆನೆದು ಶರ್ಮಾ ಕಣ್ಣು ಒದ್ದೆ

  ಇನ್ನೊಂದು ಕಡೆ ಬ್ರಹ್ಮಾಂಡ ಗುರುಗಳು ತಮ್ಮ ತಂದೆತಾಯಿಯನ್ನು ನೆನೆದು ಕಣ್ಣು ಒದ್ದೆ ಮಾಡಿಕೊಂಡರು. ನಾನು ಈ ಮಟ್ಟಕ್ಕೆ ಬೆಳೆದಿದ್ದೀನಿ ಎಂದರೆ ಅದಕ್ಕೆ ಕಾರಣಕರ್ತರು ಅವರು. ಅವರಿಗೆ ನಾನು ಸದಾ ಋಣಿ ಎಂದರು. ಶರ್ಮಾ ಅವರ ತಂದೆತಾಯಿ ಹೆಸರನ್ನು ಸುದೀಪ್ ಕೇಳಿದರು. ಬ್ರಹ್ಮಾಂಡ ಶರ್ಮಾ ಅವರು ತಮ್ಮ ತಂದೆ ತಾಯಿ ಹೆಸರನ್ನು ನಾರಾಯಣ ಶರ್ಮಾ, ವಿಜಯಲಕ್ಷ್ಮಿ ಎಂದು ಹೇಳಿದರು.

  ಸ್ಪರ್ಧಿಗಳೊಂದಿಗೆ ಮಾತನಾಡುವ ಅವಕಾಶ

  ಸ್ಪರ್ಧಿಗಳೊಂದಿಗೆ ಮಾತನಾಡುವ ಅವಕಾಶ

  ಈ ಬಾರಿಯ ಎಪಿಸೋಡಿನಲ್ಲಿ ವಾಹಿನಿಯ ವೀಕ್ಷಕರಿಗೆ ಒಂದು ಅವಕಾಶವನ್ನು ಕಲ್ಪಿಸಲಾಗಿದೆ. ಅದೇನೆಂದರೆ 'ಕಾಲರ್ ಆಫ್ ದ ವೀಕ್'. ಆಯ್ಕೆಯಾದ ಒಬ್ಬ ವೀಕ್ಷಕರು ಸ್ಪರ್ಧಿಗಳೊಂದಿಗೆ ಫೋನ್ ನಲ್ಲಿ ಮಾತನಾಡಬಹುದು. ಬ್ರಹ್ಮಾಂಡ ಗುರುಗಳೊಂದಿಗೆ ಬೆಂಗಳೂರಿನ ಮಹಿಳೆಯೊಬ್ಬರು ಮಾತನಾಡಿದರು. ಅವರ ಹೆಸರು ನಂದಿನಿ ವಿಜಯ್ ಕುಮಾರ್.

  ಶರ್ಮಾಗೆ ಪ್ಯಾಂಟು ಶರ್ಟು ಧರಿಸಲು ಸಲಹೆ

  ಶರ್ಮಾಗೆ ಪ್ಯಾಂಟು ಶರ್ಟು ಧರಿಸಲು ಸಲಹೆ

  ತಮ್ಮ ಬಗ್ಗೆ ನಾವು ಏನೇನೋ ಊಹಿಸಿಕೊಂಡಿದ್ದೆವು. ಬಿಗ್ ಬಾಸ್ ಮನೆಯಲ್ಲಿ ತಮ್ಮನ್ನು ನೋಡಿ ನಮ್ಮ ಮನೋಭಾವ ಬದಲಾಯಿತು. ತಾವೇಕೆ ಇದೇ ರೀತಿ ಜಾಲಿಯಾಗಿ ಕಾಲೇಜು ಯುವಕನ ತರಹ ಶರ್ಟು ಪ್ಯಾಂಟು ಹಾಕಿಕೊಂಡು ಇರಬಾರದು ಎಂದರು. ಮಾರ್ಡನ್ ಗುರೂಜಿ ಎಂದು ಸಂಭೋದಿಸಿದರು.

  ಕಾವಿ ಬಿಟ್ಟು ತಾವೇನು ಧರಿಸಲ್ಲ ಎಂದ ಶರ್ಮಾ

  ಕಾವಿ ಬಿಟ್ಟು ತಾವೇನು ಧರಿಸಲ್ಲ ಎಂದ ಶರ್ಮಾ

  ಅದಕ್ಕೆ ಅವರು ಇಲ್ಲಾ ತಾಯಿ, ತಾವು ಆ ಎಲ್ಲಾ ಹಂತಗಳನ್ನು ದಾಟಿ ಬಂದಿದ್ದೇವೆ. ಕಾವಿ ವಸ್ತ್ರ ಬಿಟ್ಟು ಬೇರೇನು ತಾವು ಧರಿಸುವುದಿಲ್ಲ ಎಂದರು. ಸುದೀಪ್ ಮಾತನಾಡುತ್ತಾ, ಅಲ್ಲಾ ಗುರುಗಳೇ ನೀವು ಒಂದು ವೇಳೆ ಪ್ಯಾಂಟ್ ಧರಿಸಿದರೆ ನಿಮ್ಮ ಸೈಜ್ ಎಲ್ಲಿ ಸಿಗುತ್ತದೆ ಎಂದು ಯೋಚಿಸುತ್ತಿದ್ದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

  ಬಿಎಸ್ಆರ್ ಕಾಂಗ್ರೆಸ್ ಟಿಕೆಟ್ ಮಿಸ್ ಆಗಿದ್ದಕ್ಕೆ?

  ಬಿಎಸ್ಆರ್ ಕಾಂಗ್ರೆಸ್ ಟಿಕೆಟ್ ಮಿಸ್ ಆಗಿದ್ದಕ್ಕೆ?

  ಒಟ್ಟಾರೆಯಾಗಿ ಬಿಗ್ ಬಾಸ್ ಮನೆಯಲ್ಲಿ ಋಷಿಕುಮಾರ ನಿರ್ಗಮಿಸಿದ್ದಾರೆ. ನರ್ಸ್ ಜಯಲಕ್ಷ್ಮಿ ಆಗಮನವಾಗಿದೆ. ಬ್ರಹ್ಮಾಂಡ ಗುರುಗಳಿಗೆ ಒಳ್ಳೆಯ ಸ್ನೇಹಿತೆ ಸಿಕ್ಕಿದ್ದಾರೆ. ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಅವರಿಗೆ ಟಿಕೆಟ್ ಸಿಗದಿದ್ದಕ್ಕೋ ಏನೋ ಅವರು ಮತ್ತೆ ಬಿಗ್ ಬಾಸ್ ಮನೆಗೆ ಹೊಕ್ಕಿದ್ದಾರೆ.

  English summary
  Etv Kannada's big reality show 'Bigg Boss' week end highlights. Rishikumar Swamiji eliminates from the house and Nurse Jayalakshmi re enters the house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X