For Quick Alerts
  ALLOW NOTIFICATIONS  
  For Daily Alerts

  'ಒಳ್ಳೆ ಹುಡುಗ' ಪ್ರಥಮ್ ಅಸಲಿ ಹೆಸರೇನು ಗೊತ್ತಾ.?

  By Harshitha
  |
  ಪ್ರಥಮ್ ಅವರ ನಿಜವಾದ ಹೆಸರು ಏನು ಗೊತ್ತಾ | Filmibeat Kannada

  ಅದಾಗಲೇ ಒಂದು ಸಿನಿಮಾ ನಿರ್ದೇಶನ ಮಾಡಿದ್ದರೂ, 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೇಲೆಯೇ 'ಒಳ್ಳೆ ಹುಡುಗ' ಪ್ರಥಮ್ ಯಾರು ಅನ್ನೋದು ಇಡೀ ಕರ್ನಾಟಕಕ್ಕೆ ಗೊತ್ತಾಗಿದ್ದು.

  'ಬಿಗ್ ಬಾಸ್' ಗೆದ್ದು ಇದೀಗ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚುತ್ತಿರುವ 'ದೇವ್ರಂಥ ಮನುಷ್ಯ' ಪ್ರಥಮ್ ಅಸಲಿ ಹೆಸರೇನು ಅಂತ ನಿಮ್ಗೆ ಗೊತ್ತಾ.?

  'ಒಳ್ಳೆ ಹುಡುಗ' ಅಂತ ಸ್ವಯಂ ಘೋಷಣೆ ಮಾಡಿಕೊಳ್ಳುವ ಪ್ರಥಮ್ ರವರ ನಿಜವಾದ ಹೆಸರು 'ಪುನೀತ್'.! ''ಇದು ಡವ್ವು ಬಿಡಿ'' ಅಂತ ನೀವು ಮೂಗು ಮುರಿಯಬಹುದು. ಆದ್ರೆ, ಇದೇ ಸತ್ಯ ಕಣ್ರೀ. ಪ್ರಥಮ್ ನಿಜ ನಾಮಧ್ಯೇಯ 'ಪುನೀತ್'.!

  ಹಾಗಂತ ಸ್ವತಃ ಪ್ರಥಮ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಂದೆ ಹೇಳಿಕೊಂಡಿದ್ದಾರೆ. ಸಾಕ್ಷಿಗೆ ಅಂತ ಅಪ್ಪುಗೆ ಪ್ರಥಮ್ ತಮ್ಮ ಆಧಾರ್ ಕಾರ್ಡ್ ಕೂಡ ತೋರಿಸಿದ್ದಾರೆ. ಪ್ರಥಮ್ ಆಧಾರ್ ಕಾರ್ಡ್ ನಲ್ಲಿ 'ಪುನೀತ್' ಅಂತ ಹೆಸರು ಇರುವುದನ್ನು ನೋಡಿ ಸಾಕ್ಷಾತ್ ಪುನೀತ್ ರಾಜ್ ಕುಮಾರ್ ನಿಬ್ಬೆರಗಾಗಿದ್ದಾರೆ. ಅಷ್ಟಕ್ಕೂ, ಇಷ್ಟೆಲ್ಲ ನಡೆದಿದ್ದು 'ಫ್ಯಾಮಿಲಿ ಪವರ್' ಕಾರ್ಯಕ್ರಮದಲ್ಲಿ.

  ಯಾರೀ 'ತಲೆಕೆಟ್ಟ ತಂಗಳಿಟ್ಟು' ಪ್ರಥಮ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿರುವ 'ಫ್ಯಾಮಿಲಿ ಪವರ್' ಕಾರ್ಯಕ್ರಮದಲ್ಲಿ ಪ್ರಥಮ್ ಮತ್ತು ಕುಟುಂಬ ಭಾಗವಹಿಸಿದ್ದರು. ಇದೇ ಶೋನಲ್ಲಿ ತಮ್ಮ ನಿಜ ನಾಮ 'ಪುನೀತ್' ಎಂಬ ಸಂಗತಿಯನ್ನ ಪ್ರಥಮ್ ಬಹಿರಂಗ ಪಡಿಸಿದರು.

  ''ದೇವ್ರಾಣೆಗ್ಲೂ, ನನ್ನ ನಿಜವಾದ ಹೆಸರು ಪುನೀತ್. ನಮ್ಮ ಅಮ್ಮ ನಿಮ್ಮ ದೊಡ್ಡ ಫ್ಯಾನ್. ಇಂಡಸ್ಟ್ರಿಗೆ ಒಬ್ಬರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಅದಕ್ಕೆ ರೀಪ್ಲೇಸ್ ಮೆಂಟ್, ಸೆಕೆಂಡ್ ಕಾಪಿ ಇರಬಾರದು ಅಂತ ನನ್ನ ಹೆಸರು ಬದಲಾಯಿಸಿಕೊಂಡೆ'' ಅಂತ ಪುನೀತ್ ರಾಜ್ ಕುಮಾರ್ ಎದುರು ಪ್ರಥಮ್ ನುಡಿದರು.

  English summary
  Olle Huduga Pratham reveals his original name in front of Puneeth Rajkumar in 'Family Power' show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X