For Quick Alerts
  ALLOW NOTIFICATIONS  
  For Daily Alerts

  ಪ್ರತಿಕ್ರಿಯೆ : ಚಂದ್ರಿಕಾ ರೀ ಎಂಟ್ರಿ, ಬೇಕಿರಲಿಲ್ಲ

  By Mahesh
  |

  ನಟ ಸುದೀಪ್ ನಡೆಸಿಕೊಡುತ್ತಿರುವ ಈ ಟಿವಿ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ತನ್ನ "ಠೀವಿ" ಕಳೆದುಕೊಳ್ಳುತ್ತಿದೆ. ಅನಗತ್ಯ ಟ್ವಿಸ್ಟ್ ನೀಡುವ ಭರದಲ್ಲಿ ತನ್ನ ನೆಚ್ಚಿನ ಅಭಿಮಾನಿಗಳನ್ನು ಕಳೆದುಕೊಳ್ಳುತ್ತಿದೆಯೇ? ಒನ್ ಇಂಡಿಯಾ ಕನ್ನಡ ಓದುಗರ ಪ್ರತಿಕ್ರಿಯೆ ನೋಡಿದರೆ ಈ ಪ್ರಶ್ನೆಗೆ ಉತ್ತರ ಹೌದು ಎನ್ನಬಹುದು.

  ಗ್ರ್ಯಾಂಡ್ ಫಿನಾಲೆ ತನಕ ಸಾಕಷ್ಟು ಕುತೂಹಲವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಗ್ ಬಾಸ್ ತಂಡ ಏನೇನೋ ಮಾಡಲು ಹೋಗಿ ಪ್ರೇಕ್ಷಕರ ಮನಸ್ಸು ಘಾಸಿಗೊಳಿಸಿದ್ದಾರೆ ಎನಿಸುತ್ತಿದೆ.ಇನ್ನುಳಿದ ವಾರಗಳಲ್ಲಿ ಸೋಮವಾರದಿಂದ ಗುರುವಾರದವರೆಗೆ ವಿಭಿನ್ನ ಟಾಸ್ಕ್ ಗಳನ್ನು ಸ್ಪರ್ಧಿಗಳು ಎದುರಿಸಲಿದ್ದಾರೆ. ಬಿಗ್ ಬಾಸ್ ನ ಅಸಲಿ ಮಜಾ ನಿಮಗೆ ಈಗ ಸಿಗಲಿದೆ ಎಂದು ಕಿಚ್ಚ ಸುದೀಪ್ ಭರವಸೆ ನೀಡಿದ್ದಾರೆ.

  ಆದರೆ, ಶನಿವಾರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಡೆದಿದ್ದು ಸರಿಯೇ? ತಪ್ಪೇ? ಎಂಬ ಚರ್ಚೆಯನ್ನು ಮುಂದುವರೆಸುತ್ತಾ, ಚಂದ್ರಿಕಾ ಮತ್ತೊಮ್ಮೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿದ್ದಕ್ಕೆ ಹಲವಾರು ಓದುಗರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಆದರೆ, ಇನ್ನುಳಿದಿರುವುದು ಮೂರು ವಾರವಾದರೂ ಚಂದ್ರಿಕಾ ಪ್ರೇಕ್ಷಕರ ಮನ ಗೆಲ್ಲಲು ಇರುವುದು ಮುರ್ನಾಲ್ಕು ದಿನಗಳು ಮಾತ್ರ ಎಂಬುದನ್ನು ಪ್ರೇಕ್ಷಕರು ಮನಸಲ್ಲಿ ಇಟ್ಟುಕೊಂಡರೆ ಮನೆಯಲ್ಲಿ ಯಾರನ್ನು ಉಳಿಸಬೇಕು ಯಾರನ್ನು ಹೊರಗೆ ಕಳಿಸಬೇಕು ಎಂಬುದನ್ನು ಎಸ್ ಎಂಎಸ್ ಮೂಲಕ ನಿರ್ಧರಿಸಬಹುದು. ಸದ್ಯಕ್ಕೆ ಚಂದ್ರಿಕಾ ಪರ-ವಿರೋಧ ಪ್ರತಿಕಿಯೆಯ ಸುರಿಮಳೆಯಲ್ಲಿ ಆಯ್ದ ಕೆಲವು ಅಭಿಪ್ರಾಯಗಳು ನಿಮ್ಮ ಮುಂದಿಡುತ್ತಿದ್ದೇವೆ. ನಮ್ಮ ಲೈನ್ ಎಂದಿಗೂ ನಿಮ್ಮ ಅಭಿಪ್ರಾಯಕ್ಕೆ ತೆರೆದಿರುತ್ತದೆ.

  ಬಿಗ್ ಬಾಸ್ ಜನನ-ಮರಣ

  ಬಿಗ್ ಬಾಸ್ ಜನನ-ಮರಣ

  * siyak: ಮಹಾ ಮೋಸ ಬಿಗ್ ಬಾಸ್ ಯಾರು ನೋಡಬೇಡಿ ದಯವಿಟ್ಟು ಯೆಲ್ಲದಲ್ಲೂ ಫಿಕ್ಸಿಂಗ್ ಮುಂಡಮುಚಿತು ಛೀ ಯಾವ್ದೇ ಟ್ವಿಸ್ಟ್ ಇದ್ದರೆ 1 ವಾರ ಮೊದಲೇ ಜನರಿಗೆ ಹೇಳಬೇಕು ಬಿಗ್ ಬಾಸ್ ಜನನ 2013 -ಮರಣ 2013

  * devaraj.g: ನೋ ಕಾಮೆಂಟ್ ಫಾರ್ ಬಿಗ್ ಬಾಸ್ ಅಲ್ಲ ಡಬ್ಬಾ ಬಾಸ್

  * soumya: ಇದು ಅನ್ಯಾಯ ಬಿಗ್ ಬಾಸ್....ಚಂದ್ರಿಕನನ್ನು ಯಾಕೆ ಪುನಃ ಬಿಬಿ ಗೆ ಕಳುಹಿಸಿದ್ರಿ?

  * ಶ್ರೀ: Totally disappointed. Chandrika fights unnecessarily. BiggBoss wants to keep her only for TRP. Not at all acceptable

  ಚಂದ್ರಿಕಾ ಪರವೂ ಪ್ರತಿಕ್ರಿಯೆ

  ಚಂದ್ರಿಕಾ ಪರವೂ ಪ್ರತಿಕ್ರಿಯೆ

  Hundi : Why you blame Chandrika for everything. She is upright. The other lady is playing drama there including Vijay. Chandrika is a fighter. Let her fight her entry into final

  Naren: Big Boss is a game but In my view Chandrika never played a game like others Some time she emotionally reacted more. that's only I felt Bad on her. she fight against every one even on Big boss.So Big boss I accept your decision is correct.

  ಚಂದ್ರಿಕಾ ಪರ ಪ್ರತಿಕ್ರಿಯೆ

  ಚಂದ್ರಿಕಾ ಪರ ಪ್ರತಿಕ್ರಿಯೆ

  kiru: ಇದು ಕರೆಕ್ಟ್ ನಿರ್ಣಯ.. ಕನ್ನಡ ಗೊತ್ತಿಲ್ಲದ ಕನ್ನಡಕ್ಕೆ ಅವಮಾನ ಮಾಡುವ ನಿಖಿತಾ ಮನೆಯಿಂದ ಮೊದಲು ಔಟ್ ಆಗಬೇಕು.. ಆಮೇಲೆ ಚಂದ್ರಿಕಾ ಔಟ್ ಆಗೋದು ಸರಿ ನಿರ್ಣಯ..

  ರಿವರ್ಸ್ ವೋಟೌಟ್ ನಲ್ಲಿ ನಿಖಿತಾ ಸೇವ್ ಆಗಿದ್ದಾಗ ಇಲ್ಲದ ಫಿಕ್ಸಿಂಗ್ ಈಗ ಎಲ್ಲಿಂದ ಬಂತು? ಬಿಗ್ ಬಾಸ್ ಟಿಆರ್ ಪಿ ಹೆಚ್ಚಾಗಲು ನಿಖಿತಾ- ಚಂದ್ರಿಕಾ ಜಗಳವೇ ಕಾರಣ. ಇದು ಪ್ರೇಕ್ಷಕರಿಗೂ ಇಷ್ಟ.

  ಸುದೀಪ್, ಬಿಗ್ ಬಾಸ್ ಗೆ ಬಹುಪರಾಕ್

  ಸುದೀಪ್, ಬಿಗ್ ಬಾಸ್ ಗೆ ಬಹುಪರಾಕ್

  ವಿಜಯ್ ಕುಮಾರ್: ತನ್ನ ಗೆಳೆಯ ಅರುಣ್ ಉಳಿಸುವಲ್ಲಿ ಸುದೀಪ್ ಕೈವಾಡ ಏನು ಇಲ್ಲ. ಬಿಗ್ ಬಾಸ್ ನಿರೂಪಣೆ ಬಿಟ್ಟು ಬೇರೆ ವ್ಯವಹಾರದಲ್ಲಿ ಸುದೀಪ್ ತೊಡಗಿಲ್ಲ. ಇದನ್ನು ಅವರೇ ಸ್ಪಷ್ಟಪಡಿಸಿದ್ದಾರೆ.

  ಸಾಥಿ: Hats up Sudeep@BB.This week twist is really interesting. Chandrika really deserve for final.She is real player of BB.She is not fake like Nikitha.

  ಹರೀಶ್: jus loved the twist.. chandrika didn't deserve to get eliminated.. now she is gonna rule nikitha and become the queen of bigg boss.

  ಬ್ರಹ್ಮಾಂಡ ಗಟ್ಟಿ, ರಾಘು ಫೇಕ್

  ಬ್ರಹ್ಮಾಂಡ ಗಟ್ಟಿ, ರಾಘು ಫೇಕ್

  ಸ್ಮಿತ್ : ಗುರುಗಳೇ ಒಂದಿಷ್ಟು ದಿನ ನಿಕಿತಾ ಕಡೆ ಇದ್ರಿ, ಮತ್ತೆ ಒಂದಿಷ್ಟು ದಿನ ಚಂದ್ರಿಕಾ ಕಡೆ ಹೋದ್ರಿ, ಈಗ ಮತ್ತೆ ಚಂದ್ರಿಕಾ ವಿರುದ್ಧ ಮಾತಾಡ್ತಾ ಇದ್ದೀರಾ.. ನಿಮಗೆ Bipolar disorder ಏನಾದರೂ ಇದ್ಯಾ?

  ಕೆಂಪೇಗೌಡ: ಆಚೆ ಕಳಿಸಿ ಆಚೆ ಕಳಿಸಿ ಅಂಥಾ ಬ್ರಹ್ಮಾಂಡ ಅಲ್ಲೇ ಜಾಂಡ ಹೂಡಿದ್ದಾರೆ.. ಮೊದಲು ಈ ಎಲಿಫೆಂಡ್ ನಾ ಆಚೆ ಕಳಿಸಬೇಕು.. ತನ್ನತನ ಬಿಟ್ಟು ಸ್ಪರ್ಧೆಯಲ್ಲಿ ಉಳಿದಿರುವ ಏಕೈಕ ಅಭ್ಯರ್ಥಿ

  ರಾಘವ್: ವಿಜಯ ರಾಘವೇಂದ್ರ ಫೈನಲ್ ಹತ್ತಿರ ಆಗುತ್ತಿದ್ದಂತೆ ಅನಗತ್ಯವಾಗಿ ನಾಟಕ ಆರಂಭಿಸಿದ್ದಾರೆ. ಮನೆಯಲ್ಲಿ ಮೊದಲು ಇದ್ದಂತೆ ಇಲ್ಲ ಎಲ್ಲಾ ಫೇಕ್ ನಟನೆ.

  ಶ್ರೀಕಲಾ: ಅರುಣ್ ಸಾಗರ್ ಎಷ್ಟೇ ನಾಟಕ ಮಾಡಿದರೂ ಫೈನಲ್ ಗೆಲ್ಲಲು ಆಗುವುದಿಲ್ಲ. ಅದು ಚಂದ್ರಿಕಾ ಅವರ ಪಾಲಿಗೆ ಬರೆದಿಟ್ಟಾಗಿದೆ. ಗೋಳು ಎಲ್ಲಿ ಹೆಚ್ಚಾಗಿರುತ್ತೋ ಅಲ್ಲಿಗೆ ಸಾಂತ್ವನ(ಸಂತಾನ ಅಲ್ಲ ಚಂದ್ರಿಕಾ) ಹೆಚ್ಚಾಗಿರುತ್ತದೆ.

  English summary
  Oneindia-Kannada readers responded harshly to re entry of Chandrika in to Bigg Boss house.Chandrika,Chandrika was eliminated and Arun Sagar reached the finals. But, Later in the day Chandrika made re entry into Bigg Boss House due to reverse nomination

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X