For Quick Alerts
  ALLOW NOTIFICATIONS  
  For Daily Alerts

  'ಪಾರು' ಸೀರಿಯಲ್ ನಟಿ ಸುಶ್ಮಿತಾ ರಾಮಕಲಾ ಸಿಕ್ಕಾಪಟ್ಟೆ ಸ್ಟೈಲಿಶ್!

  By ಪ್ರಿಯಾ ದೊರೆ
  |

  'ಪಾರು' ಧಾರಾವಾಹಿ ಶುರುವಾದಾಗಿನಿಂದಲೂ ಪ್ರೇಕ್ಷಕರ ಮೆಚ್ಚಿನ ಸೀರಿಯಲ್ ಆಗಿದೆ. ಇದರಲ್ಲಿನ 'ಪಾರು' ಪಾತ್ರವನ್ನು ಜನ ಮೆಚ್ಚಿಕೊಂಡಂತೆಯೇ ಇತರೆ ಪಾತ್ರಗಳನ್ನು ಇಷ್ಟಪಡುತ್ತಾರೆ. ಈಗಲೂ ಅದ್ಭುತವಾಗಿ ಮೂಡಿ ಬರುತ್ತಿರುವ 'ಪಾರು' ಧಾರಾವಾಹಿಗೆ ದೊಡ್ಡ ಪ್ರೇಕ್ಷಕರ ಬಳಗವಿದೆ.

  'ಪಾರು' ಧಾರಾವಾಹಿ ಕನ್ನಡದ ಜನಪ್ರಿಯ ಧಾರಾವಾಹಿ. ಈ ಧಾರಾವಾಹಿಯಲ್ಲಿ ವಿನಯಾ ಪ್ರಸಾದ್, ಎಸ್ ನಾರಾಯಣ್ ಕೂಡ ನಟಿಸಿದ್ದಾರೆ. 'ಪಾರು' ಧಾರಾವಾಹಿಯಲ್ಲಿ ಬರುವ ಎಲ್ಲಾ ಪಾತ್ರಗಳು ತುಂಬಾ ಪವರ್‌ಫುಲ್ ಆಗಿವೆ. ಹೀರೊ-ಹೀರೊಯಿನ್‌ನಂತೆ ಉಳಿದ ಪಾತ್ರಗಳಿಗೂ ಮಹತ್ವವಿದ್ದು, ಪ್ರೇಕ್ಷಕರಿಗೆ ಬಹಳ ಇಷ್ಟವಾದ ಸೀರಿಯಲ್ ಇದಾಗಿದೆ.

  ಅಖಿಲಾಂಡೇಶ್ವರಿ ಮನೆಯ ದೊಡ್ಡ ಸೊಸೆಯಾಗಿರುವ ಪಾರು ಮನೆ ಮನೆಯ ಮುದ್ದಿನ ಮಗಳಾಗಿದ್ದಾಳೆ. ಇತ್ತೀಚೆಗಷ್ಟೇ ಈ ಧಾರಾವಾಹಿ 900 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದೆ. ಸಾವಿರ ಸಂಚಿಕೆಯನ್ನು ಪೂರೈಸುವತ್ತ ದಾಪುಗಾಲಿಡುತ್ತಿದೆ. ಇನ್ನು ಇದರಲ್ಲಿ ನಟಿಸಿದ ಯಾಮಿನಿ ಬಗ್ಗೆ ನಿಮಗೆಷ್ಟು ಗೊತ್ತು?

  ಪಾರು ಸೀರಿಯಲ್‌ನಲ್ಲಿ ಸುಶ್ಮಿತಾ ವಿಲನ್!

  ಪಾರು ಸೀರಿಯಲ್‌ನಲ್ಲಿ ಸುಶ್ಮಿತಾ ವಿಲನ್!

  'ಪಾರು' ಧಾರಾವಾಹಿಯಲ್ಲಿ ಮೊದಲು ವಿಲನ್ ಎಂದರೆ ಅದು ದಾಮಿನಿ. ಆದರೆ, ದಾಮಿನಿ ಸಪೋಟ್‌ಗಾಗಿ ಬೇರೆ ಬೇರೆ ವಿಲನ್‌ಗಳು ಕೂಡ ಬಂದಿದ್ದಾರೆ. ಅದರಲ್ಲಿ ಒಂದು ಯಾಮಿನಿ ಪಾತ್ರ. ಯಾಮಿನಿ ಪಾತ್ರದಲ್ಲಿ ಕಾಣಿಸಿಕೊಂಡ ಸುಶ್ಮಿತಾ ರಾಮಕಲಾ ಉದಯೋನ್ಮುಖ ನಟಿ. ಪಾರು ಧಾರಾವಾಹಿಯಲ್ಲಿ ಪಾಸಿಟಿವ್ ಕ್ಯಾರೆಕ್ಟರ್ ಮೂಲಕ ಬಂದು, ಕೊನೆಗೆ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡರು.

  ಬೆಂಗಳೂರಿನ ಬೆಡಗಿ ಸುಶ್ಮಿತಾ!

  ಬೆಂಗಳೂರಿನ ಬೆಡಗಿ ಸುಶ್ಮಿತಾ!

  ಸುಶ್ಮಿತಾ ರಾಮಕಲಾ ಅವರು ಮೂಲತಃ ಬೆಂಗಳೂರಿನವರೇ. ಚಿಕ್ಕವರಿದ್ದಾಗಿನಿಂದಲೂ ಸುಶ್ಮಿತಾ ಅವರಿಗೆ ನಟಿಯಾಗಬೇಕು ಎಂಬ ಆಸೆ ಇತ್ತಂತೆ. ಆ ಆಸೆಯನ್ನು ನೆರವೇರಿಸಿಕೊಂಡಿದ್ದಾರೆ. ಕನ್ನಡದಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಸುಶ್ಮಿತಾ ಅವರಿಗೆ ಬ್ರೇಕ್ ಕೊಟ್ಟಿದ್ದು 'ಪಾರು' ಧಾರಾವಾಹಿ. 'ಪಾರು' ಧಾರಾವಾಹಿಯಲ್ಲಿ ಸುಶ್ಮಿತಾ ಪಾತ್ರ ಹಾಗೂ ನಟನೆ ಎರಡನ್ನೂ ಪ್ರೇಕ್ಷಕರ ಬಳಗ ಮೆಚ್ಚಿಕೊಂಡಿದೆ.

  ಹಲವು ಧಾರಾವಾಹಿಗಳಲ್ಲಿ ಸುಶ್ಮಿತಾ ನಟನೆ!

  ಹಲವು ಧಾರಾವಾಹಿಗಳಲ್ಲಿ ಸುಶ್ಮಿತಾ ನಟನೆ!

  ಸುಶ್ಮಿತಾ ರಾಮಕಲಾ ಈ ಹಿಂದೆ ಹಲವು ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದು, 'ನಾನು ನನ್ನ ಕನಸು', 'ಅರಮನೆ ಗಿಣಿ' ಧಾರಾವಾಹಿಗಳಲ್ಲಿ ನಟಿಸಿದ್ದರು. ಉದಯ ಟಿವಿಯಲ್ಲಿ ಮೂಡಿ ಬಂದ 'ನಾನು ನನ್ನ ಕನಸು' ಸೀರಿಯಲ್‌ನಲ್ಲಿ ಸುಶ್ಮಿತಾ ಅದ್ಭುತವಾಗಿ ನಟಿಸಿದ್ದರು. ಇನ್ನು ಕೇವಲ ಕನ್ನಡ ಮಾತ್ರವಲ್ಲದೇ ಸುಶ್ಮಿತಾ ತೆಲುಗು ಕಿರುತೆರೆಯಲ್ಲೂ ಮಿಂಚಿದ್ದಾರೆ. ಅಭಿಲಾಷಾ ಎಂಬ ಧಾರಾವಾಹಿಯಲ್ಲಿ ನಟಿಸಿದ್ದ ಸುಶ್ಮಿತಾಗೆ ಈಗ ಮತ್ತೆ ತೆಲುಗಿನಲ್ಲಿ ನಟಿಸುವ ಅವಕಾಶ ಬಂದಿದೆ.

  ತೆಲುಗಿನಲ್ಲಿ ಸುಶ್ಮಿತಾ ನಟನೆ!

  ತೆಲುಗಿನಲ್ಲಿ ಸುಶ್ಮಿತಾ ನಟನೆ!

  ಸುಶ್ಮಿತಾ ರಾಮಕಲಾ ಇದೀಗ ಎರಡು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಒಂದು ಕನ್ನಡವಾದರೆ, ಮತ್ತೊಂದು ತೆಲುಗು. ತೆಲುಗಿನ 'ಗುಂಡಮ್ಮ ಕಥಾ' ಎಂಬ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಧಾರಾವಾಹಿಯ ಶೂಟಿಂಗ್ ಈಗಷ್ಟೇ ಆರಂಭವಾಗಿದ್ದು, ಯಾವಾಗ ಪ್ರಸಾರವಾಗುತ್ತದೋ ಇನ್ನೂ ಗೊತ್ತಿಲ್ಲ. ಆದರೆ ಕನ್ನಡದ ಉದಯ ಟಿವಿಯಲ್ಲಿ ಮೂಡಿ ಬರುತ್ತಿರುವ ಅಣ್ಣ-ತಂಗಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತೆಲುಗು ಹಾಗೂ ಕನ್ನಡ ಎರಡೂ ಕ್ಷೇತ್ರವನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ.

  ಸಿನಿಮಾಗಳಲ್ಲಿ ಸುಶ್ಮಿತಾ ನಟನೆ!

  ಸಿನಿಮಾಗಳಲ್ಲಿ ಸುಶ್ಮಿತಾ ನಟನೆ!

  ಸುಶ್ಮಿತಾ ರಾಮಕಲಾ ಈಗಾಗಲೇ ಸಿನಿಮಾದಲ್ಲೂ ನಟಿಸಿದ್ದಾರೆ. 'ಬೈಟು ಲವ್' ಎಂಬ ಚಿತ್ರದಲ್ಲಿ ಸುಶ್ಮಿತಾ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಒಳ್ಳೆಯ ಪಾತ್ರವಿರುವ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುವ ಆಸೆಯನ್ನು ಸಹ ಹೊರ ಹಾಕಿದ್ದಾರೆ.

  English summary
  Paaru Serial Fame Actress Sushmitha Ramkala Biography And Life Style,know more,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X