»   » 'ಬಿಗ್ ಬಾಸ್' ಫಿನಾಲೆ ದಿನ ಎದುರಾದ ಸವಾಲು ಏನು ಗೊತ್ತಾ?

'ಬಿಗ್ ಬಾಸ್' ಫಿನಾಲೆ ದಿನ ಎದುರಾದ ಸವಾಲು ಏನು ಗೊತ್ತಾ?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ 4' ಗ್ರ್ಯಾಂಡ್ ಫಿನಾಲೆ ದಿನ 'ಬಿಗ್ ಬಾಸ್' ಅಯೋಜಕರಿಗೆ ಬಹುದೊಡ್ಡ ಸವಾಲು ಎದುರಾಗಿತ್ತು. ಅದೇನಪ್ಪಾ ಅಂದ್ರೆ, ಫಿನಾಲೆ ಟಿವಿಯಲ್ಲಿ ಪ್ರಸಾರವಾಗುವುದಕ್ಕೆ ಮುಂಚೆನೇ ವಿನ್ನರ್ ಯಾರು ಎಂಬುದು ಬಹಿರಂಗವಾಗುತ್ತೆ ಎಂಬ ಆತಂಕ.

ಆದ್ರೆ, 'ಬಿಗ್ ಬಾಸ್ ಕನ್ನಡ 4' ಫಿನಾಲೆಯಲ್ಲಿ ಇದಾಗಬಾರದು ಅಂತ ಸಿಕ್ಕಾಪಟ್ಟೆ ಪ್ಲಾನಿಂಗ್ ಮಾಡಿದ್ರಂತೆ 'ಬಿಗ್ ಬಾಸ್' ನಿರ್ದೇಶಕರು.[ಫೇಸ್ ಬುಕ್ನಲ್ಲಿ ಸವಾಲ್ ಹಾಕೋರಿಗೆ 'ಬಿಗ್ ಬಾಸ್' ಡೈರೆಕ್ಟರ್ ಕೊಟ್ಟ ಜವಾಬು!]

ಅಷ್ಟಕ್ಕೂ, ಬಿಗ್ ಬಾಸ್ ಫಿನಾಲೆಯಲ್ಲಿ ಎದುರಾದ ಸವಾಲುಗಳೇನು? ಅದಕ್ಕಾಗಿ ಅಯೋಜಕರು ಕೈಗೊಂಡ ಕ್ರಮಗಳೇನು? ಎಂಬುದನ್ನ ಬಿಗ್ ಬಾಸ್ ಡೈರೆಕ್ಟರ್ ಪರಮೇಶ್ವರ್ ಗುಂಡ್ಕಲ್ ಅವರು ಬಹಿರಂಗಪಡಿಸಿದ್ದಾರೆ. ಮುಂದೆ ಓದಿ....

ಫಿನಾಲೆ ದಿನವೇ ಚಿತ್ರೀಕರಣ ಮಾಡಲು ನಿರ್ಧಾರ!

''ಪ್ರತಿ ಆವೃತ್ತಿಯಲ್ಲೂ 'ಬಿಗ್ ಬಾಸ್' ಫಿನಾಲೆಗೆ ಒಂದು ದಿನ ಮುಂಚೆಯೇ, ಅಂದ್ರೆ ಶನಿವಾರ ರೆಕಾರ್ಡಿಂಗ್ ಮಾಡಲಾಗುತ್ತಿತ್ತು. ಆದ್ರೆ, ನಾಲ್ಕನೇ ಆವೃತ್ತಿಯಲ್ಲಿ ಫಿನಾಲೆ ದಿನವೇ ಅಂದ್ರೆ, ಭಾನುವಾರವೇ ರೆಕಾರ್ಡಿಂಗ್ ಮಾಡಲು ನಿರ್ಧಾರ ಮಾಡಲಾಗಿತ್ತು''.['ಬಿಗ್ ಬಾಸ್'ಗೆ ಪ್ರಥಮ್ ಆಯ್ಕೆ ಆಗಿದ್ದೇಗೆ? ಪರಮೇಶ್ವರ ಗುಂಡ್ಕಲ್ ಹೇಳಿದ ಸತ್ಯ ಕಥೆ]

ನೇರ ಪ್ರಸಾರದ ಮಾದರಿಯಲ್ಲಿ ಚಿತ್ರೀಕರಣ!

''ಫಿನಾಲೆ ದಿನ ಕಾರ್ಯಕ್ರಮ ಪ್ರಸಾರಕ್ಕೂ ಒಂದೆರೆಡು ಗಂಟೆಗಳ ಅಂತರದಲ್ಲಿ ರೆಕಾರ್ಡಿಂಗ್ ಮಾಡುತ್ತಿದ್ದರಿಂದ, ಅದು ಒಂದು ರೀತಿ ಲೈವ್ ಮಾದರಿಯಲ್ಲೇ ಚಿತ್ರೀಕರಣವಾಯಿತು. ಅಂದ್ರೆ, ರಾತ್ರಿ 9ಕ್ಕೆ ವಿನ್ನರ್ ಯಾರು ಎಂಬ ಪ್ರಕ್ರಿಯೆ ರೆಕಾರ್ಡ್ ಮಾಡಿ, 10.30ಕ್ಕೆ ಟೆಲಿಕಾಸ್ಟ್ ಮಾಡಲಾಯಿತು''.['ಬಿಗ್ ಬಾಸ್' ತೆರೆ ಹಿಂದಿನ ಕಥೆ ಬಿಚ್ಚಿಟ್ಟ 'ಡೈರೆಕ್ಟರ್'!]

ಕಡಿಮೆ ಜನರಿಗೆ ಮಾತ್ರ ಅವಕಾಶ!

''ಈ ಬಾರಿಯ ಫಿನಾಲೆಗೆ ಹೆಚ್ಚು ಜನರಿಗೆ ಅವಕಾಶ ನೀಡುವುದು, ಅದು ರಿಸ್ಕ್ ಎನಿಸಿತ್ತು. ಯಾಕಂದ್ರೆ, ಕಳೆದ ಬಾರಿ ಅಷ್ಟು ಜನರನ್ನ ನಿಯಂತ್ರಣ ಮಾಡಲು, ಮತ್ತು ಅವರಿಂದ ಫಿನಾಲೆ ವಿನ್ನರ್ ಯಾರು ಎಂಬುದನ್ನ ಗೌಪ್ಯವಾಗಿಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಈ ಭಾರಿ ಕೇವಲ ಸ್ವರ್ಧಿಗಳ ಸಂಬಂಧಿಕರಿಗೆ ಮಾತ್ರ ಅವಕಾಶ ನೀಡಲಾಗಿತ್ತು''.

ಮೊಬೈಲ್ ಅವಕಾಶ ಕೊಟ್ಟಿರಲಿಲ್ಲ!

''ಈ ಆವೃತ್ತಿಯಲ್ಲಿ ಯಾರಿಗೂ ಮೊಬೈಲ್ ಒಳಗೆ ತೆಗೆದುಕೊಂಡು ಹೋಗುವ ಸಾಧ್ಯತೆ ಇರಲಿಲ್ಲ. ಯಾಕಂದ್ರೆ, ಅವರಿಂದ ಮೊಬೈಲ್ ಗಳನ್ನ ನಾವು ತೆಗೆದುಕೊಂಡಿದ್ದೇವು. ಮತ್ತು ವಿನ್ನರ್ ಯಾರು ಎಂದು ರೆಕಾರ್ಡಿಂಗ್ ಮಾಡಿ, ಅದು ಪ್ರಸಾರವಾಗುವರೆಗೂ ಅವರನ್ನೆಲ್ಲ ಅಲ್ಲೆ ಇರಿಸಿಕೊಂಡಿದ್ದೆವು''.

ಟೆಲಿಕಾಸ್ಟ್ ಪ್ರಕ್ರಿಯೆಯಲ್ಲಿ ಕಷ್ಟಕರವಾಗಿತ್ತು!

''ಬಿಡದಿಯಲ್ಲಿ ಎಡಿಟಿಂಗ್ ಆದ ಫೈಲ್ ಮೊದಲು ಮುಂಬೈಗೆ ಹೋಗ್ಬೇಕು. ಅಲ್ಲಿಂದ ಅದು ದೆಹಲಿಯಲ್ಲಿ ಅಪ್ ಲಿಂಕ್ ಆಗೋದು. ಅಲ್ಲಿಂದ ಟೆಲಿಕಾಸ್ಟ್ ಆಗ್ಬೇಕು. ಈ ಹಂತದಲ್ಲಿ ಕೆಲವೊಮ್ಮ ಫೈಲ್ ಕರೆಪ್ಟ್ ಆಗುತ್ತೆ. ಹಾಗಾಗಿ ತಾಂತ್ರಿಕ ತೊಂದರೆಗಳು ಎದುರಾಗುತ್ತೆ. ಆ ಕಾರಣದಿಂದ ಫಿನಾಲೆ ಮಧ್ಯೆ ಹಾಡುಗಳು, ಪ್ರೋಮಗಳು ಪ್ರಸಾರ ಮಾಡಬೇಕಾಯಿತು''.

ಗೌಪ್ಯತೆ ಕಾಪಾಡಿಕೊಳ್ಳಲು ಸಾಧ್ಯವಾಯಿತು!

''ಈ ಎಲ್ಲ ಕಾರಣಗಳಿಂದ ಈ ಬಾರಿಯ ಫೈನಲ್ ವಿನ್ನರ್ ಯಾರು ಎಂಬುದನ್ನ ಕೊನೆಯವರೆಗೂ ಗೌಪ್ಯತೆಯಾಗಿಡಲು ಸಾಧ್ಯವಾಯಿತು. ಯಾಕಂದ್ರೆ ಕಳೆದ ಬಾರಿ ಒಂದು ದಿನ ಮುಂಚೆಯೇ ಸೋಶಿಯಲ್ ಮಿಡಿಯಾದಲ್ಲಿ ಫೋಟೋಗಳು ಎಲ್ಲವೂ ಲೀಕ್ ಆಗಿತ್ತು. ಆದ್ರೆ, ಈ ಸಲ ಈ ಸವಾಲನ್ನ ಎದುರಿಸುವಲ್ಲಿ ಯಶಸ್ವಿಯಾಗಿದ್ದೇವೆ''.

English summary
Bigg Boss Director Parameshwar Gundkal Reveals the Challenges Behind Recording In Grand Finale Episode Of Bigg Boss Kannada 4

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada