'ಬಿಗ್ ಬಾಸ್'ಗೆ ಜನಸಾಮಾನ್ಯರ ಆಯ್ಕೆ ಪ್ರಕ್ರಿಯೆ ಹೇಗಿತ್ತು?
Recommended Video

'ಬಿಗ್ ಬಾಸ್ ಕನ್ನಡ 5'ರಲ್ಲಿ ಕಾಮನ್ ಮ್ಯಾನ್ ಗಳಿಗೆ ಪ್ರವೇಶ ಇದೆ ಎಂದು ಘೋಷಣೆ ಮಾಡಿದಾಗ, ಸಾವಿರಾರು ಜನರು ಅರ್ಜಿ ಸಲ್ಲಿಸಿದ್ದರು. ಆದ್ರೆ, ಅಷ್ಟು ಜನರಲ್ಲಿ ಅತ್ಯುತ್ತಮವೆನಿಸುವ ಕೆಲವೇ ಕೆಲವು ಜನರನ್ನ ಹೇಗೆ ಆಯ್ಕೆ ಮಾಡುತ್ತಾರೆ ಎಂಬ ಕುತೂಹಲ ಕಾಡಿತ್ತು.
ಈ ಕುತೂಹಲಕ್ಕೆ ಬಿಗ್ ಬಾಸ್ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಅವರು ತೆರೆ ಎಳೆದಿದ್ದಾರೆ. ಕಾಮನ್ ಮ್ಯಾನ್ ಗಳ ಆಯ್ಕೆ ಹೇಗೆ ನಡೆಯುತ್ತಿದೆ ಎಂಬ ಮಾಹಿತಿ ಕೊಟ್ಟಿದ್ದಾರೆ.
ಹಾಗಿದ್ರೆ, 'ಬಿಗ್ ಬಾಸ್ ಕನ್ನಡ 5' ಒಟ್ಟು ಎಷ್ಟು ಅರ್ಜಿಗಳು ಬಂದಿದ್ದವು. ಅದರಲ್ಲಿ ಉತ್ತಮ ವ್ಯಕ್ತಿಗಳನ್ನ ಹೇಗೆ ಆಯ್ಕೆ ಮಾಡಿದರು ಎಂದು ಮುಂದೆ ಓದಿ.....

ಒಟ್ಟು 40 ಸಾವಿರ ಅರ್ಜಿಗಳು
''ಬಿಗ್ ಬಾಸ್' ಕಾಮನ್ ಮ್ಯಾನ್ ಗಳ ಸ್ಪರ್ಧೆಗೆ ಒಟ್ಟು 40 ಸಾವಿರ ಜನರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿದ್ದಾರೆ. ವಿಡಿಯೋ ಇಲ್ಲದೆ ಕೂಡ ಸುಮಾರು ಜನ ಕಳುಹಿಸಿದ್ದಾರೆ'' - ಪರಮೇಶ್ವರ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

ನಮ್ಮ ತಂಡ 600 ಕ್ಕೆ ಇಳಿಸಿದೆ
''9 ಜನರ ನಮ್ಮ ತಂಡ, ಕಳೆದ ಎರಡು ತಿಂಗಳಿನಿಂದ 40 ಸಾವಿರ ಅರ್ಜಿಗಳನ್ನ, 600ಕ್ಕೆ ಇಳಿಸಿದೆ. ಆ 600 ವಿಡಿಯೋಗಳಲ್ಲಿ ನಮ್ಮ ಕಾಸ್ಟಿಂಗ್ ತಂಡ 100ಕ್ಕೆ ಇಳಿಸಿದೆ. ಈ ನೂರರಲ್ಲಿ ಇನ್ನು ಯಾರು ಆಯ್ಕೆ ಆಗಿಲ್ಲ'' - ಪರಮೇಶ್ವರ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

ನೇರ ಸಂದರ್ಶನ ಮಾಡಲಾಗುತ್ತಿದೆ
''ಈ 100 ಜನರ ಪಟ್ಟಿಯಲ್ಲಿರುವ ಎಲ್ಲ ವ್ಯಕ್ತಿಗಳನ್ನ ನಾವು ಭೇಟಿಯಾಗುತ್ತಿದ್ದೇವೆ. ನೇರವಾಗಿ ಅವರ ಜೊತೆ ಮಾತನಾಡುವ ಮೂಲಕ ಆಯ್ಕೆ ಮಾಡುತ್ತಿದ್ದೇವೆ. ಪ್ರತಿಯೊಬ್ಬರ ಜೊತೆಯಲ್ಲೂ ಸುಮಾರು ಅರ್ಧಗಂಟೆಯಿಂದ ಮೊಕ್ಕಾಲು ಗಂಟೆ ಮಾತನಾಡಿ ಅವರನ್ನ ಅರ್ಥಮಾಡಿಕೊಳ್ಳುತ್ತಿದ್ದೇವೆ'' - ಪರಮೇಶ್ವರ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

20 ಜನರನ್ನ ಆಯ್ಕೆ ಮಾಡಲಾಗುತ್ತೆ
''ಈ 100 ಜನರಲ್ಲಿ 20 ಜನರನ್ನ ಮುಖ್ಯವಾಗಿ ಸೆಲೆಕ್ಟ್ ಮಾಡಲಾಗುತ್ತೆ. ಈ 20 ಜನರಲ್ಲಿ ನಾವು 5 ರಿಂದ 6 ಜನರನ್ನ ಬಿಗ್ ಬಾಸ್ ಮನೆಗೆ ಕಳುಹಿಸುತ್ತೇವೆ. ಆದ್ರೆ, ಯಾರು ಹೋಗುತ್ತಾರೆ ಎಂಬುದು ಸದ್ಯಕ್ಕೆ ನಮಗೂ ಕೂಡ ಕುತೂಹಲವಾಗಿದೆ'' - ಪರಮೇಶ್ವರ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

ಇನ್ನು ಅಂತಿಮ ಪಟ್ಟಿ ಆಯ್ಕೆ ಆಗಿಲ್ಲ
ಇಷ್ಟಲ್ಲಾ ಹಂತದಲ್ಲಿ ಆಯ್ಕೆ ಮಾಡುತ್ತಿರುವ ಬಿಗ್ ಬಾಸ್ ತಂಡ, ಇನ್ನು ಅಂತಿಮ 16 ಜನರ ಪಟ್ಟಿಯನ್ನ ಸಿದ್ದಮಾಡಿಲ್ಲವೆನ್ನುವುದು ಆಶ್ಚರ್ಯವಾದರೂ, ನಂಬಲೇಬೇಕು. ಅಕ್ಟೋಬರ್ 15 ರಿಂದ ಬಿಗ್ ಬಾಸ್ ಆರಂಭವಾಗುತ್ತಿದೆ.


Click it and Unblock the Notifications











