»   » ಪರಮೇಶ್ವರ ಗುಂಡ್ಕಲ್ ಅವರ ಪ್ರಕಾರ 'BBK5'ನಲ್ಲಿ ಯಾವೆಲ್ಲಾ ಸ್ಪರ್ಧಿಗಳಿರುತ್ತಾರೆ.?

ಪರಮೇಶ್ವರ ಗುಂಡ್ಕಲ್ ಅವರ ಪ್ರಕಾರ 'BBK5'ನಲ್ಲಿ ಯಾವೆಲ್ಲಾ ಸ್ಪರ್ಧಿಗಳಿರುತ್ತಾರೆ.?

Posted By:
Subscribe to Filmibeat Kannada
Parameshwar Gundkal speaks About The Speculations Of BBK5 Contestants | Filmibeat Kannada

'ಕನ್ನಡ ಬಿಗ್ ಬಾಸ್ 5' ಆರಂಭಕ್ಕೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪೂರ್ವನಿಯೋಜಿತ ಪಟ್ಟಿಯೊಂದು ಸಿದ್ದವಾಗಿಬಿಡ್ತು. ಈ ಬಾರಿ ಅವರು ಬರ್ತಾರೆ, ಇವರು ಬರ್ತಾರೆ ಎಂಬ ಅಂತೆ-ಕಂತೆಗಳು ಆರಂಭವಾದವು.

ಆ ಪಟ್ಟಿಯಲ್ಲಿ ಯಾರೆಲ್ಲಾ ಈ ಬಾರಿ ಬಿಗ್ ಮನೆ ಪ್ರವೇಶ ಮಾಡಬಹುದು? ಎಂದು ಬಿಗ್ ಬಾಸ್ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಅವರನ್ನ ಫಿಲ್ಮಿಬೀಟ್ ಕನ್ನಡ ಪ್ರಶ್ನಿಸಿತ್ತು.

ಇದಕ್ಕೆ ಬಿಗ್ ಬಾಸ್ ಡೈರೆಕ್ಟರ್ ಉತ್ತರ ಕೊಟ್ಟಿದ್ದು, ಈ ಪಟ್ಟಿಯಿಂದ ಅವರಿಗೂ ಸಹಾಯವಾಗಿದೆಯಂತೆ. ಹಾಗಿದ್ರೆ, ನಿಜವಾಗಲೂ ಈ ಲಿಸ್ಟ್ ನಲ್ಲಿರುವವರು ಬಿಗ್ ಮನೆ ಪ್ರವೇಶ ಮಾಡ್ತಾರಾ? ಮುಂದೆ ಓದಿ....

ಅಂತಹ ಲಿಸ್ಟ್ ಗಳು ಇದ್ರೆ ಒಳ್ಳೆಯದು

''ಪ್ರತಿವರ್ಷವೂ ಅಂತಹ ಪಟ್ಟಿ ಚರ್ಚೆಯಾಗುತ್ತೆ. ಇದುವರೆಗೂ ಅಂತಹ ಲಿಸ್ಟ್ ಗೂ ಮನೆಗೆ ಒಳಗೆ ಬಂದಿರುವ ಸ್ಪರ್ಧಿಗೂ ಹೆಚ್ಚು ಕಡಿಮೆ ಸಂಬಂಧವಿರಲ್ಲ. ಆದ್ರೂ, ಅದೊಂಥರ ಕುತೂಹಲ ಹುಟ್ಟಿಸುತ್ತೆ. ಆ ತರಹ ಲಿಸ್ಟ್ ಇದ್ರೆ ಒಳ್ಳೆಯದು. ಈ ಸಲವೂ ಅದೇ ಆಗಬಹುದು'' - ಪರಮೇಶ್ವರ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

'ಬಿಗ್ ಬಾಸ್'ಗೆ ಜನಸಾಮಾನ್ಯರ ಆಯ್ಕೆ ಪ್ರಕ್ರಿಯೆ ಹೇಗಿತ್ತು?

ಅಂತಹ ಲಿಸ್ಟ್ ನಿಂದ ಸಹಾಯವಾಗಿದೆ

''ಕೆಲವೊಮ್ಮ ಅಂತಹ ಲಿಸ್ಟ್ ಗಳನ್ನ ನೋಡಿ ಕೆಲವೊಬ್ಬರನ್ನ ಸಂಪರ್ಕ ಮಾಡಿರುವುದೂ ಇದೆ. ಇಂತಹ ವ್ಯಕ್ತಿಗಳನ್ನ ಜನ ನಿರೀಕ್ಷೆ ಮಾಡ್ತಿದ್ದಾರೆ ಎಂಬುದು ನಮಗೆ ತಿಳಿಯುತ್ತೆ. ಹಾಗಾಗಿ, ಪ್ರಯತ್ನ ಪಟ್ಟಿದ್ದೀವಿ'' - ಪರಮೇಶ್ವರ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

'ಇವರೆಲ್ಲ' ಇದ್ದರೆ 'ಬಿಗ್ ಬಾಸ್ ಕನ್ನಡ-5' ಚೆಂದ: ವೀಕ್ಷಕರ ಒತ್ತಾಯದ ಪಟ್ಟಿ ಇಲ್ಲಿದೆ

ಕೆಲವು ವ್ಯಕ್ತಿಗಳು ಹೋಲಿಕೆ ಇರುತ್ತೆ!

''ಮೊದಲ ಆವೃತ್ತಿಯಲ್ಲಿ ಬ್ರಹ್ಮಾಂಡ ಗುರೂಜಿ ಇದ್ರು, ಮುಂದಿನ ಸೀಸನ್ ಗೆ ಅಂತಹ ವ್ಯಕ್ತಿ ಬೇಕು ಅಂತ ನೋಡ್ಲಿಲ್ಲ. ಹುಚ್ಚ ವೆಂಕಟ್ ಬಂದಾಗ, ಮುಂದಿನ ಸೀಸನ್ ಇಂತಹ ವ್ಯಕ್ತಿ ಬೇಕು ಅಂತ ಹುಡುಕಲಿಲ್ಲ. ಪ್ರಥಮ್ ಬಂದಾಗಲೂ ಮುಂದಿನ ಆವೃತ್ತಿಗೆ ಇಂತಹ ಕ್ಯಾರೆಕ್ಟರ್ ಬೇಕು ಅಂತ ನಾವು ಯೋಚನೆ ಮಾಡಿಲ್ಲ'' - ಪರಮೇಶ್ವರ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

ಸುದೀಪ್ ಬಗ್ಗೆ 'ಬಿಗ್ ಬಾಸ್' ಹೇಳಿದ ಯಶಸ್ಸಿನ ಸತ್ಯಕಥೆ.!

ಹೊಸ ರೀತಿಯ ವ್ಯಕ್ತಿಗಳು ಬೇಕು

''ಹುಚ್ಚವೆಂಕಟ್, ಪ್ರಥಮ್, ಅಂತಹ ವ್ಯಕ್ತಿಗಳೇ ಬೇಕು ಎಂಬ ಉದ್ದೇಶ ನಮಗಿಲ್ಲ. ಹೊಸ ರೀತಿಯ ವ್ಯಕ್ತಿಗಳು ಹುಟ್ಟಿಕೊಳ್ಳಬೇಕು. ಅಂಥವರು ಹುಟ್ಟಿಕೊಳ್ಳುವುದು ಸ್ವಲ್ಪ ಮಟ್ಟಿಗೆ ಹಣೆಬರಹ ಅಥವಾ ಲಕ್ ನಲ್ಲಿ ಇರುತ್ತೆ. ಅಂಥವರು ಹುಟ್ಕೊಂಡ್ರೆ ಶೋ ಹಿಟ್ ಆಗುತ್ತೆ, ಇಲ್ಲ ಅಂದ್ರೆ ಶೋ ಹಿಟ್ ಆಗಲ್ಲ. ಸೋ ಕಾದು ನೋಡೋಣ'' ಎನ್ನುತ್ತಾರೆ ನಿರ್ದೇಶಕರು.

'ಬಿಗ್ ಬಾಸ್' ಮನೆಗೆ ಹೋಗಬೇಕಂದ್ರೆ ಈ ಅರ್ಹತೆ ಇರಲೇಬೇಕು.!

English summary
Bigg Boss is back in Kannada. Bigg Boss Director Parameshwar Gundkal speaks about the speculations of BBK5 Celebrity Contestants.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada