»   » 'ಬಿಗ್ ಬಾಸ್' ತೆರೆ ಹಿಂದಿನ ಕಥೆ ಬಿಚ್ಚಿಟ್ಟ 'ಡೈರೆಕ್ಟರ್'!

'ಬಿಗ್ ಬಾಸ್' ತೆರೆ ಹಿಂದಿನ ಕಥೆ ಬಿಚ್ಚಿಟ್ಟ 'ಡೈರೆಕ್ಟರ್'!

Posted By:
Subscribe to Filmibeat Kannada

ಬಿಗ್ ಬಾಸ್' ಕಾರ್ಯಕ್ರಮ ಅಂದ್ರೆ, ಕೇವಲ 100 ಅಥವಾ 114 ಗಳ ಜರ್ನಿಯಾಗಿರುತ್ತೆ ಎಂಬುದು ಜನರಿಗೆ ಗೊತ್ತಿರುವುದು. ಆದ್ರೆ, 100 ದಿನಗಳ 'ಬಿಗ್ ಬಾಸ್' ರಿಯಾಲಿಟಿ ಶೋ ಮಾಡಲು ಅದರ ಹಿಂದೆ ನೂರಾರು ಜನರ ಶ್ರಮ ಇದೆ ಎಂಬುದು ಯಾರಿಗೂ ಗೊತ್ತಿಲ್ಲ.

ಹಾಗಾದ್ರೆ, 'ಬಿಗ್ ಬಾಸ್' ಕಾರ್ಯಕ್ರಮ ಮಾಡಲು ಎಷ್ಟು ದಿನಗಳ ತಯಾರಿ ಬೇಕು? ಎಷ್ಟು ಜನರ ತಂಡ ಬೇಕು, ಅವರ ಕೆಲಸ ಹೇಗಿರುತ್ತೆ ಅಂತ ಗೊತ್ತಾ?['ಬಿಗ್ ಬಾಸ್'ಗೆ 'ಹ್ಯಾಟ್ಸ್ ಆಫ್' ಎಂದ ಕನ್ನಡ ಕುಲಕೋಟಿ ವೀಕ್ಷಕರು.!]

ನೀವು ನೋಡುವ ಮನರಂಜನಾತ್ಮಕ 'ಬಿಗ್ ಬಾಸ್' ಹಿಂದೆ, ಮನರಂಜನೆ ಇಲ್ಲದೆ ಕೆಲಸ ಮಾಡೋರ ಬಗ್ಗೆ 'ಬಿಗ್ ಬಾಸ್' ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಬಹಿರಂಗಪಡಿಸಿದ್ದಾರೆ. ನಿಮ್ಮ ಫಿಲ್ಮಿ ಬೀಟ್ ಜೊತೆ ಗುಂಡ್ಕಲ್ ಅವರು ನೀಡಿರುವ ಸಂದರ್ಶನ ಇಲ್ಲಿದೆ. ಮುಂದೆ ಓದಿ....

ಒಂದು ತಿಂಗಳ ಪೂರ್ವ ತಯಾರಿ!

''100 ದಿನಗಳ 'ಬಿಗ್ ಬಾಸ್' ಕಾರ್ಯಕ್ರಮ ಮಾಡಲು ಸುಮಾರು ಒಂದು ತಿಂಗಳಿಗಿಂತ ಹೆಚ್ಚು ದಿನಗಳು ಕಾಲ ಹಗಲು-ರಾತ್ರಿ ಎನ್ನದೆ ತಾಂತ್ರಿಕ ತಂಡ ಕೆಲಸ ಮಾಡಬೇಕಾಗುತ್ತೆ. ಸುಮಾರು 300 ಜನರು ಈ ಟೀಮ್ ನಲ್ಲಿ ಕೆಲಸ ಮಾಡುತ್ತಾರೆ''['ಬಿಗ್ ಬಾಸ್'ಗೆ ಪ್ರಥಮ್ ಆಯ್ಕೆ ಆಗಿದ್ದೇಗೆ? ಪರಮೇಶ್ವರ ಗುಂಡ್ಕಲ್ ಹೇಳಿದ ಸತ್ಯ ಕಥೆ]

ಒಮ್ಮೆ ಆಕ್ಷನ್ ಹೇಳಿದ್ರೆ, 3 ತಿಂಗಳು ಕಟ್ ಇಲ್ಲ!

''ಬಿಗ್ ಬಾಸ್' ಕಾರ್ಯಕ್ರಮದ ಮೊದಲ ದಿನ ಶುರುವಾದರೆ, ಸುಮಾರು ಮೂರು ತಿಂಗಳು ಕಾಲ ತಾಂತ್ರಿಕ ತಂಡ ಹಗಲು-ರಾತ್ರಿ ಸಕ್ರಿಯರಾಗಿರುತ್ತಾರೆ. ಸುದೀಪ್ ಅವರು ಮೊದಲ ದಿನ ಆಕ್ಷನ್ ಹೇಳಿದ ಮೇಲೆ, ಮತ್ತೆ ಫಿನಾಲೆಯಲ್ಲಿ ಕಟ್ ಹೇಳುವವರೆಗೂ ಬಿಗ್ ಬಾಸ್ ಹಿಂದೆ ಕೆಲಸ ನಿರಂತರವಾಗಿ ನಡೆಯುತ್ತೆ''['ಬಿಗ್ ಬಾಸ್' ಗೆದ್ದ ಪ್ರಥಮ್: ವೀಕ್ಷಕರ ಸಂಭ್ರಮಕ್ಕೆ ಪಾರವೇ ಇಲ್ಲ.!]

150 ದಿನಗಳ ನಾನ್ ಸ್ಟಾಪ್ ಜರ್ನಿ!

''ಒಂದು ತಿಂಗಳು ಪೂರ್ವ ತಯಾರಿಯಾದರೇ, ಮೂರು ತಿಂಗಳು ಕಾರ್ಯಕ್ರಮ ಸಾಗುತ್ತೆ. ಹೀಗಾಗಿ, 'ಬಿಗ್ ಬಾಸ್' ರಿಯಾಲಿಟಿ ಶೋ ಹಿಂದೆ ಕೆಲಸ ಮಾಡೋರಿಗೆ ಇದು 150 ದಿನಗಳ ನಾನ್ ಸ್ಟಾಪ್ ಜರ್ನಿ''['ಬಿಗ್ ಬಾಸ್ ಕನ್ನಡ-4' ಗ್ರ್ಯಾಂಡ್ ಫಿನಾಲೆ ಹೈಲೈಟ್ಸ್ ಪಾರ್ಟ್-2]

ಹಬ್ಬ ಇಲ್ಲ, ಮನಂರಜನೆ ಅಂತೂ ಇಲ್ವೆ ಇಲ್ಲ !

''150 ದಿನಗಳ ಪ್ರಯಾಣದಲ್ಲಿ ನಮ್ಮ ತಾಂತ್ರಿಕ ತಂಡಕ್ಕೆ ಯಾವುದೇ ಹಬ್ಬವಿಲ್ಲ. 'ಬಿಗ್ ಬಾಸ್' ಶುರುವಾಗುವ ಸಮಯದಲ್ಲಿ, ದೀಪಾವಳಿ, ದಸರಾ ಹಬ್ಬ, ಗಣೇಶ ಹಬ್ಬ, ಹೊಸ ವರ್ಷ, ಸಂಕ್ರಾತಿ ಹಬ್ಬ ಇರುವುದಿಲ್ಲ. ವಾರಾಂತ್ಯದಲ್ಲಿ ಶನಿವಾರ, ಭಾನುವಾರನೂ ರಜೆ ಇರುವುದಿಲ್ಲ. ಮನರಂಜನೆ ಇಲ್ಲದೆ ಜನರಿಗೆ ಮನರಂಜನೆ ನೀಡಬೇಕಾಗುತ್ತೆ''['ಬಿಗ್ ಬಾಸ್ ಫಿನಾಲೆ' ಬಗ್ಗೆ ಒನ್ ಇಂಡಿಯಾ 'POLL' ಹೇಳಿದ್ದು ನಿಜವಾಯ್ತು!]

English summary
BiggBoss Kannada Director and Colours Kannada and Colours Super Business Head Parameshwar Gundkal Has shared the Behind the scenes of Bigg Boss Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada