»   » 'ಬಿಗ್ ಬಾಸ್' ವೇದಿಕೆ ಹಿಂದೆ ಸುದೀಪ್ ಹೇಗಿರುತ್ತಾರೆ ಗೊತ್ತಾ?

'ಬಿಗ್ ಬಾಸ್' ವೇದಿಕೆ ಹಿಂದೆ ಸುದೀಪ್ ಹೇಗಿರುತ್ತಾರೆ ಗೊತ್ತಾ?

Posted By:
Subscribe to Filmibeat Kannada

ಕಿಚ್ಚ ಸುದೀಪ್ 'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದ ಆಧಾರಸ್ತಂಭ ಎಂದರೆ ತಪ್ಪಾಗಲಾರದು. ಸತತ ನಾಲ್ಕು ಆವೃತ್ತಿಗಳನ್ನ ಯಶಸ್ವಿಯಾಗಿ ನಿರೂಪಣೆ ಮಾಡಿರುವ ಸುದೀಪ್, 'ಬಿಗ್ ಬಾಸ್' ಕಾರ್ಯಕ್ರಮದ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದಾರೆ.

ಇದಕ್ಕೆ ತಾಜಾ ಉದಾಹರಣೆ 'ಬಿಗ್ ಬಾಸ್' ಫಿನಾಲೆ ದಿನ ತಮ್ಮ ಆರೋಗ್ಯ ಕೆಟ್ಟಿದ್ದರು ಯಶಸ್ವಿಯಾಗಿ ಕಾರ್ಯಕ್ರಮ ನಿರೂಪಣೆ ಮಾಡಿರುವುದು. ಹೌದು, 'ಬಿಗ್ ಬಾಸ್' ವೇದಿಕೆ ಮೇಲೆ ಪಂಚಾಯಿತಿ ಮಾಡೋ ಸುದೀಪ್ ಅವರನ್ನ ನೀವೆಲ್ಲಾ ನೋಡಿದ್ದೀರಾ. ಆದ್ರೆ, 'ಬಿಗ್ ಬಾಸ್' ಹಿಂದೆ ಕಿಚ್ಚ ಹೇಗಿರ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ.['ಬಿಗ್ ಬಾಸ್' ಫಿನಾಲೆ ದಿನ ಎದುರಾದ ಸವಾಲು ಏನು ಗೊತ್ತಾ?]

'ಬಿಗ್ ಬಾಸ್' ಕಾರ್ಯಕ್ರಮದ ಜೊತೆ ಹಾಗೂ 'ಬಿಗ್ ಬಾಸ್' ವೇದಿಕೆ ಹಿಂದೆ ಅಭಿನಯ ಚಕ್ರವರ್ತಿ ಹೇಗಿರ್ತಾರೆ ಎಂಬುದನ್ನ, 'ಬಿಗ್ ಬಾಸ್' ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ...

ವೇದಿಕೆ ಹಿಂದೆ ಸುದೀಪ್ ಹೇಗೆ?

''ಸುದೀಪ್ ಅವರು ನಮಗೆ ಹಲವು ಬಾರಿ ಊಟ ಮಾಡಿ ಬಣಸಿದ್ದಾರೆ. ಅವರಿಗೊಂದು ಮನೆ ಇದೆ. ಶುಕ್ರವಾರ, ಶನಿವಾರ ಅವರು ಅಲ್ಲೆ ಉಳಿದುಕೊಳ್ತಾರೆ. ಕಾರ್ಯಕ್ರಮ ನಿರೂಪಣೆ ಮಾಡಿ ಆಯಾಸವಾಗಿದ್ರು, ಅಮೇಲೆ ಕೂಡ ನಮಗೆ ಊಟ ಮಾಡಿ ಬಣಸಿದ್ದಾರೆ. ಇದನ್ನ ಒಬ್ಬ ಸೂಪರ್ ಸ್ಟಾರ್ ಕಡೆಯಿಂದ ಯಾರು ನಿರೀಕ್ಷೆ ಮಾಡೋಕೆ ಆಗಲ್ಲ''.[ಫೇಸ್ ಬುಕ್ನಲ್ಲಿ ಸವಾಲ್ ಹಾಕೋರಿಗೆ 'ಬಿಗ್ ಬಾಸ್' ಡೈರೆಕ್ಟರ್ ಕೊಟ್ಟ ಜವಾಬು!]

ಫಿನಾಲೆ ದಿನ ಸುದೀಪ್ ಆರೋಗ್ಯ ಸರಿಯಿರಲಿಲ್ಲ

''ಬಿಗ್ ಬಾಸ್' ಫಿನಾಲೆ ದಿನ ಸುದೀಪ್ ಅವರಿಗೆ ಆರೋಗ್ಯ ಸರಿಯಿರಲಿಲ್ಲ. ಅವರಿಗೆ ಜ್ವರ ಇತ್ತು. ತುಂಬಾ ಆಯಾಸವಾಗಿತ್ತು. ಓಡಾಡುವುದು ಕೂಡ ಕಷ್ಟಕರವಾಗಿತ್ತು. ಹೀಗಾಗಿ ಕೆಲವು ಸಮಯ ಮಲಗಿ ವಿಶ್ರಾಂತಿ ತೆಗೆದುಕೊಂಡಿದ್ದರು. ಅಮೇಲೆ ವೇದಿಕೆ ಬಳಿ ಬಂದು ಅಲ್ಲಿ ಕೂತ್ಕೊಂಡ್ರು. ಅಲ್ಲೆ ನಿದ್ದೆ ಕೂಡ ಮಾಡುವಷ್ಟು ಆಯಾಸವಾಗಿತ್ತು. ಆ ರೀತಿಯ ಸುದೀಪ್ ಅವರನ್ನ ನಾವು ಹಿಂದೆ ನೋಡಿರಲಿಲ್ಲ''.['ಬಿಗ್ ಬಾಸ್'ಗೆ ಪ್ರಥಮ್ ಆಯ್ಕೆ ಆಗಿದ್ದೇಗೆ? ಪರಮೇಶ್ವರ ಗುಂಡ್ಕಲ್ ಹೇಳಿದ ಸತ್ಯ ಕಥೆ]

ಜ್ವರ ಇದ್ರೂ ಕಾರ್ಯಕ್ರಮ ನಿರೂಪಣೆ

''ಅಷ್ಟು ಕಷ್ಟ ಇದ್ರು, ರೋಲ್ ಅಂದಾಕ್ಷಣ, ವೇದಿಕೆ ಮೇಲೆ ಬಂದು ಸುದೀಪ್ ಅವರು ನಿರೂಪಣೆ ಮಾಡ್ತಿದ್ರು. ಬಹುಶಃ ಅಂದಿನ ಕಾರ್ಯಕ್ರಮ ನೋಡಿದ ಯಾರಿಗೂ ಕೂಡ ಅವರ ಆರೋಗ್ಯ ಸರಿಯಿಲ್ಲ ಎಂಬ ಭಾವನೆ ಕೂಡ ಬಂದಿರಲ್ಲ. ಇಷ್ಟು ಕಷ್ಟಕರ ಪರಿಸ್ಥಿತಿಯಲ್ಲಿ ಸುದೀಪ್ ಅವರು ಕಾರ್ಯಕ್ರಮವನ್ನ ಮುಗಿಸಿಕೊಟ್ಟರು. ಯಾಕಂದ್ರೆ, 'ಬಿಗ್ ಬಾಸ್' ಬಗ್ಗೆ ಅವರಿಗಿರುವ ಪ್ರೀತಿ, ಮತ್ತು ಅವರ ಕಮಿಟ್ ಮೆಂಟ್''.['ಬಿಗ್ ಬಾಸ್' ತೆರೆ ಹಿಂದಿನ ಕಥೆ ಬಿಚ್ಚಿಟ್ಟ 'ಡೈರೆಕ್ಟರ್'!]

ಸುದೀಪ್ ಅವರ ಪ್ಲಸ್ ಪಾಯಿಂಟ್

''ಸುದೀಪ್ ಒಬ್ಬ ಅತ್ಯುತ್ತಮ ಕಲಾವಿದ, ಅವರಿಗೆ ಅದ್ಭುತವಾದ ಕಂಠವಿದೆ. ತುಂಬಾ ಒಳ್ಳೆಯ ಸಮಯ ಸ್ಪೂರ್ತಿ ಇದೆ. ತಾಂತ್ರಿಕವಾಗಿ ಈ ಕಾರ್ಯಕ್ರಮದ ಒಳಗೂ ಸುದೀಪ್ ಅವರಿಗೆ ಗೊತ್ತು. ಕ್ಯಾಮೆರಾ ಎಲ್ಲಿ ಫೋಕಸ್ ಮಾಡ್ಬೇಕು, ಲೈಟ್ ಎಲ್ಲಿ ಬೇಕು ಎಂಬುದರ ಅರಿವು ಹೊಂದಿರುವ ನಿರೂಪಕ ಸುದೀಪ್''.

ಸುದೀಪ್ 'ಬಿಗ್ ಬಾಸ್' ಮಾರ್ಗದರ್ಶಕರು

''ಸುದೀಪ್ ಅವರು ನ್ಯಾಯನಿಷ್ಠೆ ಮೆಚ್ಚಲೇಬೇಕು. ಯಾಕಂದ್ರೆ, ಎಲ್ಲರನ್ನೂ ಒಂದೇ ಎಂದು ಕಾಣುವವರು ಅವರು. ಅವರಿಗೆ ಯಾರು ಫೇವರೆಟ್ ಎಂದು ಕೂಡ ನಮಗೂ ಕೂಡ ಹೇಳಿಲ್ಲ. ಅದಕ್ಕಿಂತಲೂ ಮಿಗಿಲಾಗಿ, ಸುದೀಪ್ ಅವರು ಒಬ್ಬ ನಟರಾಗಿ, ಒಬ್ಬ ನಿರೂಪಕರಾಗಿ, ಮಾರ್ಗದರ್ಶಕರಾಗಿ ಹಾಗೂ ಸ್ನೇಹಿತರಾಗಿ ನಮ್ಮ ಕಲರ್ಸ್ ಕನ್ನಡದ ಜೊತೆಯಲ್ಲಿ ಇದ್ದಾರೆ. ನಿಜವಾಗಲೂ ಅವರಿಗೊಂದು ದೊಡ್ಡ ಥ್ಯಾಂಕ್ಸ್.....''

English summary
BiggBoss Kannada Director and Colours Kannada and Colours Super Business Head Parameshwar Gundkal Has shared about kiccha sudeep's Dedication on BiggBoss.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada