For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ರಹಸ್ಯ ವಿಡಿಯೋ ನೋಡಿ WTF ಎಂದ ಪಾರೂಲ್

  |
  Bigg Boss : Parul Yadav shares a classified backstage video of BB | Filmibeat Kannada

  ಹಿಂದಿ 'ಬಿಗ್ ಬಾಸ್ ಸೀಸನ್ 13' ಕಾರ್ಯಕ್ರಮದ ತೀರ್ಪು ಅನುಮಾನಕ್ಕೆ ಕಾರಣವಾಗಿದೆ. ಸಿದ್ಧಾರ್ಥ್ ಶುಕ್ಲಾ ಹಾಗೂ ಆಸಿಮ್ ರಿಯಾಝ್ ಪೈಕಿ ಸಿದ್ಧಾರ್ಥ್ ಗೆಲ್ಲಿಸಿದ್ದ ವಾಹಿನಿ ಬಗ್ಗೆ ಪ್ರೇಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.

  ವಾಹಿನಿಯ ಕಾರ್ಯಕ್ರಮ ಕಂಟ್ರೋಲ್ ರೂಮ್ ನಿಂದ ವಿಡಿಯೋವೊಂದು ಲೀಕ್ ಆಗಿದ್ದು, ಬಿಗ್ ಬಾಸ್ ಫೇಕ್ ಶೋ ಎನ್ನುವ ಅನುಮಾನಕ್ಕೆ ಪುಷ್ಟಿ ತುಂಬಿದೆ. ಈ ವಿಡಿಯೋ ಬಗ್ಗೆ ನಟಿ ಪಾರೂಲ್ ಯಾದವ್ ಕೂಡ ಟ್ವೀಟ್ ಮಾಡಿದ್ದಾರೆ.

  ಬಿಗ್ ಬಾಸ್ 'ಫಿಕ್ಸ್ಡ್' ಶೋ ಎಂಬುದಕ್ಕೆ ಸಾಕ್ಷಿ: ಕಂಟ್ರೋಲ್ ರೂಮ್ ನಿಂದ ವಿಡಿಯೋ ಲೀಕ್.!ಬಿಗ್ ಬಾಸ್ 'ಫಿಕ್ಸ್ಡ್' ಶೋ ಎಂಬುದಕ್ಕೆ ಸಾಕ್ಷಿ: ಕಂಟ್ರೋಲ್ ರೂಮ್ ನಿಂದ ವಿಡಿಯೋ ಲೀಕ್.!

  'ಬಿಗ್ ಬಾಸ್-13' ಗ್ರ್ಯಾಂಡ್ ಫಿನಾಲೆಯಂದು ವಿಜೇತರ ಘೋಷಣೆ ಆಗುವ ಸಂದರ್ಭದಲ್ಲಿ, ವಾಹಿನಿಯ ಪ್ರೋಗ್ರಾಂ ಕಂಟ್ರೋಲ್ ರೂಮ್ ನಿಂದ ಒಂದು ವಿಡಿಯೋ ಲೀಕ್ ಆಗಿದೆ. ಆ ವಿಡಿಯೋದಲ್ಲಿ ಮಹಿಳೆಯೊಬ್ಬರು, ''ಸಿದ್ಧಾರ್ಥ್ ಶುಕ್ಲಾ ಮತ್ತು ಆಸಿಮ್ ರಿಯಾಝ್ ಗೆ ಸಮವಾಗಿ ವೋಟ್ಸ್ ಲಭಿಸಿದೆ'' ಎಂದು ಹೇಳುತ್ತಾರೆ. ಈ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದೆ.

  ಈ ವಿಡಿಯೋ ನೋಡಿ ಆಶ್ಚರ್ಯ ವ್ಯಕ್ತಪಡಿಸಿರುವ ಪಾರೂಲ್ ಯಾದವ್ WTF ಎಂದು ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ. ಪಾರೂಲ್ ಸಹ ಕಂಟ್ರೋಲ್ ರೂಮ್ ನಲ್ಲಿ ನಡೆದ ಸಂಭಾಷಣೆ ಕೇಳಿ ಅಚ್ಚರಿಕೊಂಡಿದ್ದಾರೆ.

  ಬಿಗ್‌ ಬಾಸ್‌ ಸೈಡ್ ಎಫೆಕ್ಟ್: 'ಕಲರ್ಸ್ ಟಿವಿ' ಬ್ಯಾನ್ ಮಾಡಿ ಎಂದು ರೊಚ್ಚಿಗೆದ್ದ ನೆಟ್ಟಿಗರುಬಿಗ್‌ ಬಾಸ್‌ ಸೈಡ್ ಎಫೆಕ್ಟ್: 'ಕಲರ್ಸ್ ಟಿವಿ' ಬ್ಯಾನ್ ಮಾಡಿ ಎಂದು ರೊಚ್ಚಿಗೆದ್ದ ನೆಟ್ಟಿಗರು

  ಸಿದ್ಧಾರ್ಥ್ ಶುಕ್ಲಾ ಮತ್ತು ಆಸಿಮ್ ರಿಯಾಝ್ ಇಬ್ಬರಿಗೂ ಸಮವಾಗಿ ಮತಗಳು ಸಿಕ್ಕ ಮೇಲೆ ಅದೇಗೆ ಸಿದ್ಧಾರ್ಥ್ ವಿನ್ನರ್ ಆದರು. ಆಸಿಮ್ ರನ್ನು ಯಾಕೆ ಪರಿಗಣನೆ ಮಾಡಲಿಲ್ಲ ಎನ್ನುವ ಪ್ರಶ್ನೆ ಜೋರಾಗಿದೆ.

  Parul Yadav Tweets About Bigg Boss 13 Leaked Video

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ಧಾರ್ಥ್ ಶುಕ್ಲಾ ''ಬಿಗ್ ಬಾಸ್' ಮನೆಯಲ್ಲಿ ಕಷ್ಟದ ಹಾದಿ ತುಳಿದು ವಿನ್ನರ್ ಟ್ರೋಫಿ ಪಡೆದುಕೊಂಡಿದ್ದೇನೆ. ಅಂಥದ್ರಲ್ಲಿ ಫಿಕ್ಸ್ಡ್ ವಿನ್ನರ್ ಅಂದ್ರೆ ಬೇಸರ ಆಗುತ್ತೆ. ಇಡೀ ಸೀಸನ್ ನ ಫಾಲೋ ಮಾಡಿದ್ದರೆ, ನನಗೆ 'ಬಿಗ್ ಬಾಸ್' ಪಯಣ ಸುಲಭ ಆಗಿರಲಿಲ್ಲ ಎಂಬುದು ನಿಮಗೆ ಗೊತ್ತಾಗುತ್ತೆ'' ಎಂದಿದ್ದಾರೆ.

  English summary
  Parul Yadav tweets about Leaked Video From Bigg Boss 13 Control Room. In that video Suggests Asim And Sidharth Got Equal Votes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X