»   » 'ಮಜಾ ಭಾರತ'ಕ್ಕೆ ಬಂದು 'ಜಿಲೇಬಿ' ತಿನ್ನಿಸಿದ ಪೂಜಾ ಗಾಂಧಿ

'ಮಜಾ ಭಾರತ'ಕ್ಕೆ ಬಂದು 'ಜಿಲೇಬಿ' ತಿನ್ನಿಸಿದ ಪೂಜಾ ಗಾಂಧಿ

Posted By:
Subscribe to Filmibeat Kannada

ಕಲರ್ಸ್ ಸೂಪರ್ ವಾಹಿನಿಯ ಜನಪ್ರಿಯ ಕಾಮಿಡಿ ರಿಯಾಲಿಟಿ ಶೋ 'ಮಜಾ ಭಾರತ'ಕ್ಕೆ ಈ ವಾರ ವಿಶೇಷ ಅತಿಥಿಯಾಗಿ ನಟಿ ಪೂಜಾ ಗಾಂಧಿ ಭಾಗವಹಿಸಿದ್ದಾರೆ.

'ಬಿಗ್ ಬಾಸ್' ಖ್ಯಾತಿಯ ಶೀತಲ್ ಶೆಟ್ಟಿ ಮತ್ತು ನಿರಂಜನ್ ದೇಶಪಾಂಡೆ ನಿರೂಪಣೆ ಇರುವ 'ಮಜಾ ಭಾರತ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ 'ಜಿಲೇಬಿ' ಚಿತ್ರದ ಅನುಭವವನ್ನು ನಟಿ ಪೂಜಾ ಗಾಂಧಿ ಹಂಚಿಕೊಂಡಿದ್ದಾರೆ. ಸಾಲದಕ್ಕೆ ಎಲ್ಲರಿಗೂ 'ಹಾಟ್ ಅಂಡ್ ಸ್ವೀಟ್ ಜಿಲೇಬಿ' ತಿನ್ನಿಸಿದ್ದಾರೆ.['ಕಾಮಿಡಿ ಕಿಲಾಡಿಗಳು' ಫಿನಾಲೆ ತಲುಪುವ ಆರು ಅದೃಷ್ಟಶಾಲಿಗಳು ಯಾರು.?]

 Pooja Gandhi as special guest in 'Majaabharatha'

ಜೊತೆಗೆ 'ಮಜಾ ಭಾರತ' ಕಾರ್ಯಕ್ರಮದಲ್ಲಿ ವಿವಿಧ ತಂಡಗಳು ನೀಡಿದ ಅದ್ಭುತ ಪರ್ಫಾಮೆನ್ಸ್ ಗಳನ್ನ ಪೂಜಾ ಗಾಂಧಿ ಹಾಡಿ ಹೊಗಳಿದ್ದಾರೆ. ಅಂದ್ಹಾಗೆ, 'ಮಜಾ ಭಾರತ' ಕಾರ್ಯಕ್ರಮದಲ್ಲಿ ನಟಿ ಶ್ರುತಿ ಹಾಗೂ ಎಸ್.ನಾರಾಯಣ್ ತೀರ್ಪುಗಾರರು.[ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಷ್ಟವಾದ ರಿಯಾಲಿಟಿ ಶೋ ಇದು..]

 Pooja Gandhi as special guest in 'Majaabharatha'

'ಮಜಾ ಭಾರತ'ದಲ್ಲಿ ನಟಿ ಪೂಜಾ ಗಾಂಧಿ ಭಾಗವಹಿಸಿರುವ ಸಂಚಿಕೆ ಇಂದು ರಾತ್ರಿ 9 ಗಂಟೆಗೆ ನಿಮ್ಮ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಅಗಲಿದೆ. ತಪ್ಪದೇ ವೀಕ್ಷಿಸಿ...

English summary
Kannada Actress Pooja Gandhi visited the sets of 'Majaabharatha' as special guest. Watch 'Majaabharatha' today at 9PM in Colors Super Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada