For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಮನೆಗೆ ಅಭಿನೇತ್ರಿ ಬರೋದಿಲ್ಲಂತೆ!

  By ಜೇಮ್ಸ್ ಮಾರ್ಟಿನ್
  |

  ದಂಡುಪಾಳ್ಯ ಚಿತ್ರದಲ್ಲಿ ಬೆತ್ತಲೆ ಬೆನ್ನು ತೋರಿದ್ದ ಪೂಜಾ ಗಾಂಧಿ ಈಗ ಅಭಿನೇತ್ರಿ ಚಿತ್ರದಲ್ಲಿ ಮೈಚಳಿ ಬಿಟ್ಟು ನಟಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಆ ಕಾಲದ ಹೀರೋಯಿನ್ ಕಥೆ ಇದು ಎಂದು ಹೇಳಲಾಗಿದ್ದರೂ ಚಿತ್ರದ ಕಥೆ ಬಗ್ಗೆ ಇನ್ನೂ ಸ್ಪಷ್ಟವಾಗಿ ಏನು ತಿಳಿದು ಬಂದಿಲ್ಲ. ಈ ನಡುವೆ ಪೂಜಾ ಗಾಂಧಿ ಬಿಗ್ ಬಾಸ್ ರಿಯಾಲಿಟಿ ಶೋಗೆ ಬಂದು ತಮ್ಮ ಚಿತ್ರರಂಗ, ವೈಯಕ್ತಿಕ ಹಾಗೂ ರಾಜಕೀಯ ಜೀವನದ ಈವರೆಗಿನ ಅನುಭವಗಳನ್ನು ಹಂಚಿಕೊಳ್ಳುತ್ತಾರೆ ಎಂಬ ಸುದ್ದಿ ಬಂದಿತ್ತು.

  ಆದರೆ, ನಾನು ಅಭಿನೇತ್ರಿ ಚಿತ್ರದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದೇನೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಲಾರೆ ಎಂದಿದ್ದಾರೆ. ಆದರೆ, ಮೂಲಗಳ ಪ್ರಕಾರ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಶೋ ನಲ್ಲಿ ತಮ್ಮ ಚಿತ್ರ ಅಭಿನೇತ್ರಿ ಪ್ರಚಾರಕ್ಕಾಗಿ ಮನೆಯೊಳಗೆ ಮುಂಗಾರು ಮಳೆ ಹುಡುಗಿ ಕಾಲಿಡುವ ಸಾಧ್ಯತೆಯನ್ನು ಅಲ್ಲಗೆಳೆಯಲಾಗುವುದಿಲ್ಲ ಎನ್ನಲಾಗಿದೆ.

  ಅಭಿನೇತ್ರಿ ಚಿತ್ರದಲ್ಲಿ ಅರೆಬರೆ ನಗ್ನ ಚಿತ್ರಗಳು ಬಿಡುಗಡೆಯಾಗಿ ಸದ್ದು ಮಾಡುತ್ತಿವೆ.ಚಿತ್ರದಲ್ಲಿನ ತಮ್ಮ ಗೆಟೆಪ್ ಬಗ್ಗೆ ಈಗಾಗಲೆ ಪೂಜಾ ಸ್ಪಷ್ಟೀಕರಣ ನೀಡಿದ್ದಾರೆ. ಇದು ಮಿನುಗು ತಾರೆ ಕಲ್ಪನಾ ಅಥವಾ ಮಂಜುಳಾ ಅವರ ಜೀವನ ಕಥೆಯಲ್ಲಾ ಎಂದಿದ್ದಾರೆ.

  ಸತೀಶ್ ಪ್ರಧಾನ್ ನಿರ್ದೇಶನದ ಸಿನಿಮಾದ ಶೂಟಿಂಗ್ ಭರದಿಂದ ಸಾಗಿದ್ದು, ಜೂನ್ ತಿಂಗಳಲ್ಲಿ ಬಿಡುಗಡೆ ಕಾಣಬಹುದಾಗಿದೆ. ಇದು ಪೂಜಾಗಾಂಧಿ ಅವರ ಚೊಚ್ಚಲ ಹೋಂ ಬ್ಯಾನರ್ ಚಿತ್ರ. ತಮ್ಮ ಸ್ವಂತ ನಿರ್ಮಾಣ ಚಿತ್ರಕ್ಕೆ ಪೂಜಾಗಾಂಧಿ ಪ್ರೊಡಕ್ಷನ್ಸ್ ಎಂದು ಹೆಸರಿಟ್ಟಿದ್ದಾರೆ. ಬಿಗ್ ಬಾಸ್ ನಿಂದ ಆಫರ್ ಬಂದಿದ್ದು ನಿಜ ಅದರೆ, ನನಗೆ ಆ ಸ್ಪರ್ಧೆ ಸರಿ ಹೊಂದುವುದಿಲ್ಲ, ಸದ್ಯಕ್ಕೆ ನಾನಂತೂ ಅಭಿನೇತ್ರಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಲ್ಲಿ ನಿರತಳಾಗಿದ್ದೇನೆ ಎಂದು ಪೂಜಾ ಹೇಳಿದ್ದಾರೆ.

  English summary
  Pooja Gandhi has said that she will not be part of 'Big Boss' season 2. Bigg Boss 2 is scheduled to be launched in the third week of June in the Suvarna Entertainment Channel.Pooja Gandhi is busy in post production work with her debut home banner movie 'Abhinetri'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X