For Quick Alerts
  ALLOW NOTIFICATIONS  
  For Daily Alerts

  'ಮಜಾ ಟಾಕೀಸ್' ವೀಕ್ಷಕರಿಗೆ ಈ ವಾರ ಬೇಸರದ ಸುದ್ದಿ

  |

  ಕನ್ನಡದ ಜನಪ್ರಿಯ ಟಿವಿ ಶೋಗಳಲ್ಲಿ ಒಂದಾಗಿದ್ದ ಮಜಾ ಟಾಕೀಸ್ ಈ ವಾರ ಕೊನೆಯಾಗುತ್ತಿದೆ. ಪ್ರತಿ ವಾರಾಂತ್ಯದಲ್ಲಿ ಮನೆ ಮಂದಿಯನ್ನೆಲ್ಲಾ ನಕ್ಕು ನಗಿಸುತ್ತಿರುವ ಕಾಮಿಡಿ ಟಾಕ್ ಶೋ ಈ ವಾರ ಅಂತ್ಯವಾಗಲಿದೆ. ಅಕ್ಟೋಬರ್ 6 ರಂದು ಭಾನುವಾರ ಕೊನೆಯ ಸಂಚಿಕೆ ಪ್ರಸಾರವಾಗಲಿದೆ.

  ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಟಾಕೀಸ್ ಫಿನಾಲೆಗೆ ನಟಿ ಹರಿಪ್ರಿಯಾ, ಮಾನ್ವಿತಾ ಹರೀಶ್, ತಾರಾ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದಾರೆ.

  ಕಿಸ್ಸಿಂಗ್ ದೃಶ್ಯದಲ್ಲಿ ಸೃಜನ್ ಲೋಕೇಶ್ - ಹರಿಪ್ರಿಯಾಕಿಸ್ಸಿಂಗ್ ದೃಶ್ಯದಲ್ಲಿ ಸೃಜನ್ ಲೋಕೇಶ್ - ಹರಿಪ್ರಿಯಾ

  ಸೃಜನ್ ಲೋಕೇಶ್ ನಿರ್ದೇಶನದ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಪವನ್, ಶ್ವೇತಾ ಚೆಂಗಪ್ಪ, ಸಂಗೀತ ನಿರ್ದೇಶಕ ವಿ ಮನೋಹರ್, ಅಪರ್ಣ, ರೆಮೋ, ಕುರಿ ಪ್ರತಾಪ್, ಮಂಡ್ಯ ರಮೇಶ್, ನಿರ್ದೇಶಕ ಇಂದ್ರಜಿತ್ ಲಂಕೇಶ್, ನಟ ವಿಶ್ವ, ಮಿಮಿಕ್ರಿ ದಯಾನಂದ್, ನವೀನ್ ಪಡೀಲ್ ಸೇರಿದಂತೆ ಹಲವರು ಸದಸ್ಯರಾಗಿದ್ದರು.

  2015ರಲ್ಲಿ ಆರಂಭವಾಗಿದ್ದ ಮಜಾ ಟಾಕೀಸ್ 2018ರಲ್ಲೇ 200 ಎಪಿಸೋಡ್ ಮುಗಿಸಿತ್ತು. ಮತ್ತೆ ಎರಡನೇ ಸೀಸನ್ ಪ್ರಾರಂಭಗೊಂಡು, ಎಪಿಸೋಡ್ ಸಂಖ್ಯೆ ಮತ್ತಷ್ಟು ಹೆಚ್ಚಿಕೊಂಡಿದೆ. ದಾಖಲೆಗಳ ಪ್ರಕಾರ ಸುಮಾರು 500ಕ್ಕೂ ಅಧಿಕ ಚಿತ್ರತಂಡದವರನ್ನ ಮಜಾ ಟಾಕೀಸ್ ಗೆ ಆಹ್ವಾನಿಸಿ, ಪ್ರಚಾರ ನೀಡಿದ್ದಾರೆ.

  'ಸೃಜನ್ ನಿರ್ಮಾಣದ ಧಾರಾವಾಹಿಗೆ ಬಿಗ್ ಬಾಸ್' ಸ್ಪರ್ಧಿ ಮೇಘಶ್ರೀ ನಾಯಕಿ'ಸೃಜನ್ ನಿರ್ಮಾಣದ ಧಾರಾವಾಹಿಗೆ ಬಿಗ್ ಬಾಸ್' ಸ್ಪರ್ಧಿ ಮೇಘಶ್ರೀ ನಾಯಕಿ

  ಸದ್ಯಕ್ಕೆ ಮಜಾ ಟಾಕೀಸ್ ಸೂಪರ್ ಸೀಸನ್ ಮುಗಿಯುತ್ತಿದೆ. ಮತ್ತೊಂದು ಹೊಸ ಆವೃತ್ತಿಯಲ್ಲಿ, ಹೊಸ ಶೈಲಿಯೊಂದಿಗೆ ಮತ್ತೆ ಬರಬಹುದು. ಯಾಕಂದ್ರೆ, ಈ ಮುಂಚೆಯೇ ಮೊದಲ ಆವೃತ್ತಿ ಬಳಿಕ ಮತ್ತೆ ಮಜಾ ಟಾಕೀಸ್ ಎರಡನೇ ಸೀಸನ್ ಪ್ರಸಾರವಾಗಿತ್ತು.

  English summary
  Popular kannada talk show Maja Talkies telecasting final episode in this weekend.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X