»   » ನಿಮ್ಮನ್ನೆಲ್ಲ ನಕ್ಕು ನಲಿಸಲು ಬರ್ತಿದ್ದಾರೆ 'ಪ್ರಚಂಡ ಕಿಲಾಡಿಗಳು'

ನಿಮ್ಮನ್ನೆಲ್ಲ ನಕ್ಕು ನಲಿಸಲು ಬರ್ತಿದ್ದಾರೆ 'ಪ್ರಚಂಡ ಕಿಲಾಡಿಗಳು'

Posted By:
Subscribe to Filmibeat Kannada

ಕಳೆದ ಏಳು ವರ್ಷಗಳಿಂದ ಜನರನ್ನು ನಕ್ಕು ನಲಿಸಿ ರಂಜಿಸುತ್ತಿರುವ ರಾಜ್ಯದ ಏಕೈಕ ಕಾಮಿಡಿ ವಾಹಿನಿ 'ಉದಯ ಕಾಮಿಡಿ' ಇದೀಗ ಹೊಸ ಹುರುಪಿನೊಂದಿಗೆ ಹೊಸ ಕಾರ್ಯಕ್ರಮಗಳ ಮೂಲಕ ಜನರನ್ನು ರಂಜಿಸಲು ಮುಂದಾಗಿದೆ.

ಜನ ಎಷ್ಟೇ ಟೆನ್ಷನ್ ಹಾಗೂ ಗಡಿಬಿಡಿಯಲ್ಲಿ ಮನೆಗೆ ಬಂದರೂ, ಅವರಿಗೆ ನಿರಾಸೆ ಮೂಡಿಸದೆ, ಮೊಗದಲ್ಲಿ ಮಂದಹಾಸ ಮೂಡಿಸುವ ಉದ್ದೇಶ 'ಉದಯ ಕಾಮಿಡಿ' ವಾಹಿನಿಯದ್ದು.

ಕಾಮಿಡಿ ಕಮಾಲ್ ಮೂಲಕ ಅತಿ ಹೆಚ್ಚು ಪ್ರೇಕ್ಷಕರನ್ನು ಹೊಂದಿರುವ 'ಉದಯ ಕಾಮಿಡಿ' ಟಿವಿಯಲ್ಲಿ ಇದೀಗ 'ಪ್ರಚಂಡ ಕಿಲಾಡಿಗಳು' ಎಂಬ ಹೊಸ ಶೋ ಆರಂಭ ಆಗುತ್ತಿದೆ. ಮುಂದೆ ಓದಿರಿ....

'ಉದಯ ಕಾಮಿಡಿ'ಯಲ್ಲಿ 'ಪ್ರಚಂಡ ಕಿಲಾಡಿಗಳು'

'ಉದಯ ಟಿವಿ'ಯ ಜನಪ್ರಿಯ 'ಚಿಣ್ಣರ ಚಿಲಿಪಿಲಿ' ಕಾರ್ಯಕ್ರಮವನ್ನ ನೀವೆಲ್ಲ ನೋಡಿದ್ದೀರಾ.? ಆಲ್ಮೋಸ್ಟ್ ಅದೇ ಶೈಲಿಯಲ್ಲಿ ಹಾಸ್ಯದ ಲೇಪನದೊಂದಿಗೆ 'ಪ್ರಚಂಡ ಕಿಲಾಡಿಗಳು' ಪ್ರಸಾರ ಆಗಲಿದೆ.

'ಪ್ರಚಂಡ ಕಿಲಾಡಿಗಳು' ಕಾರ್ಯಕ್ರಮದ ವಿಶೇಷತೆ ಏನು.?

ಪ್ರತಿಯೊಬ್ಬರಿಗೂ ತಮ್ಮ ಬಾಲ್ಯದ ದಿನಗಳು ಮತ್ತೆ ಮರುಕಳಿಸಬೇಕು ಎಂಬ ಹಂಬಲವಿರುತ್ತದೆ. ಅಂತಹ ಅಂಶಗಳನ್ನು ಇಟ್ಟುಕೊಂಡು 'ಪ್ರಚಂಡ ಕಿಲಾಡಿಗಳು' ಶೋ ರೂಪಿಸಲಾಗಿದೆ.

'ಪ್ರಚಂಡ ಕಿಲಾಡಿಗಳು' ಯಾರ್ಯಾರು.?

ಉದಯ ಕಾಮಿಡಿ ತಂಡದ ನಟರು ಮಕ್ಕಳಂತೆ ನಟಿಸಿ ನಗುವಿನ ಕಚಗುಳಿ ಇಡಲಿದ್ದಾರೆ. ಶ್ರೀಕಂಠ, ಕೆಂಪೇಗೌಡ, ಕೃಷ್ಣ, ಶಶಿಕುಮಾರ, ದೀಪಾ, ದಿವ್ಯ, ರಾಜೇಶ್ವರಿ ಮತ್ತು ಕೃತಿಕಾ 'ಪ್ರಚಂಡ ಕಿಲಾಡಿಗಳು' ಆಗಿದ್ದು, ಶೋ ಸಾರಥ್ಯವನ್ನು ಸುನೇತ್ರ ಪಂಡಿತ್ ವಹಿಸಿಕೊಂಡಿದ್ದಾರೆ. ಇವರೆಲ್ಲರ ಜೊತೆಗೆ ಕಿರುತೆರೆ ಹಾಗೂ ಬೆಳ್ಳಿತೆರೆಯ ಕಲಾವಿದರೂ ಕೂಡ ಈ ಶೋನಲ್ಲಿ ಭಾಗವಹಿಸಲಿದ್ದಾರೆ.

ಪ್ರಸಾರ ಯಾವಾಗ.?

ಪ್ರತಿ ಶನಿವಾರ ಹಾಗೂ ಭಾನುವಾರ ಬೆಳಗ್ಗೆ 8 ಗಂಟೆಗೆ 'ಪ್ರಚಂಡ ಕಿಲಾಡಿಗಳು' ಕಾರ್ಯಕ್ರಮ 'ಉದಯ ಕಾಮಿಡಿ' ವಾಹಿನಿಯಲ್ಲಿ ಪ್ರಸಾರ ಆಗಲಿದೆ.

English summary
Prachanda Khiladigalu: New Comedy show will be aired in Udaya Comedy on every Saturday and Sunday at 8 AM

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada