ಡೈನಾಮಿಕ್ ಪ್ರಿನ್ಸ್ ಹುಟ್ಟುಹಬ್ಬಕ್ಕೆ ಬಂದ ವಿಶೇಷ ಪೋಸ್ಟರ್ ಗಳು
ನಟ ಪ್ರಜ್ವಲ್ ದೇವರಾಜ್ ನಾಳೆ (ಜುಲೈ 4) ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷವಾಗಿ ಅವರ ಮುಂದಿನ ಚಿತ್ರಗಳು ಪೋಸ್ಟರ್ ಗಳು ಬಿಡುಗಡೆಯಾಗಿವೆ.
'ಜಂಟಲ್ ಮ್ಯಾನ್', 'ಇನ್ಸ್ ಪೆಕ್ಟರ್ ವಿಕ್ರಂ', 'ಅರ್ಜುನ್ ಗೌಡ' ಹಾಗೂ ಇನ್ನು ಹೆಸರಿಡದ ಒಂದು ಸಿನಿಮಾ ಅವರ ಮುಂದಿನ ಚಿತ್ರಗಳಾಗಿವೆ. ಈ ಪೈಕಿ ಮೂರು ಚಿತ್ರದ ಪೋಸ್ಟರ್ ಗಳು ಹೊರಬಂದಿದೆ.

'ಇನ್ಸ್ ಪೆಕ್ಟರ್ ವಿಕ್ರಂ' ಸಿನಿಮಾದ ಪೋಸ್ಟರ್ ತುಂಬ ಚೆನ್ನಾಗಿದೆ. ಪೊಲೀಸ್ ಸಮವಸ್ತ್ರ ತೊಟ್ಟು ಖದರ್ ಆಗಿ ಪ್ರಜ್ವಲ್ ಪೋಸ್ ನೀಡಿದ್ದಾರೆ. ಶ್ರೀ ನರಸಿಂಹ ಈ ಸಿನಿಮಾದ ನಿರ್ದೇಶಕ ಮಾಡುತ್ತಿದ್ದಾರೆ. ರಮೇಶ್ ಈ ಸಿನಿಮಾದಲ್ಲಿ ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಪಾತ್ರದಲ್ಲಿ ದರ್ಶನ್ ಕೂಡ ಇರಲಿದ್ದಾರೆ.

'ಜಂಟಲ್ ಮ್ಯಾನ್' ಸಿನಿಮಾದ ಪೋಸ್ಟರ್ ಕೂಡ ಇಂದು ರಿಲೀಸ್ ಆಗಿದೆ. ಜದೇಶ್ ಕುಮಾರ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಗುರು ದೇಶಪಾಂಡೆ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

ಇತ್ತೀಚಿಗಷ್ಟೆ ನಿರ್ದೇಶಕ ಖದರ್ ಕುಮಾರ್ ಒಂದು ಸಿನಿಮಾವನ್ನು ಪ್ರಜ್ವಲ್ ದೇವರಾಜ್ ಗೆ ಮಾಡುವ ಸುದ್ದಿ ಬಂದಿತ್ತು. ಈ ಸಿನಿಮಾದ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಪೋಸ್ಟರ್ ಮೂಲಕ ತಮ್ಮ ನಾಯಕನಿಗೆ ವಿಶ್ ಮಾಡಲಿದೆ. 'ಖದರ್' ಸಿನಿಮಾ ಮಾಡಬೇಕಿದ್ದ ಕುಮಾರ್ ಅದಕ್ಕೂ ಮುಂಚೆ ಈ ಚಿತ್ರ ಶುರು ಮಾಡಿದ್ದಾರೆ.
ಈ ಮೂರು ಸಿನಿಮಾಗಳ ಹೊರತಾಗಿ ನಾಳೆ ಕೂಡ ಪ್ರಜ್ವಲ್ ಮುಂದಿನ ಸಿನಿಮಾಗಳು ಪೋಸ್ಟರ್ ಗಳು ಬಿಡುಗಡೆಯಾಗಬಹುದು.


Click it and Unblock the Notifications











