»   » 'ಬಿಗ್ ಬಾಸ್' ಫಿನಾಲೆಯಲ್ಲಿ ಕನ್ನಡಿಗರ ಮನಗೆದ್ದ ತಂದೆ-ಮಗ!

'ಬಿಗ್ ಬಾಸ್' ಫಿನಾಲೆಯಲ್ಲಿ ಕನ್ನಡಿಗರ ಮನಗೆದ್ದ ತಂದೆ-ಮಗ!

Posted By:
Subscribe to Filmibeat Kannada

'ಬಿಗ್ ಬಾಸ್' ಗೆದ್ದ ನಂತರ ನಾವು ಅದು ಮಾಡ್ತೀವಿ, ಇದು ಮಾಡ್ತೀವಿ ಅಂತ ಅಂದುಕೊಳ್ಳವವರು ಹೆಚ್ಚು. ಅದನ್ನ ನಾವು ಪ್ರತಿವರ್ಷವೂ ಸ್ವರ್ಧಿಗಳು ಹೇಳ್ತಾನೆ ಇರ್ತಾರೆ, ನಾವು ಕೇಳ್ತಾನೆ ಇರ್ತೀವಿ. ಆದ್ರೆ, ಈ ಬಾರಿಯ 'ಬಿಗ್ ಬಾಸ್' ವಿನ್ನರ್ ಆದ ಪ್ರಥಮ್ ಅಂದುಕೊಂಡಿದ್ದು ಅದಕ್ಕಿಂತ ಹೆಚ್ಚು.

ಯಾವಾಗಲೂ ಪ್ರಥಮ್ ಹೇಳಿಕೊಂಡು ಬರುತ್ತಿದ್ದರು. ''ಇದು ನನ್ನ ಗೆಲುವಲ್ಲ, ಕನ್ನಡಿಗರ ಗೆಲವು'' ಅಂತ. ಆದ್ರೆ, ಇದನ್ನ ಬರಿ ಮಾತಿಗೆ ಮಾತ್ರ ಸೀಮಿತಗೊಳಿಸದೆ, ಕಾರ್ಯರೂಪಕ್ಕೆ ತರುವ ಸೂಚನೆ ಕೊಟ್ಟಿದ್ದಾರೆ. ['ಬಿಗ್ ಬಾಸ್'ನಲ್ಲಿ 'ಪ್ರಥಮ್' ಗೆದ್ದ 50 ಲಕ್ಷ ರೈತರಿಗೆ, ಯೋಧರಿಗೆ ಮೀಸಲು!]

ಇದಕ್ಕೆ ಪ್ರಥಮ್ ಅವರ ತಂದೆ ಮಲ್ಲಣ್ಣ ಕೂಡ ಸಾಥ್ ಕೊಟ್ಟಿದ್ದಾರೆ. ಹೀಗಾಗಿ, ತಂದೆ-ಮಗ ಇಬ್ಬರು ಕನ್ನಡಿಗರ ಮನಗೆದ್ದಿದ್ದಾರೆ.

'ಬಿಗ್ ಬಾಸ್' ವೇದಿಕೆಯಲ್ಲಿ ತಂದೆ-ಮಗನ ದೃಢ ನಿರ್ಧಾರ

ಒಂದು ಆಟದಲ್ಲಿ 50 ಲಕ್ಷ ಹಣವನ್ನ ಗೆದ್ದರೇ, ಅದನ್ನ ಹೇಗೆ ಖರ್ಚು ಮಾಡಬೇಕು, ಒಂದು ಮನೆ ಕಟ್ಬೇಕು, ಕಾರ್ ತಗೋಬೇಕು, ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಆಲೋಚನೆ ಬರುವುದು ಸಹಜ. ಆದ್ರೆ, 'ಬಿಗ್ ಬಾಸ್' ವಿನ್ನರ್ ಪ್ರಥಮ್ ಮತ್ತು ಅವರ ತಂದೆ ಮಲ್ಲಣ್ಣ ಈ ವಿಚಾರದಲ್ಲಿ ವಿಶೇಷವಾಗಿ ನಿಲ್ಲುತ್ತಾರೆ.

ಪ್ರಥಮ್ ಹೇಳಿದ್ದೇನು?

''ಈ ಬಿಗ್ ಬಾಸ್ ನಲ್ಲಿ ಗೆದ್ದ 50 ಲಕ್ಷ ಹಣವನ್ನ ನಾನು ಮುಟ್ಟಬಾರದು, ಒಂದೊಳ್ಳೆ ಕೆಲಸ ಮಾಡಬೇಕು ಅಂತ ಡಿಸೈಡ್ ಮಾಡಿದ್ದೀನಿ'' [ಟ್ವಿಟ್ಟರ್ ನಲ್ಲಿ ಸೂಪರ್ ಸ್ಟಾರ್ ಆದ 'ಬಿಗ್ ಬಾಸ್' ವಿನ್ನರ್ ಪ್ರಥಮ್]

'ಒಳ್ಳೆ ಹುಡುಗನ' 50 ಲಕ್ಷದ ಯೋಜನೆ!

ಟಿ.ನರಸಿಪುರ, ಕೊಳ್ಳೆಗಾಲ ಬಳಿ ಇರುವ ಬಡ ಹೆಣ್ಣು ಮಕ್ಕಳ ಮದುವೆ ಸಹಾಯಕ್ಕೆ 5 ಲಕ್ಷ ಹಾಗೂ ಮಹದೇಶ್ವರ ಬೆಟ್ಟದ ಬಳಿ ಇರುವ ಮನೆಗಳಿಗೆ ವಿದ್ಯುತ್ ವ್ಯವಸ್ಥೆಗೆ 5ಲಕ್ಷ, ಉಳಿದ ಹಣವನ್ನ ನನ್ನ ಇಲ್ಲಿಯವರೆಗೂ ಕರೆದುಕೊಂಡು ಬಂದ ಜನಗಳಿಗೆ ಕೊಡ್ಬೇಕು ಎಂದು ನಿರ್ಧಾರ ಮಾಡಿದ್ದಿನಿ ಎಂದು ಪ್ರಥಮ್ ಹೇಳಿದರು. ['ಲಾರ್ಡ್' ಪ್ರಥಮ್ ಸರ್ ಮಾಡಿರುವ ದಾಖಲೆ ಅಂತಿಂಥದ್ದಲ್ಲ.!]

ಮಗನ ಆಶಯದ ಜೊತೆ ಮಲ್ಲಣ್ಣ ಹೆಜ್ಜೆ!

ಪ್ರಥಮ್ ತಮ್ಮ ನಿರ್ಣಯವನ್ನ ಹೇಳುತ್ತಿದ್ದಂತೆ, ಮತ್ತೊಂದೆಡೆ ಮಲ್ಲಣ್ಣ ಅವರು ''ದೇಶ ಕಾಯೋ ಸೈನಿಕರಿಗೆ ಕೊಡಬೇಕು, ಹುತಾತ್ಮರಾದ ರೈತರ ಕುಟುಂಬಕ್ಕೆ ಕೊಡಬೇಕು. ನಿನ್ನ ಅಭ್ಯುದಯಕ್ಕೆ ಏನೂ ಬೇಕೋ ನಾನು ಮಾಡಿಕೊಡ್ತೀನಿ'' ಎಂದು ಮಗನ ಆಶಯದ ಜೊತೆ ಹೆಜ್ಜೆ ಹಾಕಿದರು.

ರೈತ-ಸಿಪಾಯಿಗಳಿಗೆ ಮಿಡಿಯಿತು ಅಪ್ಪ-ಮಗನ ಮನ

ಅಪ್ಪ-ಮಗನ ಈ ದೃಢ ನಿರ್ದಾರಕ್ಕೆ 'ಬಿಗ್ ಬಾಸ್' ವೇದಿಕೆಯಲ್ಲಿದ್ದ ಸುದೀಪ್ ಮಾತ್ರವಲ್ಲ, ಅಲ್ಲಿದ್ದ ಎಲ್ಲರೂ ಸಂತಸಗೊಂಡರು.['ಬಿಗ್ ಬಾಸ್' ರನ್ನರ್ ಕೀರ್ತಿಗೆ 10ಲಕ್ಷ ಕೊಟ್ಟ ಕಿಚ್ಚ ಸುದೀಪ್!]

ಕನ್ನಡಿಗರ ಮನ ಗೆದ್ದ ಪ್ರಥಮ್-ಮಲ್ಲಣ್ಣ

ಈ ಮೂಲಕ ಪ್ರತಿ ಬಾರಿಯೂ ''ಇದು ನನ್ನ ಗೆಲುವಲ್ಲ, ಕನ್ನಡಿಗರ ಗೆಲವು'' ಅಂತ ಪ್ರಥಮ್ ಹಾಗೂ ಅವರ ತಂದೆ ಮಲ್ಲಣ್ಣ ಇಬ್ಬರು ಕರ್ನಾಟಕ ಜನತೆಯ ಮನಗೆದ್ದಿದ್ದರು.

English summary
BiggBoss Winner Pratham and His Father Taken Good Decision on BiggBoss Kannada 4 Finale. Pratham Donates his Entire Prize Money 50 Lakh for Farmers and Martyrs And His father support to him

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada