»   » ಪ್ರಥಮ್ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದೇಕೆ.? ಸ್ಫೋಟಕ ಗುಟ್ಟು ಈಗ ರಟ್ಟು.!

ಪ್ರಥಮ್ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದೇಕೆ.? ಸ್ಫೋಟಕ ಗುಟ್ಟು ಈಗ ರಟ್ಟು.!

Posted By:
Subscribe to Filmibeat Kannada

'ಬಿಗ್ ಬಾಸ್' ಕಾರ್ಯಕ್ರಮ ಗೆದ್ದ ಮೇಲೆ ಹೊಸ ಹೊಸ ಸಿನಿಮಾಗಳಿಗೆ ಸಹಿ ಹಾಕಿ, ಎಲ್ಲೇ ಹೋದರೂ-ಬಂದರೂ ಫೇಸ್ ಬುಕ್ ಲೈವ್ ಮಾಡಿಕೊಂಡು ಜಾಲಿ ಆಗಿ ಇದ್ದ ಪ್ರಥಮ್ ಅದೊಂದು ದಿನ ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಯತ್ನಿಸಿದರು.

''ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಗೆದ್ದ ಹಣವನ್ನ ಸಾಮಾಜಿಕ ಕೆಲಸಗಳಿಗೆ ಮೀಸಲಿಡುತ್ತೇನೆ ಎಂದು ಹೇಳಿದ್ದ ಪ್ರಥಮ್, ಆಡಿದ ಮಾತನ್ನ ಉಳಿಸಿಕೊಂಡಿಲ್ಲ'' ಎಂದು ಮಾಧ್ಯಮಗಳಲ್ಲಿ ಅಪಪ್ರಚಾರ ಆಗಿದ್ರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಪ್ರಥಮ್ ನಿದ್ರೆ ಮಾತ್ರೆ ಸೇವಿಸಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.

ಆದ್ರೆ, ಪ್ರಥಮ್ ಹಾಗೆ ನಿದ್ರೆ ಮಾತ್ರೆ ಸೇವಿಸಲು ಬರೀ ಮಾಧ್ಯಮದ ಅಪಪ್ರಚಾರ ಮಾತ್ರ ಕಾರಣವಲ್ಲ. ಮತ್ತೊಂದು ಬಲವಾದ ಕಾರಣವೂ ಇದೆ. ಆ ಸ್ಫೋಟಕ ಗುಟ್ಟನ್ನ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಪ್ರಥಮ್ ರಟ್ಟು ಮಾಡಿದರು. ಮುಂದೆ ಓದಿರಿ....

'ದೇವ್ರವ್ನೆ ಬುಡು ಗುರು' ಹಾರ್ಡ್ ಡಿಸ್ಕ್ ಕಳವು

ಅಕುಲ್ ಬಾಲಾಜಿ ನಾಯಕನಾಗಿರುವ 'ದೇವ್ರವ್ನೆ ಬುಡು ಗುರು' ಚಿತ್ರಕ್ಕೆ ಪ್ರಥಮ್ ಡೈರೆಕ್ಟರ್ ಅನ್ನೋದು ನಿಮಗೆ ಗೊತ್ತು ತಾನೇ. 'ಬಿಗ್ ಬಾಸ್' ಮನೆಗೆ ಕಾಲಿಡುವ ಮುನ್ನ, ಅದೇ 'ದೇವ್ರವ್ನೆ ಬುಡು ಗುರು' ಚಿತ್ರದ ಚಿತ್ರೀಕರಣವಾಗಿದ್ದ ಹಾರ್ಡ್ ಡಿಸ್ಕ್ ನ ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ಪ್ರಥಮ್ ಬಿಟ್ಟು ಹೋಗಿದ್ದರಂತೆ. ಆದ್ರೆ, 'ಬಿಗ್ ಬಾಸ್' ಮನೆಯಿಂದ ವಾಪಸ್ ಬರುವಷ್ಟರಲ್ಲಿ ಆ ಹಾರ್ಡ್ ಡಿಸ್ಕ್ ಕಳೆದು ಹೋಗಿತ್ತು.

ಪ್ರಥಮ್ ಮೇಲೆ ಹೊರೆ

'ದೇವ್ರವ್ನೆ ಬುಡು ಗುರು' ಹಾರ್ಡ್ ಡಿಸ್ಕ್ ಕಳ್ಳತನ ಆಗಿದ್ದರಿಂದ, ಪ್ರಥಮ್ ತಲೆ ಮೇಲೆ ಏಕಾಏಕಿ 25 ರಿಂದ 35 ಲಕ್ಷ ಹೊರೆ ಬಿದ್ದಂತೆ ಆಯ್ತಂತೆ. ಹಾಗಂತ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಪ್ರಥಮ್ ಹೇಳಿಕೊಂಡಿದ್ದಾರೆ.

ಅಕುಲ್ ಗೆ ಮ್ಯಾಟರ್ ಗೊತ್ತಿರಲಿಲ್ಲ.!

ಹಾರ್ಡ್ ಡಿಸ್ಕ್ ಕಳವು ಆಗಿದ್ದರೂ, 'ದೇವ್ರವ್ನೆ ಬುಡು ಗುರು' ಚಿತ್ರದ ನಾಯಕ ಅಕುಲ್ ಬಾಲಾಜಿಗೆ ಮ್ಯಾಟರ್ ಗೊತ್ತಿರಲಿಲ್ಲ. ಅಕುಲ್ ಬಳಿ ಪ್ರಥಮ್ ಹೇಳಿಕೊಂಡಿರಲಿಲ್ಲ. ಅದಕ್ಕೆ ಕಾರಣ ಕೇಳಿದರೆ...

ಡಿಪ್ರೆಸ್ ಆಗಿದ್ದ ಪ್ರಥಮ್...

''ಆ ಹಂತದಲ್ಲಿ ತುಂಬಾ ಡಿಪ್ರೆಸ್ ಆದೆ. ಗಾಬರಿ ಆದೆ. ಮಾನಸಿಕವಾಗಿ ಕುಗ್ಗಿದ್ದೆ. ಹೀಗಾಗಿ ಯಾರಿಗೂ ಹೇಳಲಿಲ್ಲ'' ಎಂದಿದ್ದಾರೆ ಪ್ರಥಮ್.

ಅಲ್ಲಿಗೆ, 'ದೇವ್ರವ್ನೆ ಬುಡು ಗುರು' ಚಿತ್ರದ ಕಥೆ.?

ಚಿತ್ರೀಕರಣ ನಡೆದಿರುವ 'ದೇವ್ರವ್ನೆ ಬುಡು ಗುರು' ಹಾರ್ಡ್ ಡಿಸ್ಕ್ ಕಳೆದು ಹೋಗಿರುವುದರಿಂದ ಸಿನಿಮಾ ಬಿಡುಗಡೆ ಸಾಧ್ಯವಿಲ್ಲ ಎಂದು ಅಂದುಕೊಳ್ಳುವಂತಿಲ್ಲ. ಯಾಕಂದ್ರೆ, ಪ್ರಥಮ್ ಗೆ ಸ್ವಲ್ಪ ಬ್ಯಾಕಪ್ ಸಿಕ್ಕಿದೆ.

ಪ್ರಥಮ್ ಕಷ್ಟ ಕೇಳುವವರು ಯಾರು.?

''ಬಿಗ್ ಬಾಸ್' ಗೆದ್ದ ಮೇಲೆ ನಾನು ದಿನಗಳನ್ನ ಹೇಗೆ ಕಳೆದೆ ಅನ್ನೋದು ನನಗೆ ಮಾತ್ರ ಗೊತ್ತು. ಅಷ್ಟು ಕಷ್ಟ ಇತ್ತು. ನನ್ನ ಅಕೌಂಟ್ ನಲ್ಲಿ ಅಷ್ಟೊಂದು ದುಡ್ಡು ಇತ್ತು (ಬಿಗ್ ಬಾಸ್ ಗೆದ್ದ ಹಣ). ಆದರೆ ಊಟ ತಿಂಡಿಗೆ ನನ್ನ ಬಳಿ ದುಡ್ಡು ಇರಲಿಲ್ಲ'' - ಪ್ರಥಮ್

ಮಾನಸಿಕ ಖಿನ್ನತೆ

ಒಂದ್ಕಡೆ ನಿರ್ದೇಶನದ ಮೊದಲ ಸಿನಿಮಾದ ಹಾರ್ಡ್ ಡಿಸ್ಕ್ ಕಳವು. ಇನ್ನೊಂದು ಕಡೆ ಅಪಪ್ರಚಾರ. ಇದೆಲ್ಲದರಿಂದ ಖಿನ್ನತೆಗೆ ಒಳಗಾಗಿದ್ದರಂತೆ ಪ್ರಥಮ್.

ಆತ್ಮಹತ್ಯೆ ಘಟನೆ ನಡೆದ ಬಳಿಕ...

''ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಬಂದ್ಮೇಲೆ ಮನೆಯಿಂದ ನನ್ನನ್ನ ಖಾಲಿ ಮಾಡಿಸಿದರು. ಇರೋಕೆ ಮನೆ ಕೂಡ ಇರಲಿಲ್ಲ. ಹೋಟೆಲ್ ಗೆ ಹೋಗಿ ತಿನ್ನೋಣ ಅಂದರೆ ತಲೆ ಎತ್ತಿ ಓಡಾಡೋಕೆ ಆಗುತ್ತಿರಲಿಲ್ಲ. ಆ ಒಂದು ಘಟನೆಯಿಂದ ನನಗೆ ತುಂಬಾ ಡಿಸ್ಟರ್ಬ್ ಆಯ್ತು. ಸಂಜನಾ, ಕೀರ್ತಿ ಕೂಡ ಆಸ್ಪತ್ರೆಗೆ ಬಂದಿದ್ದರು. ಆದ್ರೆ, ನನ್ನ ಕಷ್ಟವನ್ನ ಹೇಳಿಕೊಳ್ಳುವ ಧೈರ್ಯ ನನಗೆ ಇರಲಿಲ್ಲ. ಬಹಳ ಕಷ್ಟ ಪಟ್ಟೆ ನಾನು'' ಎಂದರು ಪ್ರಥಮ್.

English summary
'Olle Huduga' Pratham reveals the reason behind his suicide attempt 'Super Talk Time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada